ಚಾಟ್‌ ಬ್ಯಾಕಪ್‌ ಮಾಡೋರಿಗೆ ಶಾಕಿಂಗ್‌ ನ್ಯೂಸ್‌ ಕೊಟ್ಟ ವಾಟ್ಸಾಪ್‌!

ಮೆಟಾ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಬಳಕೆದಾರರ ಅನುಕೂಲಕ್ಕಾಗಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಕಾಲಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಜೊತೆಗೆ ತನ್ನ ಫೀಚರ್ಸ್‌ಗಳಲ್ಲಿ ಅನೇಕ ಬದಲಾವಣೆಗಳನ್ನು ಕೂಡ ಮಾಡುತ್ತಾ ಬಂದಿದೆ.ಸದ್ಯ ಇದೀಗ ಚಾಟ್‌ ಬ್ಯಾಕಪ್‌ ಮಾಡುವ ವಿಚಾರದಲ್ಲಿ ಹೊಸ ಬದಲಾವಣೆಗೆ ಮುಂದಾಗಿದೆ. ಗೂಗಲ್‌ ಡ್ರೈವ್‌ನಲ್ಲಿ ವಾಟ್ಸಾಪ್‌ ಚಾಟ್‌ಗಳನ್ನು ಬ್ಯಾಕಪ್ ಮಾಡುವವರು ಈ ಬದಲಾವಣೆಯನ್ನು ಗಮನಿಸಲೇಬೇಕು.ವಾಟ್ಸಾಪ್‌ಹೌದು, ವಾಟ್ಸಾಪ್‌ ಬಳಕೆದಾರರು ತಮ್ಮ ಚಾಟ್‌ಗಳನ್ನು ಗೂಗಲ್‌ ಡ್ರೈವ್‌ನಲ್ಲಿ ಬ್ಯಾಕಪ್‌ ಮಾಡುತ್ತಾರೆ. ಗೂಗಲ್‌ ಡ್ರೈವ್‌ನಲ್ಲಿ ವಾಟ್ಸಾಪ್‌ ಚಾಟ್‌ ಬ್ಯಾಕಪ್‌ ಮಾಡುವುದಕ್ಕೆ ಯಾವುದೇ ಸ್ಟೋರೇಜ್‌ ಸ್ಪೇಸ್‌ ಸಮಸ್ಯೆ ಇರಲಿಲ್ಲ. ಆದರೆ ಇನ್ಮುಂದೆ ನಿಗಧಿತ ಸಾಮರ್ಥ್ಯಕ್ಕೆ ಮಾತ್ರ ಗೂಗಲ್‌ ಡ್ರೈವ್‌ನಲ್ಲಿ ಚಾಟ್‌ ಬ್ಯಾಕಪ್‌ ಮಾಡುವುದಕ್ಕೆ ವಾಟ್ಸಾಪ್‌ ಮುಂದಾಗಿದೆ. ಇದರಿಂದ ವಾಟ್ಸಾಪ್‌ ಚಾಟ್‌ ಬ್ಯಾಕಪ್‌ ಮಾಡುವವರು ಗೂಗಲ್‌ ಡ್ರೈವ್‌ ಜೊತೆಗೆ ಬೇರೆ ಕ್ಲೌಡ್‌ ಸ್ಟೋರೇಜ್‌ ಅನ್ನು ಅವಲಂಬಿಸಬೇಕಾಗುತ್ತದೆ. ಹಾಗಾದ್ರೆ ಹೊಸ ಬದಲಾವಣೆಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.ವಾಟ್ಸಾಪ್‌ವಾಟ್ಸಾಪ್‌ ತನ್ನ ಆಂಡ್ರಾಯ್ಡ್‌ ಬಳಕೆದಾರರು ಗೂಗಲ್‌ ಡ್ರೈವ್‌ನಲ್ಲಿ ಅನಿಯಮಿತ ಚಾಟ್‌ ಬ್ಯಾಕಪ್‌ ಮಾಡುವುದನ್ನು ಬದಲಾಯಿಸಲು ಮುಂದಾಗಿದೆ. ಶೀಘ್ರದಲ್ಲೇ ವಾಟ್ಸಾಪ್‌ ಚಾಟ್‌ಗಳು ಗೂಗಲ್‌ ಡ್ರೈವ್ ಸ್ಟೋರೇಜ್‌ ತು೮ಂಬಿದ ತಕ್ಷಣ ಬ್ಯಾಕಪ್‌ ಮಾಡುವುದನ್ನು ನಿಲ್ಲಿಸಬಹುದು. ಇದರಿಂದ ಬಳಕೆದಾರರು ಸ್ಥಳಾವಕಾಶದ ಕೊರತೆಯನ್ನು ಎದುರಿಸುತ್ತಿದ್ದರೆ, ಪಾವತಿಸಿದ ಗೂಗಲ್‌ ಒನ್‌ ಸ್ಟೋರೇಜ್‌ ಪ್ಲಾನ್‌ ಅನ್ನು ಅವಲಂಬಿಸಬೇಕಾಗುತ್ತದೆ. ಆದರೆ iOS ನಲ್ಲಿ ವಾಟ್ಸಾಪ್‌ ಚಾಟ್‌ಗಳನ್ನು iCloud ಗೆ ಬ್ಯಾಕಪ್ ಮಾಡುವ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ.ಸದ್ಯ ಈ ಹೊಸ ಫೀಚರ್ಸ್‌ ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ಈ ಹೊಸ ಫೀಚರ್ಸ್‌ ಬಳಕೆದಾರರಿಗೆ ಗೂಗಲ್‌ ಡ್ರೈವ್‌ನಲ್ಲಿ ಬ್ಯಾಕಪ್ ಮಾಡುವಾಗ ತಮ್ಮ ವಾಟ್ಸಾಪ್‌ ಚಾಟ್‌ಗಳನ್ನು ನಿರ್ವಹಿಸಲು ಅನುಮತಿಸುತ್ತದೆ. ಅಲ್ಲದೆ ಗೂಗಲ್‌ ಡ್ರೈವ್‌ನಲ್ಲಿ ಸ್ಪೇಸ್‌ ಸೇವ್‌ ಮಾಡಲು ಬಳಕೆದಾರರಿಗೆ ಕೆಲವು ಸಂದೇಶ ಪ್ರಕಾರಗಳನ್ನು ಹೊರಗಿಡಲು ಅವಕಾಶ ನೀಡುತ್ತದೆ. ಇದಕ್ಕಾಗಿ ‘ಗೂಗಲ್‌ ಡ್ರೈವ್ ಬ್ಯಾಕಪ್ ಬದಲಾಗುತ್ತಿದೆ’ ಎಂದು ಹೇಳುವ ನೋಟಿಫಿಕೇಶನ್ ಶೀಘ್ರದಲ್ಲೇ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದರಿಂದ ಬಳಕೆದಾರರು ತಮ್ಮ ಗೂಗಲ್‌ ಡ್ರೈವ್ ಬಹುತೇಕ ಭರ್ತಿಯಾದಾಗ ನೋಟಿಫಿಕೇಶನ್ ಪಡೆಯುತ್ತಾರೆ.ವಾಟ್ಸಾಪ್‌ಇನ್ನು ವಾಟ್ಸಾಪ್‌ ಬ್ಯಾಕಪ್‌ಗಳನ್ನು ಉಚಿತವಾಗಿ ಸಂಗ್ರಹಿಸಲು ಗೂಗಲ್‌ ನಿರ್ದಿಷ್ಟ ಕೋಟಾವನ್ನು ನೀಡುತ್ತಿದೆ. ಆದರೆ ಎಷ್ಟು ಉಚಿತ ಸಂಗ್ರಹಣೆಯನ್ನು ನೀಡಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಈ ನೀತಿ ಬದಲಾದರೆ ವಾಟ್ಸಾಪ್‌ ಚಾಟ್‌ಗಳು ಒಬ್ಬರ ಗೂಗಲ್‌ ಅಕೌಂಟ್‌ನಲ್ಲಿ 15GB ಸ್ಟೋರೇಜ್‌ ಸ್ಪೇಸ್‌ಗೆ ಸೀಮಿತವಾಗಿರುತ್ತದೆ. ಇದರಿಂದ ನೀವು ಹೆಚ್ಚಿನ ಚಾಟ್‌ ಬ್ಯಾಕಪ್‌ ಮಾಡುವಾಗ ಗೂಗಲ್‌ ಒನ್‌ ಪ್ಲಾನ್‌ ಅನ್ನು ತೆಗೆದುಕೊಳ್ಳಬೇಕಾಗಬಹುದು.