ಅತ್ಯುತ್ತಮ ನಟ, ನಟಿ ಹಾಗೂ ಚಿತ್ರ ಪ್ರಶಸ್ತಿ ಯಾರ ಪಾಲು?

ಳೆದ ವರ್ಷ ( 2022 ) ಸಿನಿಮಾ ಕ್ಷೇತ್ರಕ್ಕೆ ಗೋಲ್ಡನ್ ಇಯರ್ ಎಂದೇ ಹೇಳಬಹುದು. ಕೊರೊನಾದಿಂದ ತೀವ್ರ ಹಿನ್ನಡೆ ಅನುಭವಿಸಿದ್ದ ಸಿನಿಮಾ ಕ್ಷೇತ್ರ ಸುಧಾರಿಸಿಕೊಂಡ ವರ್ಷ ಇದಾಗಿದ್ದು, ಒಳ್ಳೊಳ್ಳೆ ಚಿತ್ರಗಳು ಬಿಡುಗಡೆಯಾದವು. ಅದರಲ್ಲಿಯೂ ವಿಶೇಷವಾಗಿ ಸೌತ್ ಇಂಡಸ್ಟ್ರಿಯ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದವು.

ಕಳೆದ ವರ್ಷ ದಕ್ಷಿಣ ಭಾರತ ಚಿತ್ರರಂಗಗಳ ಸಿನಿಮಾಗಳು ಅಬ್ಬರಿಸಿದರೆ, ಬಾಲಿವುಡ್ ಸಿನಿಮಾಗಳು ಗೆಲುವು ಕಂಡದ್ದಕ್ಕಿಂತ ಸೋತಿದ್ದೇ ಹೆಚ್ಚು. ದೊಡ್ಡ ದೊಡ್ಡ ಸ್ಟಾರ್ ನಟರ ಚಿತ್ರಗಳು ಬಾಯ್‌ಕಟ್ ಟ್ರೆಂಡ್‌ಗೆ ಸಿಲುಕಿ ಮಕಾಡೆ ಮಲಗಿದರೆ ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದವು. ಇನ್ನು ಕಳೆದ ಸಾಲಿನಲ್ಲಿ ಬಿಡುಗಡೆಗೊಂಡ ಚಿತ್ರಗಳಿಗೆ ಈ ವರ್ಷ ಹಲವು ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ಜರುಗುತ್ತಿದ್ದು, ಉತ್ತಮ ಚಿತ್ರಗಳು ಹಾಗೂ ಕಲಾವಿದರು ಪ್ರಶಸ್ತಿಗಳನ್ನು ದಕ್ಕಿಸಿಕೊಂಡಿದ್ದಾರೆ.

ಇದೀಗ ಕಳೆದ ಭಾನುವಾರ ( ಫೆಬ್ರವರಿ 26 ) ಜೀ ಸಂಸ್ಥೆ ನೀಡುವ ಜೀ ಸಿನಿ ಪ್ರಶಸ್ತಿ ಕಾರ್ಯಕ್ರಮ ಜರುಗಿದ್ದು, ಈ ಕಾರ್ಯಕ್ರಮದಲ್ಲಿ ಯಾವ ಯಾವ ಕಲಾವಿದರು ಪ್ರಶಸ್ತಿ ಪಡೆದುಕೊಂಡರು ಹಾಗೂ ಯಾವ ಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿತು ಎಂಬ ಮಾಹಿತಿ ಈ ಕೆಳಕಂಡಂತಿದೆ..

ಅತ್ಯುತ್ತಮ ನಟ: ಕಾರ್ತಿಕ್ ಆರ್ಯನ್ (ಭೂಲ್ ಭುಲೈಯಾ 2)

ಅತ್ಯುತ್ತಮ ನಟಿ: ಆಲಿಯಾ ಭಟ್ (ಗಂಗೂಬಾಯಿ ಕಥಿಯಾವಾಡಿ)

ಅತ್ಯುತ್ತಮ ಚಿತ್ರ: ದಿ ಕಾಶ್ಮೀರ್ ಫೈಲ್ಸ್

ವೀಕ್ಷಕರ ಆಯ್ಕೆ ಅತ್ಯುತ್ತಮ ನಟಿ: ಆಲಿಯಾ ಭಟ್ (ಡಾರ್ಲಿಂಗ್ಸ್)

ವೀಕ್ಷಕರ ಆಯ್ಕೆ ಅತ್ಯುತ್ತಮ ನಟ: ಅನುಪಮ್ ಖೇರ್ (ದಿ ಕಾಶ್ಮೀರ್ ಫೈಲ್ಸ್)

ಪರ್ಫಾಮರ್ ಆಫ್ ದಿ ಇಯರ್ ( ಪುರುಷ ): ವರುಣ್ ಧವನ್ (ಜುಗ್ ಜುಗ್ ಜೀಯೋ ಮತ್ತು ಭೇದಿಯಾ)

ಪರ್ಫಾಮರ್ ಆಫ್ ದಿ ಇಯರ್ ( ಮಹಿಳೆ ): ಕಿಯಾರಾ ಅಡ್ವಾಣಿ (ಜುಗ್ ಜುಗ್ ಜೀಯೋ ಮತ್ತು ಭೂಲ್ ಭುಲೈಯಾ 2)

ಅತ್ಯುತ್ತಮ ಉದಯೋನ್ಮುಖ ನಟಿ: ರಶ್ಮಿಕಾ ಮಂದಣ್ಣ (ಗುಡ್ ಬೈ)

ಅತ್ಯುತ್ತಮ ಪೋಷಕ ನಟ: ಅನಿಲ್ ಕಪೂರ್ (ಜುಗ್ ಜುಗ್ ಜೀಯೋ)

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮುಷ್ಕರಕ್ಕೆ ತಾಲೂಕು ಆಸ್ಪತ್ರೆಯ ವೈದ್ಯರ ಬೆಂಬಲ.

Wed Mar 1 , 2023
  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮುಷ್ಕರಕ್ಕೆ ನಾಳೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಸರ್ಕಾರಿ ಆಸ್ಪತ್ರೆಯ ವೈದ್ಯರು ಸೇರಿ ಸಿಬ್ಬಂದಿ ಗೈರು ಹಾಜರಾಗುವ ಮೂಲಕ ನೌಕರರ ಸಂಘದ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ.ಹೆರಿಗೆ ತುರ್ತು ಚಿಕ್ಸಿತೆ ಹೊರತು ಪಡಿಸಿ ಉಳಿದ ಯಾವ ಸೇವೆ ಲಭ್ಯ ಇರುವುದಿಲ್ಲ. ವೈದ್ಯರು ಕತ್ಯರ್ವಕ್ಕೆ ಗೈರು ಹಾಜರಾಗುವ ಮೂಲಕ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರ ನಾಯ್ಯಯುತ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನ ಒತ್ತಾಯಿಸಿ ಕರ್ನಾಟಕ […]

Advertisement

Wordpress Social Share Plugin powered by Ultimatelysocial