ಅನೇಕ ಕೆರೆಗಳು ವಾಡೆದು ಹೋಗಿದ್ದನ್ನು ನಾವು ಕಾಣಬಹುದು.

ಪ್ರಸಕ್ತ ವರ್ಷ ಮಳೆ ಹೆಚ್ಚಾಗಿ ಅತಿವೃಷ್ಟಿಯಿಂದ ಕೆರೆ ಕಟ್ಟೆಗಳು, ಹಳ್ಳ ಕೊಳ್ಳ ತುಂಬಿ ಹರಿದು ಕೋಡಿ ಬಿದ್ದಿದ್ದು ಅನೇಕ ಕೆರೆಗಳು ಪಡೆದು ಹೋಗಿದ್ದನ್ನು ನಾವು ಕಾಣಬಹುದು.
ಲಕ್ಷ್ಮೇಶ್ವರ ತಾಲೂಕಿನ ಶೆಟ್ಟಿಕೆರೆಯ ಗ್ರಾಮದಲ್ಲಿರುವ ಕೆರೆ ವಿಸ್ತಾರವಾದ ಕೆರೆಯಾಗಿದ್ದು, ಗುಡ್ಡದ ನಡುವೆ ಸುಂದರವಾಗಿರುವ ಈ ಕೆರೆಯ ಅಳಿವಿನಂಚಿನಲ್ಲಿರುವ ನೀರು ನಾಯಿಗಳನ್ನು ಕಾಣಬಹುದು.

ಭಾರತದ ಕಾಶ್ಮೀರ, ಅಸ್ಸಾಂ ಹಾಗೂ ದಕ್ಷಿಣ ಭಾರತದಲ್ಲಿ ಅನೇಕ ಕಡೆ ಹಾಗೂ ತುಂಗಾಭದ್ರಾ ನದಿಯಲ್ಲಿ ಕಂಡು ಬರುವ ಈ ಪ್ರಾಣಿಗಳು ಶೆಟ್ಟಿಕೆರೆಯಲ್ಲಿ ಕಂಡು ಬರುತ್ತಿವೆ.ಕೆರೆಯ ಅಚ್ಚುಕಟ್ಟು ಪ್ರದೇಶದ ಸುಮಾರು ೨೩೪ ಎಕರೆ ವಿಶಾಲವಾದ ಶೆಟ್ಟಿಕೆರೆಯಾಗಿದೆ.

ಅದಲ್ಲದೇ ಜಲಚರ ಪ್ರಾಣಿಗಳಿಗೆ ಹಾಗೂ ಪಕ್ಷಿಗಳಿಗೆ ಕೆರೆಯಲ್ಲಿ ಸ್ವಚ್ಛಂದವಾಗಿ ವಾಸಿಸಲು ಸೂಕ್ತವಾಗಿರುವ ಈ ಕೆರೆಯಲ್ಲಿ ಬೇಟೆ, ಅಕ್ರಮ ಮರಳು ಸಾಗಾಟ ತಡೆಗಟ್ಟುವ ಹಾಗೂ ಶೆಟ್ಟಿಕೆರೆಗೆ ಕಾಯಕಲ್ಪ ಬೇಕಾಗಿದೆ. ಶೆಟ್ಟಿಕೆರೆಯನ್ನು ವಿದೇಶಿ ಪಕ್ಷಿಗಳ ವಿಹಾರಕ್ಕೆ ಅನುಕೂಲ ಆಗುವಂತೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇಲಾಖೆ ಮುಂದಾಗಬೇಕು.

