ವಿಟಮಿನ್ ಬಿ 12 ನಮ್ಮ ದೇಹಕ್ಕೆ ಬಹಳ ಮುಖ್ಯವಾಗಿದೆ.

ಬೆಂಗಳೂರು : ವಿಟಮಿನ್ ಬಿ 12 ನಮ್ಮ ದೇಹಕ್ಕೆ ಬಹಳ ಮುಖ್ಯವಾಗಿದೆ. ದಿನಕ್ಕೆ 2.4 ಮೈಕ್ರೋಗ್ರಾಂಗಳಷ್ಟು ವಿಟಮಿನ್ ಬಿ 12 ನಮ್ಮ ದೇಹಕ್ಕೆ ಅಗತ್ಯವಿರುತ್ತದೆ. ಆದರೆ, ಈ ಸಣ್ಣ ಪ್ರಮಾಣದ ಕೊರತೆಯು ದೇಹವನ್ನು ತೀವ್ರ ಅಪಾಯಕ್ಕೆ ತಳ್ಳುತ್ತದೆ.

ನರಮಂಡಲದ ಸಾಮಾನ್ಯ ಕಾರ್ಯಕ್ಕೆ ದೇಹಕ್ಕೆ ಅಗತ್ಯವಿರುವ 8 B ಜೀವಸತ್ವಗಳಲ್ಲಿ B12 ಒಂದಾಗಿದೆ. ವಿಟಮಿನ್ ಬಿ 12 ಮಾಂಸ, ಮೊಟ್ಟೆ ಮತ್ತು ಡೈರಿ ಉತ್ಪನ್ನಗಳಿಂದ ಮಾತ್ರ ಲಭ್ಯವಿರುತ್ತದೆ. ಏಕೆಂದರೆ ಸಸ್ಯಗಳು ಅದನ್ನು ಉತ್ಪಾದಿಸುವುದಿಲ್ಲ. ಕೆಲವೊಮ್ಮೆ ವಿಟಮಿನ್ ಬಿ 12 ಕೊರತೆಯ ಲಕ್ಷಣಗಳು ದೇಹದಲ್ಲಿ ಕಾಣಿಸಿಕೊಳ್ಳುತ್ತದೆ.

ವಿಟಮಿನ್ ಬಿ12ಹೊಂದಿರುವ ಜನರು ಕಾಲುಗಳನ್ನು ಅಗಲ ಮಾಡಿಕೊಂಡು ನಡೆಯುತ್ತಾರೆ. ಈ ರೀತಿಯ ನಡಿಗೆಯು ಬೇರೆ ಆರೋಗ್ಯ ಸಮಸ್ಯೆಗಳಲ್ಲಿ ಕೂಡಾ ಕಾಣಿಸಿಕೊಳ್ಳುತ್ತದೆ. ಆದರೆ, ವಿಟಮಿನ್ ಬಿ 12 ಕೊರತೆಯಿಂದಾಗಿ ಬಾಹ್ಯ ನರಗಳ ಮೇಲೆ ಹಾನಿ ಉಂಟಾಗಿ ಅದು ವ್ಯಕ್ತಿಯ ಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಪಾದಗಳು ಮತ್ತು ಕೈಕಾಲುಗಳು ಮರಗಟ್ಟುವಂಥಹ ಅನುಭವವಾಗುವುದು ಕೂಡಾ ಬಿ 12 ಕೊರತೆಯಿಂದಾಗಿಯೇ. ಇದಲ್ಲದೆ, ಊದಿಕೊಂಡ ನಾಲಿಗೆಯು ವಿಟಮಿನ್ ಬಿ 12 ಕೊರತೆಯ ಆರಂಭಿಕ ಸಂಕೇತವಾಗಿದೆ. ನೇರವಾದ ಉದ್ದವಾದ ಹುಣ್ಣುಗಳೊಂದಿಗೆ ಊದಿಕೊಂಡ ನಾಲಿಗೆ ವಿಟಮಿನ್ ಬಿ 12 ಕೊರತೆಯ ಸಂಕೇತವಾಗಿದೆ. ಈ ಸ್ಥಿತಿಯಲ್ಲಿ, ನಾಲಿಗೆ ಕೆಂಪು ಬಣ್ಣದಿಂದ ಕೂಡಿರುತ್ತದೆ. ಅಲ್ಲದೆ, ವಿಪರೀತ ನೋವು ಕೂಡಾ ಇರುತ್ತದೆ.

