ಮದುವೆ ನಡೆಯುವಾಗಲೇ ಗುಂಡಿಗೆ ಬಲಿಯಾದ ವಧು!

ಉತ್ತರ ಪ್ರದೇಶ: ಆಕೆ ವಧುವಾಗಿ (Bride) ಮದುವೆ (Wedding) ಮಂಟಪದಲ್ಲಿ ನಿಂತ ಯುವತಿ. ಇನ್ನೇನು ಕೆಲವೇ ಕ್ಷಣ ಕಳೆದ್ರೆ ಮತ್ತೊಬ್ಬನ ಹೆಂಡತಿಯಾಗಿ (Wife) ಆತನ ಬಾಳು (Life) ಪ್ರವೇಶಿಸಬೇಕಾದವಳು. ಮದುವೆ ಬಗ್ಗೆ, ಮುಂದಿನ ಜೀವನದ ಬಗ್ಗೆ, ಗಂಡನ (Husband) ಬಗ್ಗೆ ಸಾವಿರಾರು ಕನಸು (Dreams) ಕಂಡಿದ್ದವಳು.

ಆದರೆ ಆ ಎಲ್ಲಾ ಆಸೆ, ಕನಸಿಗೆ ಆ ಮದುವೆ ವೇದಿಕೆಯೇ ಇತಿಶ್ರೀ ಹಾಡಿಬಿಟ್ಟಿತ್ತು. ಪರಸ್ಪರ ವಧು ವರರು (Groom) ಹಾರ ಬದಲಾಯಿಸಿಕೊಳ್ಳುತ್ತಿದ್ದಂತೆ ಅಲ್ಲಿ ಗುಂಡಿನ ಮೊರೆತ ಕೇಳಿಸಿತು. ಏನಾಯಿತು ಅಂತ ನೋಡುವಷ್ಟರಲ್ಲಿ ವಧುವೇ ಅಲ್ಲಿ ರಕ್ತದ (Blood) ಕೋಡಿಯ ಮಧ್ಯೆ ಬಿದ್ದಿದ್ದಳು. ದೂರದಲ್ಲೇ ನಿಂತು ಗುಂಡು (Shoot) ಹಾರಿಸಿದ ಹಂತಕ, ಆಕೆ ನರಳಾಡುತ್ತಾ ಪ್ರಾಣ ಬಿಡುವುದನ್ನು ನೋಡಿಕೊಂಡು, ಎಸ್ಕೇಪ್ (Escape) ಆಗಿದ್ದ. ಕೆಲವೇ ಕ್ಷಣಗಳಲ್ಲಿ ಇಡೀ ಮದುವೆ ಮನೆ ಸ್ಮಶಾನದಂತಾಯಿತು!

ಉತ್ತರ ಪ್ರದೇಶದ ಮಥುರಾದಲ್ಲಿ ಘನಘೋರ ಘಟನೆ

ಉತ್ತರ ಪ್ರದೇಶ ರಾಜ್ಯದಲ್ಲಿರುವ ಮಥುರಾದಲ್ಲಿ ಇಂಥದ್ದೊಂದು ಘನಘೋರ ಘಟನೆ ನಡೆದಿದೆ. ಶ್ರೀಕಷ್ಣನ ನೆಲದಲ್ಲಿ ಮಾಜಿ ಪ್ರೇಮಿಯೊಬ್ಬ ಕಂಸನಂತೆ ಅಟ್ಟಹಾಸಗೈದಿದ್ದಾನೆ. ತನ್ನ ಮಾಜಿ ಪ್ರೇಯಸಿ ಮತ್ತೊಬ್ಬನ ಹೆಂಡತಿ ಆಗುವುದನ್ನು ನೋಡಲು ಆಗದೇ, ಆಕೆ ಮೇಲೆ ಗುಂಡು ಹಾರಿಸಿದ್ದಾನೆ.

ಆಕೆ ನೂರಾರು ಜನರ ಸಮ್ಮುಖದಲ್ಲಿ ಬಿದ್ದು, ಒದ್ದಾಡುತ್ತಾ ಪ್ರಾಣ ಬಿಟ್ಟಿದ್ದಾಳೆ. ಆಕೆ ಉಸಿರು ನಿಲ್ಲಿಸುವುದನ್ನು ನೋಡಿದ ಕಿರಾತಕ, ಅಷ್ಟೊಂದು ಜನರಿದ್ದರೂ ಯಾರ ಕೈಗೂ ಸಿಗದೇ ಎಸ್ಕೇಪ್ ಆಗಿದ್ದಾನೆ.

ನಿಜಕ್ಕೂ ಅಲ್ಲಿ ನಡೆದಿದ್ದು ಏನು?