ಮೀನು, ಏಡಿ ಪ್ರಮುಖ ಆಹಾರವಾಗಿರುವ ನೀರು ನಾಯಿಗಳು ಕೆರೆಯಲ್ಲಿ ತಿರುಗಾಟ ನಡೆಸುತ್ತಿವೆ. ನೀರಿನಲ್ಲಿ ಅತ್ಯಂತ ವೇಗವಾಗಿ ಚಲಿಸುವ ಹಾಗೂ ಹರಿಯುವ ನೀರಿಗೆ ಎದುರು ಚಲಿಸುವ ಈ ಪ್ರಾಣಿ ಪ್ರಸಕ್ತ ವರ್ಷ ಮಳೆ ಹೆಚ್ಚಾಗಿ ಆಗಿರುವದರಿಂದ ಹಳ್ಳ ಕೊಳ್ಳ ತುಂಬಿ ಹರಿದು ನದಿ ಸೇರುವಾಗ ನದಿಯ ಮೂಲಕ ಬಂದು ನೀರು ನಾಯಿಗಳು ಹಳ್ಳಕ್ಕೆ ಸೇರಿದ್ದು, ಅಲ್ಲಿಂದ ಕೆರೆಗೆ ಬಂದಿವೆ ಎನ್ನಲಾಗುತ್ತಿದೆ. ಇಂತಹ ಅಪರೂಪ ಪ್ರಾಣಿಗಳನ್ನು ಉಳಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ.

ಈ ಪ್ರಾಣಿಗಳು ನೋಡಲು ಸಿಗುವದು ಅಪರೂಪ ಏಕೆಂದರೆ ನೀರಿನಲ್ಲಿ ಕೆಲವೊಮ್ಮೆ ತಲೆಯೆತ್ತಿ ಅತ್ತಿತ್ತ ನೋಡಿ ಕೂಡಲೇ ಮುಳುಗಿ ನೀರಿನಲ್ಲಿ ಚಲಿಸುತ್ತದೆ. ಆಗಾಗ ಕೆರೆಯ ದಡದಲ್ಲಿ ಕಾಣುತ್ತಿವೆ. ಈ ಪ್ರಾಣಿ ಶೆಟ್ಟಿಕೆರೆ ಗ್ರಾಮದ ಕೆರೆಗೆ ಹೊಸ ಅತಿಥಿಯಾಗಿದೆ.

ಆದರೆ ಈ ಕೆರೆಯ ಅಭಿವೃದ್ದಿ ಹಾಗೂ ರಕ್ಷಣೆ ಇಲ್ಲದೇ ಇರುವದರಿಂದ ಅಕ್ರಮವಾಗಿ ಮರಳು ಸಾಗಣೆ ನಡೆಯುತ್ತಿದ್ದು, ಇದರಿಂದ ಕೆರೆಯಲ್ಲಿರುವ ಪ್ರಾಣಿಗಳಿಗೆ ರಕ್ಷಣೆ ಇಲ್ಲದಂತಾಗಿದೆ.

ಅಳಿವಿನಂಚಿನಲ್ಲಿರುವ ನೀರು ನಾಯಿಯ ಚಿತ್ರ ಸೆರೆ ಹಿಡಿಯಲಾಗಿದೆ. ಈ ಅಪರೂಪದ ಪ್ರಾಣಿ ಶೆಟ್ಟಿಕೇರೆಯ ಕೆರೆಯ ಪ್ರದೇಶದಲ್ಲಿ ಕಾಣಿಸಿಕೊಂಡಿರುವದು ಅಚ್ಚರಿ ಮೂಡಿಸಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ಯಾವುದೇ ಪುರಾವೆ, ಸಾಕ್ಷಿ ನೀಡಿಲ್ಲ.

Mon Jan 23 , 2023
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿಕೆ ಬಿಜೆಪಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆ ಕಾಂಗ್ರೆಸ್ ನೇ ಭ್ರಷ್ಟಾಚಾರಾದ ಗಂಗೋತ್ರಿ 2014 ರ ಹಿಂದಿನಿಂದಲೂ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿತ್ತು ಈಗ ಬಿಜೆಪಿ ಮೇಲೆ ಇಲ್ಲ ಸಲದ ಆರೋಪ ಮಾಡುತಿದೆ ಕಾಂಗ್ರೆಸ್ ಯಾವುದೇ ಪುರಾವೆ, ಸಾಕ್ಷಿ ನೀಡಿಲ್ಲ ಕೆಂಪಣ್ಣ ಸರ್ಕಾರದ ವಿರುದ್ಧ 40% ಕಮೀಷನ್ ಆರೋಪ ಯಾವುದೇ ಸಾಕ್ಷಿ ನೀಡಿಲ್ಲ ಕಾರಣ ಕೆಂಪಣ್ಷ ಅವರನ್ನು […]

Advertisement

Wordpress Social Share Plugin powered by Ultimatelysocial