ಮುಸ್ಲಿಂ ವಿದ್ಯಾರ್ಥಿನಿಯರಿಗೆ ತಾರತಮ್ಯ: ವರದಿ.

ರ್ನಾಟಕದಲ್ಲಿ ಹಿಜಾಬ್ ವಿವಾದ ನಡೆದು ಒಂದು ವರ್ಷವೇ ಕಳೆದಿದೆ. ನಂತರ ಅದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಹಿಜಾಬ್ ವಿವಾದ ನಂತರ ಮುಸ್ಲಿಂ ವಿದ್ಯಾರ್ಥಿನಿಯರು, ಯುವತಿಯರಿಗೆ ತಾರತಮ್ಯ ತೋರಲಾಗುತ್ತಿದೆ ಎಂಬ ಅಂಶ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ ಕರ್ನಾಟಕ(PUCL-K) ವರದಿಯಿಂದ ತಿಳಿದುಬಂದಿದೆ. ಬೆಂಗಳೂರು: ಕರ್ನಾಟಕದಲ್ಲಿ ಹಿಜಾಬ್ ವಿವಾದ ನಡೆದು ಒಂದು ವರ್ಷವೇ ಕಳೆದಿದೆ. ನಂತರ ಅದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಹಿಜಾಬ್ ವಿವಾದ ನಂತರ ಮುಸ್ಲಿಂ ವಿದ್ಯಾರ್ಥಿನಿಯರು, ಯುವತಿಯರಿಗೆ ತಾರತಮ್ಯ ತೋರಲಾಗುತ್ತಿದೆ ಎಂಬ ಅಂಶ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ ಕರ್ನಾಟಕ(PUCL-K) ವರದಿಯಿಂದ ತಿಳಿದುಬಂದಿದೆ.
ಪಿಯುಸಿಎಲ್ -ಕೆ ತಂಡ ಇತ್ತೀಚೆಗೆ ಕರ್ನಾಟಕದ ರಾಯಚೂರು, ಉಡುಪಿ, ಹಾಸನ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಭೇಟಿ ನೀಡಿ ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ಜಿಲ್ಲಾಡಳಿತವನ್ನು ಸಂದರ್ಶನ ಮಾಡಿತ್ತು. ‘Closing the Gates of Education: Violations of Rights of Muslim Women Students’, ಎಂಬುದು ಸಂದರ್ಶನದ ಶೀರ್ಷಿಕೆ. ಶಾಲೆ-ಕಾಲೇಜುಗಳಲ್ಲಿ ತಮಗೆ ಕಿರುಕುಳ, ತಾರತಮ್ಯ ನೀಡುತ್ತಿದ್ದು ಇದರಿಂದ ಬೇಸತ್ತು ಹಲವರು ಸರ್ಕಾರಿ ಕಾಲೇಜಿನಿಂದ ಅಲ್ಪಸಂಖ್ಯಾತ ಸಮುದಾಯಗಳಿಗೆ ವರ್ಗಾವಣೆ ಮಾಡಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದ್ದಾರೆ. ಅಲ್ಪಸಂಖ್ಯಾತ ಸಮುದಾಯಗಳು, ಬಡ ಕೆಳ ವರ್ಗದ ಸಮುದಾಯಗಳು, ಆದಿವಾಸಿ ವಿದ್ಯಾರ್ಥಿನಿಯರು ತರಗತಿಗಳಲ್ಲಿ ತಮಗೆ ತೋರಿಸುತ್ತಿರುವ ತಾರತಮ್ಯಗಳ ಅನುಭವ ಹಂಚಿಕೊಂಡಿದ್ದು ಇದರಿಂದ ತಮ್ಮ ಆತ್ಮವಿಶ್ವಾಸಕ್ಕೆ ಹೇಗೆ ಧಕ್ಕೆಯುಂಟಾಗುತ್ತಿದೆ ಮತ್ತು ಉನ್ನತ ವ್ಯಾಸಂಗ ಮಾಡಬೇಕೆಂಬ ಆಸೆ, ಆಕಾಂಕ್ಷೆಗಳಿಗೆ ತೊಂದರೆಯುಂಟಾಗುತ್ತಿದೆ, ತಮ್ಮ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತಿದೆ ಎಂಬ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.
ಶಿಕ್ಷಣ ಸಂಸ್ಥೆಗಳಲ್ಲಿ ವಿಭಜನೆಯ ತಾರತಮ್ಯ ನೀತಿ ಅನುಸರಿಸಿದರೆ ವಿಭಜಕ ಸಮಾಜದ ಪ್ರವೃತ್ತಿ ಮತ್ತಷ್ಟು ಬೆಳೆಯುತ್ತದೆ ಎಂದು ವರದಿಯಿಂದ ತಿಳಿದುಬಂದಿದೆ. ನಾನು ಕಾಲೇಜು ತೊರೆದು ಹಿಜಾಬ್ ಧರಿಸಲು ಅವಕಾಶ ನೀಡುವ ಬೇರೆ ಕಾಲೇಜನ್ನು ಹುಡುಕಿದೆ. ಸರ್ಕಾರಿ ಕಾಲೇಜಿನಲ್ಲಿ ಉಚಿತ ಶಿಕ್ಷಣವಿದೆ, ಆದರೆ ಈಗ ನಾನು ಸೇರಿರುವ ಹೊಸ ಕಾಲೇಜಿನಲ್ಲಿ ಪ್ರಯಾಣ ವೆಚ್ಚವೇ ಜಾಸ್ತಿಯಾಗುತ್ತದೆ. ನನಗೆ ಎಂಎಸ್ಸಿ ಮಾಡಬೇಕೆಂದು ಆಸೆಯಿತ್ತು.ಅದೀಗ ಸಾಧ್ಯವಾಗುತ್ತಿಲ್ಲ. ನನ್ನ ಕನಸುಗಳು ನುಚ್ಚುನೂರಾಗಿದೆ ಎಂದು ವಿದ್ಯಾರ್ಥಿನಿಯೋರ್ವಳು ಸಂದರ್ಶನ ವೇಳೆ ತಮ್ಮ ಸಂಕಷ್ಟ ತೋಡಿಕೊಂಡಿದ್ದಾಳೆ. ಹಿಜಾಬ್ ವಿವಾದವಾದ ನಂತರ ಮುಸ್ಲಿಂ ಸಮುದಾಯದ ಮುಖಂಡರು, ಹಿರಿಯರ ನೆರವು, ಬೆಂಬಲವನ್ನು ಈ ವಿದ್ಯಾರ್ಥಿನಿಯರು ಕೋರುತ್ತಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೊಸ ಮೈಲಿಗಲ್ಲು ಸೃಷ್ಟಿಸಲು 'ಕಾಂತಾರ' ಮತ್ತೊಂದು ಹೆಜ್ಜೆ..