ಇದಲ್ಲದೆ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಚಾಟ್‌ ಮೈಗ್ರೇಷನ್‌ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಇದಕ್ಕೂ ಮೊದಲು ಆಂಡ್ರಾಯ್ಡ್‌ ಮತ್ತು iOS ಬಳಕೆದಾರರಿಗೆ ತಮ್ಮ ಚಾಟ್ ಹಿಸ್ಟರಿಯನ್ನು ಟ್ರಾನ್ಸಫರ್‌ ಮಾಡುವುದು ಕಷ್ಟಕರವಾಗಿತ್ತು. ಇದರಿಂದ ಹೊಸ ಆಪರೇಟಿಂಗ್ ಸಿಸ್ಟಮ್‌ಗೆ ಹೋಗುವುದರಿಂದ ಹಳೆಯ ಚಾಟ್‌ಗಳನ್ನು ಕಳೆದುಕೊಳ್ಳಬೇಕಾಗಿತ್ತು. ಆದರೆ ಇದೀಗ ವಾಟ್ಸಾಫ್‌ ತನ್ನ ಚಾಟ್‌ ಬಿಸ್ಟರಿ ಟ್ರಾನ್ಸಫರ್‌ ವಿಷಯವನ್ನು ಸಾಕಷ್ಟು ಸರಳಗೊಳಿಸಿದೆ. ಸದ್ಯ iOS ಬಳಕೆದಾರರು ಈಗ ತಮ್ಮ ಚಾಟ್‌ಗಳನ್ನು ಸ್ಯಾಮ್‌ಸಂಗ್‌ ಹಾಗೂ ಪಿಕ್ಸೆಲ್‌ ಡಿವೈಸ್‌ಗಳಿಗೆ ಸುಲಭವಾಗಿ ವರ್ಗಾಯಿಸಬಹುದು.ಆದರೆ ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್ 12 ಚಾಲನೆಯಲ್ಲಿರುವ ಎಲ್ಲಾ ಫೋನ್‌ಗಳು ಚಾಟ್ ಟ್ರಾನ್ಸಫರ್‌ ಫೀಚರ್ಸ್‌ ಪಡೆಯಲಿವೆ ಎಂದು ಅಂದಾಜಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಿಪ್ ಕೊರತೆಯಿಂದಾಗಿ 7 ಲಕ್ಷ ಕಾರುಗಳ ಆರ್ಡರ್‌ಗಳ ಡೆಲಿವರಿ ಇನ್ನೂ ಬಾಕಿ

Tue Feb 1 , 2022
 ಸೆಮಿಕಂಡಕ್ಟರ್‌ಗಳ ಕೊರತೆಯಿಂದಾಗಿ ಡಿಸೆಂಬರ್ 2021 ರ ವೇಳೆಗೆ ಕಾರು ತಯಾರಕರು 7 ಲಕ್ಷಕ್ಕೂ ಹೆಚ್ಚು ಆರ್ಡರ್‌ಗಳನ್ನು ಮುಂದೂಡಿದ್ದಾರೆ ಎಂದು ಆರ್ಥಿಕ ಸಮೀಕ್ಷೆ ವರದಿ ಮಾಡಿದೆ.ಪೂರೈಕೆಯಲ್ಲಿನ ವಿಳಂಬದ ಪರಿಣಾಮವಾಗಿ, 2021 ರಲ್ಲಿ ಉದ್ಯಮಕ್ಕೆ ಸರಾಸರಿ ಕಾಯುವ ಸಮಯ (ಆರ್ಡರ್ ದಿನಾಂಕ ಮತ್ತು ಆಟೋಮೊಬೈಲ್ ರವಾನೆಯಾಗುವ ನಡುವಿನ ಅಂತರ) ಸರಿಸುಮಾರು 14 ವಾರಗಳು.ಆರ್ಥಿಕ ಸಮೀಕ್ಷೆ 2021-22 ಭಾರತದಲ್ಲಿ ಆಟೋಮೊಬೈಲ್ ವಲಯದಲ್ಲಿ ಇದೇ ರೀತಿಯ ಪ್ರವೃತ್ತಿ ಇರುವುದಾಗಿ ತೋರಿದೆ. ಭಾರತೀಯ ಆಟೋಮೊಬೈಲ್ ಉತ್ಪಾದಕರ ಸಂಘಟನೆ […]

Advertisement

Wordpress Social Share Plugin powered by Ultimatelysocial