ವಿಷ್ಣುವರ್ಧನ್ ರವರ 13ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಬೃಹತ್ ಅರೋಗ್ಯ ತಪಾಸಣೆ

ಕೊಳ್ಳೇಗಾಲದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಡಾ. ವಿಷ್ಣು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಡಾ. ವಿಷ್ಣುವರ್ಧನ್ ರವರ 13ನೇ ವರ್ಷದ ಪುಣ್ಯ ಸ್ಮರಣೆ ಹಾಗೂ ವಿಷ್ಣುವರ್ಧನ್ ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿ 50ವರ್ಷ ಪೂರೈಸಿದ ಹಿನ್ನಲೆ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಯಿತುಕಾರ್ಯಕ್ರಮದಲ್ಲಿ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷರಾದ ಎಂ.ರಾಮಚಂದ್ರರವರು ಮಾತಾನಾಡಿ ಟ್ರಸ್ಟ್ ಸಮಾಜ ಸೇವೆ ಕೆಲಸಕ್ಕೆ ಧನ್ಯವಾದ ತಿಳಿಸಿದರು. ಟ್ರಸ್ಟ್ ಇನ್ನೂ ಹೆಚ್ಚು ಹೆಚ್ಚು ಸೇವೆ ಮಾಡುವ ಶಕ್ತಿಯನ್ನು ಭಗವಂತ ಕೊಡಲಿ ಎಂದು ಹಾರೈಸಿದರುಕಾರ್ಯಕ್ರಮದಲ್ಲಿ ಪ್ರಲಕ್ಷ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಮಾಡಲಾಯಿತು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಲಾಯಿತು.ಗಣ್ಯರಿಗೆ ಸನ್ಮಾನ ಹಾಗೂ ರಸ ಮಂಜರಿ ಕಾರ್ಯಕ್ರಮ ನಡೆಯಿತುಪ್ರೊಫೆಷರ್ ನಂಜುಂಡಸ್ವಾಮಿರವರು ಮಾತನಾಡಿ ವಿಷ್ಣುವರ್ಧನ್ ರವರ ಸಿನಿಮಾ ಹಾಗೂ ಚಿತ್ರಗೀತೆಗಳು ಇಂದಿಗೂ ಎಲ್ಲಾರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದೆ ಎಂದರುನಂತರ ಟ್ರಸ್ಟ್ ನ ಅಧ್ಯಕ್ಷ ಆರ್. ಬಾಲರಾಜು ಮಾತನಾಡಿ ವಿಷ್ಣುವರ್ಧನ್ ರವರ ಪುಣ್ಯ ಸ್ಮರಣೆ ಕಾರ್ಯಕ್ರಮ ಪ್ರತಿ ವರ್ಷವೂ ಮಾಡಿಕೊಂಡು ಬರುತ್ತಿದ್ದೇವೆ.ಎಲ್ಲಾರ ಸಹಕಾರದಿಂದ ಸಮಾಜ ಸೇವೆ ಚೆನ್ನಾಗಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುಸ್ಲಿಂ ವಿದ್ಯಾರ್ಥಿನಿಯರಿಗೆ ತಾರತಮ್ಯ: ವರದಿ.

Tue Jan 10 , 2023
ಕರ್ನಾಟಕದಲ್ಲಿ ಹಿಜಾಬ್ ವಿವಾದ ನಡೆದು ಒಂದು ವರ್ಷವೇ ಕಳೆದಿದೆ. ನಂತರ ಅದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಹಿಜಾಬ್ ವಿವಾದ ನಂತರ ಮುಸ್ಲಿಂ ವಿದ್ಯಾರ್ಥಿನಿಯರು, ಯುವತಿಯರಿಗೆ ತಾರತಮ್ಯ ತೋರಲಾಗುತ್ತಿದೆ ಎಂಬ ಅಂಶ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ ಕರ್ನಾಟಕ(PUCL-K) ವರದಿಯಿಂದ ತಿಳಿದುಬಂದಿದೆ. ಬೆಂಗಳೂರು: ಕರ್ನಾಟಕದಲ್ಲಿ ಹಿಜಾಬ್ ವಿವಾದ ನಡೆದು ಒಂದು ವರ್ಷವೇ ಕಳೆದಿದೆ. ನಂತರ ಅದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಹಿಜಾಬ್ ವಿವಾದ ನಂತರ ಮುಸ್ಲಿಂ ವಿದ್ಯಾರ್ಥಿನಿಯರು, ಯುವತಿಯರಿಗೆ ತಾರತಮ್ಯ […]

Advertisement

Wordpress Social Share Plugin powered by Ultimatelysocial