ಬಜಿಂಗಾ ಇ-ಸೈಕಲ್ ಫೆಬ್ರವರಿಯಲ್ಲಿ ಭಾರತಕೆ ಬರಲಿದೆ ;

ಸ್ವದೇಶಿ ಇ-ಮೊಬಿಲಿಟಿ ಬ್ರ್ಯಾಂಡ್ Nexzu, ಭಾರತೀಯ ಮಾರುಕಟ್ಟೆಗೆ ತನ್ನ ಇ-ಸೈಕಲ್‌ಗಳ ಪೋರ್ಟ್‌ಫೋಲಿಯೊವನ್ನು ಪ್ರಕಟಿಸಿದೆ. ಕಂಪನಿಯು ಬಜಿಂಗಾ(Bazinga) ಎಂಬ ಹೊಸ ಲಾಂಗ್ ರೇಂಜ್ ನ ಇ-ಸೈಕಲ್ ಅನ್ನು ಪರಿಚಯಿಸಿದೆ. ಹೊಸ ಬಜಿಂಗಾ ಶ್ರೇಣಿಯ ಇ-ಸೈಕಲ್‌ಗಳ ಆರಂಭಿಕ ಬೆಲೆ 49,445 ರೂ.

ಇದು ಮೂಲ ಟ್ರಿಮ್ ನ‌ ಬೆಲೆ ಆದರೆ ಹೆಚ್ಚಿನ-ಸ್ಪೆಕ್ ಮತ್ತು ಬಜಿಂಗಾ ಕಾರ್ಗೋ ಇ-ಸೈಕಲ್‌ನ ಬೆಲೆ 51,525 ರೂ. ಎಂದು ಕಂಪನಿ ಸ್ಪಷ್ಟಪಡಿಸಿದೆ.

ಯುನಿಸೆಕ್ಸ್ ಇ-ಸೈಕಲ್ ಆಗಿರುವ ಬಜಿಂಗಾ, ಡಿಟ್ಯಾಚಬಲ್ ಹಾಗೂ Li-ion ಬ್ಯಾಟರಿಯೊಂದಿಗೆ 100km ವಿಸ್ತೃತ ಶ್ರೇಣಿಯೊಂದಿಗೆ ಬರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಗಟ್ಟಿಯಾಗಿ ನಿರ್ಮಾಣವಾಗಿರುವ ಬಜಿಂಗಾ, 15 ಕೆಜಿ ಲೋಡ್ ಅನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಈಗಾಗಲೇ ಬಜಿಂಗಾಗೆ ಅಧಿಕೃತವಾಗಿ ಬುಕಿಂಗ್‌ಗಳು ಪ್ರಾರಂಭವಾಗಿದ್ದು, ಈ ವರ್ಷದ ಫೆಬ್ರವರಿಯಲ್ಲಿ ವಿತರಣೆಯು ಪ್ರಾರಂಭವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.

ಹೊಸ ಬಜಿಂಗಾ ಶ್ರೇಣಿಯು ‘ಫಿಟ್‌ನೆಸ್-ಕೇಂದ್ರಿತ ಎಂದು ಹೇಳಿರುವ ಕಂಪನಿ, ಖರೀದಿ ಪ್ರಕ್ರಿಯೆಯನ್ನು ಸರಾಗಗೊಳಿಸುವ ಸಲುವಾಗಿ Zest Money ಯೊಂದಿಗೆ ಸಹಯೋಗ ಮಾಡಿಕೊಂಡಿದೆ. ಇದರಿಂದ ಗ್ರಾಹಕರಿಗೆ ಸುಲಭ ಪಾವತಿ ಆಯ್ಕೆ ಸಿಗಲಿದ್ದು, ಖರೀದಿ ಪ್ರಕ್ರಿಯೆ ಸರಾಗವಾಗಲಿದೆ‌. ಬಜಿಂಗಾವನ್ನ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿರುವುದು, ಇ-ಮೊಬಿಲಿಟಿಯನ್ನು ಉತ್ತೇಜಿಸುವ ಗುರಿಯಿಂದ. ಈ ಸೈಕಲ್ ಗಳು ಜನರ ಜೀವನದ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ ಮತ್ತು ಸುಸ್ಥಿರ ಭವಿಷ್ಯಕ್ಕೆ ಕೊಡುಗೆ ನೀಡುತ್ತವೆ ಎಂದು ಕಂಪನಿ ಹೇಳಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿಮ್ಮ ಚರ್ಮವನ್ನು UV-ರಕ್ಷಿತವನ್ನಾಗಿ ಮಾಡುವ ಆಹಾರಗಳು;

Thu Jan 27 , 2022
ಟ್ಯಾನಿಂಗ್ ತಡೆಯಲು ಸಹಾಯ ಮಾಡುವ  10 ಆಹಾರಗಳು; ಸಿಟ್ರಸ್ ಹಣ್ಣುಗಳು ಸಿಟ್ರಸ್ ಹಣ್ಣುಗಳಾದ ಮೊಸಂಬಿ, ಕಿತ್ತಳೆ, ನಿಂಬೆ, ಸ್ಟ್ರಾಬೆರಿ, ಬ್ಲೂಬೆರ್ರಿ, ಕಿವಿ ಹಣ್ಣು ಇತ್ಯಾದಿಗಳು ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳ ಸಮೃದ್ಧ ಮೂಲವಾಗಿದೆ. ವಿಟಮಿನ್ ಸಿ ನೈಸರ್ಗಿಕ ಸನ್‌ಬ್ಲಾಕ್ ಆಗಿದ್ದು ಅದು ನಿಮ್ಮ ಚರ್ಮವನ್ನು ಸೂರ್ಯನ ಉರಿಯುವಿಕೆ ಮತ್ತು ಸನ್ ಟ್ಯಾನಿಂಗ್‌ನಿಂದ ತಡೆಯುತ್ತದೆ. ಸಿಟ್ರಸ್ ಹಣ್ಣುಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಅಕಾಲಿಕ ವಯಸ್ಸನ್ನು ತಪ್ಪಿಸುತ್ತವೆ ಮತ್ತು ಸೂರ್ಯನ ಹಾನಿಯಿಂದ ಉಂಟಾಗುವ ಚರ್ಮದ […]

Advertisement

Wordpress Social Share Plugin powered by Ultimatelysocial