Tue Jan 10 , 2023
ಭಾರತೀಯ ಚಿತ್ರರಂಗದಲ್ಲಿ ನಮ್ಮ ರಿಷಬ್ ಶೆಟ್ಟಿ ಹೊಸ ಸೆನ್ಸೇಷನ್. ‘ಕಾಂತಾರ’ ಚಿತ್ರದ ಮೂಲಕ ದೇಶ ಮಾತ್ರವಲ್ಲ, ಇಡೀ ವಿಶ್ವವನ್ನೇ ಕರ್ನಾಟಕದತ್ತ, ತುಳುನಾಡಿನತ್ತ ತಿರುಗಿ ನೋಡುವಂತೆ ಮಾಡಿದ ಕೀರ್ತಿ ರಿಷಬ್​​ರದ್ದು!ಮೊನ್ನೆಯಷ್ಟೇ ಶತದಿನ ಪೂರೈಸಿದ ‘ಕಾಂತಾರ’ ಚಿತ್ರಕ್ಕೆ ಮತ್ತು ಅದರಲ್ಲಿ ಕೆಲಸ ಮಾಡಿದ ಕಲಾವಿದರು ಹಾಗೂ ಇಡೀ ತಂಡಕ್ಕೆ ಮತ್ತೊಂದು ಗುಡ್​ನ್ಯೂಸ್ ಸಿಕ್ಕಿದೆ. ಈಗಾಗಲೇ ಆಸ್ಕರ್​ ನಾಮನಿರ್ದೇಶನದ ರೇಸ್​​ನಲ್ಲಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಹೊಂಬಾಳೆ ಫಿಲ್ಮ್ಸ್​ ಹೊಸ ಅಪ್​ಡೇಟ್ ಕೊಟ್ಟಿದೆ.ಟ್ವೀಟ್ ಮಾಡಿರುವ […]

Advertisement

Wordpress Social Share Plugin powered by Ultimatelysocial