ವಿರಾಟ್ ಗೆ ಉಳಿದಿರೋದು ನಾಲ್ಕು ದಿನ ಮಾತ್ರ.. ಶತಕ ಸಿಡಿಸಲೇಬೇಕು..

ವಿರಾಟ್ ಗೆ ಉಳಿದಿರೋದು ನಾಲ್ಕು ದಿನ ಮಾತ್ರ.. ಶತಕ ಸಿಡಿಸಲೇಬೇಕು.

ವಿಶ್ವ ಕ್ರಿಕೆಟ್ ನ ರನ್ ರಾಕ್ಷಸ ವಿರಾಟ್ ಕೊಹ್ಲಿ ಬ್ಯಾಟ್ ಸದ್ಯ ಮೌನವಾಗಿದೆ. ಹಲವು ವರ್ಷಗಳ ಕಾಲ ತಮ್ಮ ಬ್ಯಾಟಿಂಗ್ ವೈಭವದ ಮೂಲಕ ಕ್ರಿಕೆಟ್ ದುನಿಯಾವನ್ನು ಆಳಿದ ಕಿಂಗ್ ಕೊಹ್ಲಿ, ಈಗ ರನ್ ಬರ ಎದುರಿಸುತ್ತಿದ್ದಾರೆ.

ಎದುರಾಳಿಯ ಸವಾಲು ಎಷ್ಟೇ ಇರಲಿ, ತ್ರಿವಿಕ್ರಮನಂತೆ ಬ್ಯಾಟ್ ಝಳಪಿಸುತ್ತಿದ್ದ ವಿರಾಟ್, ರನ್ ಸುನಾಮಿಯನ್ನೇ ಎಬ್ಬಿಸುತ್ತಿದ್ದರು. ಆದ್ರೆ ಕಳೆದ ಎರಡು ವರ್ಷಗಳಿಂದ ವಿರಾಟ್ ರ ಬ್ಯಾಟಿಂಗ್ ಘರ್ಜನೆ ನಿಂತು ಹೋಗಿದೆ.

ಬ್ಯಾಟಿಂಗ್ ಮೂಲಕವೇ ಸಾಕಷ್ಟು ದಾಖಲೆಗಳನ್ನು ಬರೆದಿರುವ ವಿರಾಟ್ ಕೊಹ್ಲಿ, 2020 ಮತ್ತು 2021 ಅತ್ಯಂತ ಕೆಟ್ಟ ವರ್ಷ ಅಂತಾನೇ ಹೇಳಬಹುದು.

ಕಳೆದ ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 11 ವರ್ಷಗಳ ಬಳಿಕ ಶತಕವಿಲ್ಲದ ವರ್ಷವನ್ನು ಕಳೆದಿದ್ದ ವಿರಾಟ್, ಮತ್ತೆ ಇದೀಗ ಅಂತಹದ್ದೆ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಸದ್ಯ 2021ರ ಕೊನೆಯ ತಿಂಗಳು ಚಾಲ್ತಿಯಲ್ಲಿದೆ. ಕಳೆದ 11 ತಿಂಗಳಿನಲ್ಲಿ ಒಂದೂ ಶತಕ ಸಿಡಿಸದೆ ಇದ್ದ ವಿರಾಟ್, ಕೀವಿಸ್ ವಿರುದ್ಧವೂ ಶತಕದ ಸಂಭ್ರಮ ಆಚರಿಸಲಿಲ್ಲ.

ಆ ಬರ ನೀಗಿಸಿಕೊಳ್ಳುವುದಕ್ಕೆ ವಿರಾಟ್ ಗೆ ಇನ್ನ ಉಳಿದಿರೋದು ಕೇವಲ ನಾಲ್ಕು ದಿನಗಳು ಮಾತ್ರ.

ಹೌದು..! ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯಕ್ಕಾಗಿ ವಿರಾಟ್ ಅಭಿಮಾನಿಗಳು ಕಾದುಕುಳಿತ್ತಿದ್ದರು. ಆಫ್ರಿಕಾ ನೆಲದಲ್ಲಿ ಕೊಹ್ಲಿ ಸೆಂಚೂರಿ ಸಿಡಿಸಿಯೇ ತೀರುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು.

