ಮಂಡಳಿ ಅನುಮತಿ ಪಡೆಯದೇ ಮನೆ ಗೋಡೆ ಒಡೆದು ಪ್ರವೇಶಿಸಿದವನಿಗೆ ದಂಡ ವಿಧಿಸಿದ ಕೋರ್ಟ್ ತೀರ್ಪು, ಏನಿದು?

ಬೆಂಗಳೂರು, ಮಾರ್ಚ್ 08: ಬೆಂಗಳೂರಿನ ಜಯನಗರಲ್ಲಿರುವ ರಾಗಿಗುಡ್ಡ ಕೊಳಚೆ ಪ್ರದೇಶದಲ್ಲಿ ಮಂಡಳಿ ವತಿಯಿಂದ ನಿರ್ಮಿಸಿದ ಮನೆಗಳ ನಡುಗೋಡೆ ಒಡೆದು ಹಾಕಿ ಅನಧಿಕೃತ ಪ್ರವೇಶ ಮಾಡಿರುವ ಆರೋಪಿಗೆ ಸಿಎಂಎಂ ನ್ಯಾಯಾಲಯವು ಶಿಕ್ಷೆ ವಿಧಿಸಿ ಮಂಗಳವಾರ ಆದೇಶ ಹೊರಡಿಸಿದೆ.

ಬಿಬಿಎಂಪಿ ವ್ಯಾಪ್ತಿಯ (ವಾರ್ಡ್ ನಂ.177) ರಾಗಿಗುಡ್ಡ ಕೊಳಚೆ ಪ್ರದೇಶದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ನರ್ಮ್, ಬಿಎಸ್‌ಯುಪಿ ಯೋಜನೆಯಡಿ ನಿರ್ಮಿಸಿದ್ದ ನಿವೇಶನ ವಸತಿ ಸಂಕೀರ್ಣದ ಬ್ಲಾಕ್ ನಂ.1 ರಲ್ಲಿ 1ನೇ ಮಹಡಿಯನ್ನು ವೆಂಕಟೇಶ್ ಬಿನ್ ಕುರಪ್ಪನ್ ಅವರಿಗೆ ಹಂಚಿಕೆ ಮಾಡಲಾಗಿತ್ತು. ಸದರಿ ನಿವೇಶನಕ್ಕೆ ಹೊಂದಿಕೊಂಡಿರುವ ಮನೆ ನಂ.15 ಖಾಲಿ ಇತ್ತು. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಯಾವುದೇ ಅನುಮತಿಯನ್ನು ಪಡೆಯದೇ ನಂ.11 ಮತ್ತು 15ರ ಮಧ್ಯ ಮಂಡಳಿಯಿಂದ ನಿರ್ಮಾಣ ಮಾಡಿದ್ದ ಅಡ್ಡಗೋಡೆಯನ್ನು ತೆರವುಗೊಳಿಸಿ ಆರೋಪಿ ಅನಧಿಕೃತ ಪ್ರವೇಶ ಮಾಡಿದ್ದ. ಇದರಿಂದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆರ್ಥಿಕ ನಷ್ಟ ಮಾಡಲಾಗಿತ್ತು.

ಈ ಸಂಬಂಧ ಬಿಎಂಟಿಎಫ್ ಪೊಲೀಸ್ ಠಾಣೆ 2015ರಲ್ಲಿ ಜೂನ್ 18 ರಂದು ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಸಾಕ್ಷಾಧಾರ, ದಾಖಲೆ ಸಂಗ್ರಹಿಸಿದರು. ಸಿಎಂಎಂ ನ್ಯಾಯಾಲಯ ಬೆಂಗಳೂರಲ್ಲಿ ಸದರಿ ಪ್ರಕರಣದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲಾಯಿತು. ಅದರ ವಿಚಾರಣೆ ನಡೆಯುತ್ತ ಬಂದಿದ್ದು, ಮಂಗಳವಾರ ಅಂತಿಮ ಆದೇಶ ಹೊರಬಿದ್ದಿದೆ.

ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಆರೋಪಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಯಾವುದೇ ಅನುಮತಿಯನ್ನು ಪಡೆಯದೇ ಮನೆ ನಂ. 11 ಮತ್ತು 15ರ ಮಧ್ಯ ಮಂಡಳಿಯಿಂದ ನಿರ್ಮಾಣ ಮಾಡಿದ್ದ ಅಡ್ಡಗೋಡೆ ತೆರವುಗೊಳಿಸಿ ನವೀಕರಣ ಮಾಡಿರುವುದು ದೃಢಪಟ್ಟಿದೆ. ಆದ್ದರಿಂದ ಆರೋಪಿ ಜೆಪಿ ನಗರದ ರಾಗಿಗುಡ್ಡ ಸ್ಲಂ ನಿವಾಸಿ ವೆಂಕಟೇಶ್ ಬಿನ್ ಲೇಟ್ ಅವರಿಗೆ 10,000/ ರೂ ದಂಡ ವಿಧಿಸಲಾಗಿದೆ. ಒಂದು ವೇಳೆ ದಂಡ ಕಟ್ಟಲು ತಪ್ಪಿದ್ದಲ್ಲಿ 75ದಿನ ಕಾರಾಗೃಹ ಶಿಕ್ಷೆಗೆ ಒಳಗಾಗಬೇಕು ಎಂದು ನ್ಯಾಯಾಲಯ ಆದೇಶ ಹೊರಡಿಸಿದೆ.

ಸದರಿ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಕೃಷ್ಣಕುಮಾರ್, ರವರು ಕೈಗೊಂಡ ಉತ್ತಮ ತನಿಖೆಗಾಗಿ ಮತ್ತು ತನಿಖೆಗೆ ಸಹಕರಿಸಿದ ಸಿಬ್ಬಂದಿಯವರಿಗೆ ಡಾ, ಕೆ.ರಾಮಚಂದ್ರರಾವ್ ಐಪಿಎಸ್ ಎಡಿಜಿಪಿ ಬಿಎಂಟಿಎಫ್ ರವರು ಪ್ರಶಂಸೆ ವ್ಯಕ್ತವಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸ್ವಿಗ್ಗಿ ಕಂಪನಿಯ ಮೊಟ್ಟೆ ಜಾಹೀರಾತು ವೈರಲ್!

Wed Mar 8 , 2023
ನವದೆಹಲಿ, ಮಾರ್ಚ್ 08: ಹಿಂದೂಗಳ ಪವಿತ್ರ ಹಬ್ಬಗಳ ಪೈಕಿ ಒಂದಾಗಿರುವ ಬೇಸಿಗೆ ಆರಂಭದಲ್ಲಿ ಎದುರಾಗುವ ಹೋಲಿ ಹಬ್ಬವು ಒಂದು. ಇದನ್ನು ಮನೆ ಮಂದಿ, ಮಕ್ಕಳು, ಕಚೇರಿ ಸಿಬ್ಬಂದಿ ಸೇರಿದಂತೆ ಎಲ್ಲರು ಆಚರಣೆ ಮಾಡುತ್ತಾರೆ. ಇಂತಹ ಆಚರಣೆಗೆ ವಿರುದ್ಧವೆಂಬಂತಹ ಜಾಹೀರಾತು ನೀಡುವ ಮೂಲಕ ‘ಸ್ವಿಗ್ಗಿ ಕಂಪನಿ’ ಟೀಕೆಗೆ ಗುರಿಯಾದ ಬಳಿಕ ಎಚ್ಚೆತ್ತುಕೊಂಡ ಘಟನೆ ನಡೆದಿದೆ. ಆಹಾರ ಸರಬರಾಜು ಕಂಪನಿಗಳಲ್ಲಿ ಮುಂಚೂಣಿಯಲ್ಲಿರುವ ‘ಸ್ವಿಗ್ಗಿ ಕಂಪನಿ’ಯು ಹೋಳಿ ಹಬ್ಬ ಪ್ರಯುಕ್ತ ಜಾಹೀರಾತುವೊಂದನ್ನು ಅಳವಡಿಸಿತ್ತು. ಅದಕ್ಕೆ ವ್ಯಾಪಕ […]

Advertisement

Wordpress Social Share Plugin powered by Ultimatelysocial