ಬಿಳಿ ಕೂದಲು ಕಪ್ಪಾಗಿಸಲು ಇಲ್ಲಿದೆ ನೈಸರ್ಗಿಕ ಡೈ!

ಹಿಂದಿನ ಕಾಲದಲ್ಲಿ 60 ವರ್ಷದ ನಂತರ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಯುವಕರು ಮತ್ತು ಚಿಕ್ಕ ಮಕ್ಕಳಲ್ಲೂ ಬಿಳಿ ಕೂದಲಿನ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಒತ್ತಡದ ಜೀವನ ಶೈಲಿ.

ಬಿಳಿ ಕೂದಲನ್ನು ಕಪ್ಪಾಗಿಸಲು ರಾಸಾಯನಿಕಯುಕ್ತ ಹೇರ್ ಡೈ ಗಳನ್ನು ಬಳಸುವುದರಿಂದ ಕೂದಲು ಮೃದುತ್ವವನ್ನು ಕಳೆದುಕೊಂಡು ಹಾನಿಗೊಳಗಾಗುತ್ತದೆ.

ನೈಸರ್ಗಿಕವಾಗಿ ಬಿಳಿಕೂದಲನ್ನು ಕಪ್ಪಾಗಿಸುವುದರಿಂದ ಕೂದಲ ಮೇಲಾಗುವ ಅಡ್ಡ ಪರಿಣಾಮಗಳನ್ನು ತಪ್ಪಿಸಬಹುದು. ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಇಲ್ಲಿದೆ ಸುಲಭ ವಿಧಾನ.

ವಿಧಾನ1: ಇಂಡಿಗೋ ಪೌಡರ್ ಅನ್ನು ಕೂದಲಿನ ಅಳತೆಗೆ ಅನುಗುಣವಾಗಿ ತೆಗೆದುಕೊಂಡು ನೀರಿನಲ್ಲಿ ಕಲಸಿ ತಕ್ಷಣವೇ ಕೂದಲಿಗೆ ಲೇಪಿಸಿಕೊಳ್ಳಬೇಕು. ಒಂದು ಗಂಟೆಯ ನಂತರ ಬರೀ ನೀರಿನಲ್ಲಿ ಕೂದಲನ್ನು ತೊಳೆಯಬೇಕು. 48 ಗಂಟೆಗಳ ಬಳಿಕ ಕೂದಲಿಗೆ ಎಣ್ಣೆಯನ್ನು ಲೇಪಿಸಿ ಶ್ಯಾಂಪೂವಿನಿಂದ ಕೂದಲನ್ನು ತೊಳೆಯಬೇಕು.

ವಿಧಾನ 2: 7ರಿಂದ8 ಟೇಬಲ್ ಸ್ಪೂನ್ ಮೆಹಂದಿ ಪುಡಿಯನ್ನು ತೆಗೆದುಕೊಂಡು ಬಿಸಿ ನೀರಿನ ಜೊತೆ ಕಲಿಸಿಡಬೇಕು ತಲೆಗೆ ಹಚ್ಚುವ ಮುನ್ನ ಅದಕ್ಕೆ 2 ಟೇಬಲ್ ಸ್ಪೂನ್ ಇಂಡಿಗೋ ಪೌಡರ್ ಅನ್ನು ಬೆರೆಸಿ ಈ ಪೇಸ್ಟನ್ನು ಲೇಪಿಸಿಕೊಂಡು 3 ಗಂಟೆಗಳ ನಂತರ ಬರೀ ನೀರಿನಿಂದ ಕೂದಲನ್ನು ತೊಳೆಯಬೇಕು. ಎರಡು ದಿನದ ಬಳಿಕ ಎಣ್ಣೆಯನ್ನು ಲೇಪಿಸಿ ಶಾಂಪೂವಿನಿಂದ ಕೂದಲನ್ನು ತೊಳೆದರೆ ನೈಸರ್ಗಿಕವಾಗಿ ಕೂದಲು ಕಪ್ಪಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಬರೆದ ಚಿತ್ರ `ಕೆಜಿಎಫ್ 2',

Fri Apr 15 , 2022
`ಕೆಜಿಎಫ್ 2′, ರಿಲೀಸ್ ಆದ ಮೊದಲ ದಿನವೇ ಬಾಕ್ಸ್‌ಆಫೀಸ್ ಲೂಟಿ ಮಾಡ್ತಿದೆ. ಎಲ್ಲೆಲ್ಲೂ ರಾಕಿಭಾಯ್‌ಗೆ ಅಭಿಮಾನಿಗಳು ಸಲಾಮ್ ಹೊಡೆಯುತ್ತಿದ್ದಾರೆ. ಅಷ್ಟರ ಮಟ್ಟಿಗೆ ರಣಧೀರನ ಆರ್ಭಟ ಜೋರಾಗಿದೆ. ಚಿತ್ರ ನೋಡಿ ಅಭಿಮಾನಿಗಳು ಅಪ್ಪಿ ಒಪ್ಪಿಕೊಂಡಿದ್ದಾರೆ. ಸಿನಿಮಾ ನೋಡಿರೋ ಫ್ಯಾನ್ಸ್ `ಕೆಜಿಎಫ್ 3’ನೇ ಪಾರ್ಟ್ ಬರಲಿದೆ ಅಂತಾ ಭವಿಷ್ಯ ನುಡಿದಿದ್ದಾರೆ. ಬೆಂಗಳೂರಿನ ವೀರೇಶ್ ಚಿತ್ರಮಂದಿರದ ಬಳಿ ಸಿನಿಮಾ ವೀಕ್ಷಿಸಿದ ಅಭಿಮಾನಿಗಳು, `ಕೆಜಿಎಫ್ 2′ ಚಿತ್ರಕ್ಕೆ ಕೊಟ್ಟ ಕಾಸಿಗೆ ಮೋಸವಿಲ್ಲ. ಮುಂದೆ ಕೆಜಿಎಫ್ 3 […]

Advertisement

Wordpress Social Share Plugin powered by Ultimatelysocial