3 ವರ್ಷಗಳಲ್ಲಿ 135 ದೇಶ ನೋಡಬೇಕಾ ? ಇಲ್ಲಿದೆ ಅದ್ಭುತ ಅವಕಾಶ!

ಮೂರು ವರ್ಷದಲ್ಲಿ 135 ದೇಶಗಳು, 13 ಜಗತ್ತಿನ ಅದ್ಭುತ ಸ್ಥಳಗಳ ಪರ್ಯಟನೆ ಮಾಡುವ ಪ್ಯಾಕೇಜ್‌ ಅನ್ನು ಲೈಫ್​​ ಆಯಟ್​ ಸೀ ಕ್ರೂಸಿಸ್​ ಘೋಷಣೆ ಮಾಡಿದೆ.  ಈ ಹಡುಗು ಮೂರು ವರ್ಷಗಳಲ್ಲಿ 135 ದೇಶಗಳಿಗೆ ಕರೆದುಕೊಂಡು ಹೋಗಿ ಬರುತ್ತದೆ. ಪ್ರಪಂಚಾದ್ಯಂತ ಮೂರು ವರ್ಷಗಳಲ್ಲಿ ಈ ಪ್ರಯಾಣ ಮಾಡಬಹುದಾಗಿದೆ. ಒಂದು ವರ್ಷಕ್ಕೆ ದರವನ್ನು ಕೂಡ ಇದು ನಿಗದಿ ಮಾಡಿದೆ. ಒಬ್ಬ ವ್ಯಕ್ತಿಗೆ 24.5 ಲಕ್ಷದಿಂದ 89.9 ಲಕ್ಷ ರೂಪಾಯಿವರೆಗೆ ಇರಲಿದೆ.

ಈ ಹಡಗು ಜಗತ್ತಿನ್ 14 ಅದ್ಭುತಗಳಲ್ಲಿ 13 ಅದ್ಭುತಗಳ ಸ್ಥಳಕ್ಕೆ ಭೇಟಿ ಕೊಡಲಿದೆ. ಇದರ ಹೆಸರು ಎಂವಿ ಜೆಮಿನಿ. 400 ಕ್ಯಾಬಿನ್​ ಹೊಂದಿದ್ದು, ಸಾವಿರಕ್ಕೂ ಅಧಿಕ ಕೋಣೆಗಳಿವೆ. ಊಟ, ವಸತಿ, ಸ್ವಿಮ್ಮಿಂಗ್​ಪೂಲ್​. ಇಂಟರ್ನೆಟ್ ಸೇರಿದಂತೆ ಎಲ್ಲಾ ಸೌಲಭ್ಯಗಳೂ ಇವೆ.  ಬರುವ ನವೆಂಬರ್​ 1ರಿಂದ ಇಸ್ತಾನ್​ಬುಲ್​ನಿಂದ ಇದು ಇದರ ಪ್ರಯಾಣ ಪ್ರಾರಂಭವಾಗಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತೈವಾನ್‌ ದ್ವೀಪದ ಅಂತರ್ಜಾಲ ಕೇಬಲ್‌ ಕತ್ತರಿಸಿದ ಚೀನ !

Thu Mar 9 , 2023
ತೈಪೆ : ನೆರೆ ರಾಷ್ಟ್ರಗಳ ಜತೆಗೆ ಸದಾ ಕ್ಯಾತೆ ತೆಗೆಯುವ, ಭೂ ಅತಿಕ್ರಮಣಕ್ಕೆ ಹಪಾಹಪಿಸುವ ಚೀನಾ, ತೈವಾನ್‌ ಮೇಲಿನ ತನ್ನ ಉದ್ದೇಶಿತ ಕುತಂತ್ರ ಮುಂದುವರಿಸಿದ್ದು, ತೈವಾನ್‌ನ ದ್ವೀಪ ಪ್ರದೇಶದ ಜಲಾಂತರ್ಗಾಮಿ ಅಂತರ್ಜಾಲ ಸೇವೆಯ ಕೇಬಲ್‌ಗ‌ಳನ್ನು ಕತ್ತರಿಸಿಹಾಕಿದೆ. 14 ಸಾವಿರ ಮಂದಿ ವಾಸವಿರುವ ಮತ್ಸು ದ್ವೀಪವು 2 ಜಲಾಂತರ್ಗಾಮಿ ಅಂತರ್ಜಾಲ ಕೇಬಲ್‌ಗ‌ಳನ್ನು ಅವಲಂಬಿಸಿದ್ದು, ಚೀನಾದ ಕುತಂತ್ರದಿಂದ ಈಗ ಜನರು ಪರದಾಡುವಂತಾಗಿದೆ. ಫೆ.2 ರಂದು ಚೀನ ಮೀನುಗಾರಿಕೆ ಹಡಗೊಂದು ದ್ವೀಪ ಪ್ರದೇಶದ 50 […]

Advertisement

Wordpress Social Share Plugin powered by Ultimatelysocial