ಆದ್ರೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಮತ್ತೆ ವಿಫಲರಾಗಿದ್ದಾರೆ. ಚೇತೇಶ್ವರ್ ಪೂಜಾರ ಔಟ್ ಆದ ಬಳಿಕ ಕ್ರೀಸ್ ಗೆ ಬಂದ ವಿರಾಟ್ ಕ್ಲಾಸಿ ಹೊಡೆತಗಳ ಮೂಲಕ ಗಮನ ಸೆಳೆದರು.

ಯಾವುದೇ ಸಮಸ್ಯೆ ಇಲ್ಲದೇ ನಿರಾಯಾಸವಾಗಿ ಬ್ಯಾಟ್ ಬೀಸುತ್ತಿದ್ದರು. ಇನ್ನೇನು ವಿರಾಟ್ ಸೆಟ್ ಆಗಿದ್ದಾರೆ ಅನುವಷ್ಟರಲ್ಲಿ ಬೇಡದ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದರು.

ಇದರೊಂದಿಗೆ ವಿರಾಟ್ ಅಭಿಮಾನಿಗಳು ನಿರಾಸೆ ಅನುಭವಿಸುವಂತೆ ಆಯಿತು.

ಇನ್ನು ಈ ವರ್ಷದಲ್ಲಿ ವಿರಾಟ್ ಶತಕದ ಬರ ನೀಗಿಸಿಕೊಳ್ಳಬೇಕಾದರೇ ಇನ್ನುಳಿದ ನಾಲ್ಕು ದಿನ ಗಳಲ್ಲಿ ಸೆಂಚೂರಿ ಸಿಡಿಸಬೇಕಾಗುತ್ತದೆ.

ಇಲ್ಲವಾದರಲ್ಲಿ ಸತತ ಎರಡನೇ ವರ್ಷವೂ ಶತಕ ವಿಲ್ಲದ ವರ್ಷವನ್ನು ಕಳೆಯಬೇಕಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

Ravi Shastri: ಧೋನಿ ಟೆಸ್ಟ್ ನಿವೃತ್ತಿ ಬಗ್ಗೆ ಮೌನ ಮುರಿದ ರವಿ ಶಾಸ್ತ್ರಿ: ಅಂದು ಪಂದ್ಯ ಮುಗಿದ ಬಳಿಕ ಆಗಿದ್ದೇನು?

Mon Dec 27 , 2021
MS Dhoni: ಧೋನಿ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೊಷಿಸಿದಾಗ ಅವರು ಆಡಿದ್ದು ಕೇವಲ 90 ಟೆಸ್ಟ್‌ ಪಂದ್ಯಗಳನ್ನು ಮಾತ್ರ. ಸದ್ಯ ಈ ಬಗ್ಗೆ ಟೀಮ್ ಇಂಡಿಯಾದ ಮಾಜಿ ಮುಖ್ಯ ಕೋಚ್‌ ರವಿ ಶಾಸ್ತ್ರಿ ಮಾತನಾಡಿದ್ದಾರೆ. ಅವರು ಏನು ಹೇಳಿದ್ದಾರೆ ಕೇಳಿ.ಮಹೇಂದ್ರ ಸಿಂಗ್ ಧೋನಿಯನ್ನು (MS Dhoni) ವಿಶ್ವದ ಶ್ರೇಷ್ಠ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಟೀಮ್ ಇಂಡಿಯಾಗೆ (Team India) ಐಸಿಸಿ ಆಯೋಜಿತ ಮೂರು ಟೂರ್ನಿಗಳಲ್ಲಿ ಚಾಂಪಿಯನ್ಸ್‌ ಪಟ್ಟ ಗೆದ್ದುಕೊಟ್ಟಿದ್ದಾರೆ. ತಮ್ಮ […]

Advertisement

Wordpress Social Share Plugin powered by Ultimatelysocial