ಖಿನ್ನತೆ :
ವಿಟಮಿನ್ ಬಿ 12 ಕೊರತೆ ನರವಿಜ್ಞಾನದೊಂದಿಗೆ ಸಂಬಂಧ ಹೊಂದಿದೆ. ಈ ಅಂಶ 2018ರಲ್ಲಿ ನಡೆಸಿದ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಅದನ್ನು ಅಧ್ಯಯನ ಮಾಡಿದ ವ್ಯಕ್ತಿಯು ತನ್ನ ಸ್ಮರಣಾ ಶಕ್ತಿಯನ್ನು ಕಳೆದುಕೊಂಡಿದ್ದನಂತೆ. ಆತನಿಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವೂ ಇರಲಿಲ್ಲ ಎನ್ನಲಾಗಿದೆ. ಯೋಚನಾ ಶಕ್ತಿ ಇಲ್ಲದೆ, ಖಿನ್ನತೆತ್ಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಹೃದಯ ಬಡಿತ ಹೆಚ್ಚಾಗುವುದು :
ಅನೇಕ ಆರೋಗ್ಯ ವರದಿಗಳು ಹೇಳುವಂತೆ ಯಾವುದೇ ಕಾರಣವಿಲ್ಲದೆ ವೇಗವಾಗಿ ಹೃದಯ ಬಡಿತಹೆಚ್ಚಾಗುವುದು ದೇಹದಲ್ಲಿ ಸಾಕಷ್ಟು ವಿಟಮಿನ್ ಬಿ 12 ಇಲ್ಲದಿರುವ ಸಂಕೇತವಾಗಿದೆ. ದೇಹದಲ್ಲಿ ವಿಟಮಿನ್ ಬಿ 12 ಕೊರತೆಯಿರುವಾಗ ಹೆಚ್ಚಿನ ರಕ್ತವನ್ನು ಪಂಪ್ ಮಾಡಲು ಹೃದಯದ ಮೇಲೆ ಹೆಚ್ಚುವರಿ ಒತ್ತಡ ಬೀಳುತ್ತದೆ. ಹೀಗಾದಾಗ ಹೃದಯ ಬಡಿತ ಹೆಚ್ಚಾಗುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೂದಲು ಮತ್ತು ತ್ವಚೆಗೆ ಮನೆಮದ್ದು ಅಲೋವೆರಾ!

Tue Feb 21 , 2023
 ಅಲೋವೆರಾ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಇದು ಅನೇಕ ರೋಗಗಳನ್ನು ಗುಣಪಡಿಸಲು ಕೆಲಸ ಮಾಡುತ್ತದೆ. ಅಲೋವೆರಾವನ್ನು ಪ್ರಾಚೀನ ಕಾಲದಿಂದಲೂ ಗಿಡಮೂಲಿಕೆಯಾಗಿ ಬಳಸಲಾಗುತ್ತಿದೆ. ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಬಿ 6, ವಿಟಮಿನ್ ಬಿ 12 ಆಂಟಿ-ಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಅಲೋವೆರಾವುಸೋಡಿಯಂ, ಕಬ್ಬಿಣ, ಪೊಟ್ಯಾಸಿಯಮ್, ತಾಮ್ರ, ಮೆಗ್ನೀಸಿಯಮ್, ಸತು, ಕ್ರೋಮಿಯಂ, ಸೆಲೆನಿಯಮ್ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳಲ್ಲಿ ಸಮೃದ್ಧವಾಗಿದೆ. ಅಲೋವೆರಾದಲ್ಲಿರುವ ಪೋಷಕಾಂಶಗಳು ಚರ್ಮ, […]

Advertisement

Wordpress Social Share Plugin powered by Ultimatelysocial