ಮೃತ ವಧುವನ್ನು ಕಾಜಲ್ ಎಂದು ಗುರುತಿಸಲಾಗಿದೆ. ಆಕೆಯ ಮಾಜಿ ಪ್ರೇಮಿ ಅನೀಶ್ ಎಂಬಾತನೇ ಆಕೆಯ ಮೇಲೆ ಗುಂಡು ಹಾರಿಸಿ, ಕೊಲೆ ಮಾಡಿದ್ದಾನೆ. ಮಥುರಾ ಜಿಲ್ಲೆಯ ಮುಬಾರಿಕ್‌ಪುರ್ ಗ್ರಾಮದಲ್ಲಿ ಕಾಜಲ್ ಮದುವೆ ನಡೆಯುತ್ತಿತ್ತು. ಮದುವೆಯಲ್ಲಿ ಹಾರ ಬದಲಾಯಿಸುವಿಕೆ ಸಂಪ್ರದಾಯ ಮುಗಿದ ಕೂಡಲೇ ಕಾಜಲ್ ಮೇಲೆ ಅನೀಶ್ ಗುಂಡು ಹಾರಿಸಿದ್ದಾನೆ.

ಅಷ್ಟೊಂದು ಜನರಿದ್ದರೂ ಹಂತಕ ಎಸ್ಕೇಪ್

ಅನೀಶ್ ಹಾರಿಸಿದ ಗುಂಡು ವೇದಿಕೆ ಮೇಲಿದ್ದ ಕಾಜಲ್ ಎಡಗಣ್ಣಿಗೆ ಹೊಕ್ಕಿದೆ. ಪರಿಣಾಮ ಆಕೆ ತೀವ್ರವಾಗಿ ಗಾಯಗೊಂಡಿದ್ದಾಳೆ. ತೀವ್ರ ರಕ್ತಸ್ರಾವದಿಂದ ನರಳುತ್ತಾ ಅಲ್ಲೇ ಪ್ರಾಣ ಬಿಟ್ಟಿದ್ದಾಳೆ. . ಆಕೆ ಉಸಿರು ನಿಲ್ಲಿಸುವುದನ್ನು ನೋಡಿದ ಕಿರಾತಕ, ಅಷ್ಟೊಂದು ಜನರಿದ್ದರೂ ಯಾರ ಕೈಗೂ ಸಿಗದೇ ಎಸ್ಕೇಪ್ ಆಗಿದ್ದಾನೆ.

ಪ್ರೀತಿಸಿ ಕೈಕೊಟ್ಟಿದ್ದಕ್ಕೆ ದ್ವೇಷದಿಂದ ಕೊಲೆ

ಆರೋಪಿ ಅನೀಶ್ ಹಾಗೂ ಮೃತ ಕಾಜಲ್ ಇಬ್ಬರೂ ಒಬ್ಬರಿಗೊಬ್ಬರು ಪ್ರೀತಿಸುತ್ತಾ ಇದ್ದರು ಎನ್ನಲಾಗಿದೆ. ಆದರೆ ಅನೀಶ್ ಜೊತೆಗೆ ಪ್ರೀತಿ ಕಡಿದುಕೊಂಡಿದ್ದ ಕಾಜಲ್, ಬೇರೆಯವನೊಂದಿಗೆ ಮದುವೆ ಮಾಡಿಕೊಳ್ಳುತ್ತಿದ್ದಳು. ಇದರಿಂದ ಕೋಪಗೊಂಡಿದ್ದ ಅನೀಶ್, ಮದುವೆ ಮನೆಗೇ ಬಂದು ಕಾಜಲ್ ಮೇಲೆ ಗುಂಡು ಹಾರಿಸಿದ್ದಾನೆ.

ಕೆಲವೇ ಕ್ಷಣಗಳ ಹಿಂದಷ್ಟೇ ಅಲ್ಲಿ ನಗು, ಮದುವೆ ಸಂಭ್ರಮ, ಕೇಕೆ, ಸಂತೋಷ ತುಂಬಿಕೊಂಡಿತ್ತು. ಆದರೆ ಆಕೆಯ ಸಾವಿನಿಂದ, ಈ ಘೋರ ಘಟನೆಯಿಂದ ಇಡೀ ಮದುವೆ ಮನೆ ಸ್ಮಶಾನದಂತಾಯಿತು!

ವಧುವಿನ ತಂದೆಯಿಂದ ಪೊಲೀಸ್ ಠಾಣೆಗೆ ದೂರು

ಮೃತ ವಧು ಕಾಜಲ್ ತಂದೆ ಖುಬಿ ರಾಮ್ ಪ್ರಜಾಪತಿ ಘಟನೆ ಕುರಿತಂತೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆಕೆಯ ಎಡಗಣ್ಣಿನ ಬಳಿ ಗುಂಡು ತಗುಲಿದ್ದರಿಂದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಹೀಗೆಲ್ಲ ಆಗಿದೆ ಎಂದೇ ನನಗೆ ನಂಬಲು ಆಗುತ್ತಿಲ್ಲ ಅಂತ ಕಣ್ಣೀರಿಟ್ಟಿದ್ದಾರೆ. ಇನ್ನು ಆರೋಪಿ ಅನೀಶ್ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಭಾರತದಲ್ಲಿ 24ಗಂಟೆಯಲ್ಲಿ 3,688 ಕೋವಿಡ್ ಪ್ರಕರಣ ಪತ್ತೆ, 50 ಮಂದಿ ಸಾವು

Sat Apr 30 , 2022
  ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 3,688 ಕೋವಿಡ್ 19 ಸೋಂಕು ಪ್ರಕರಣ ಪತ್ತೆಯಾಗಿದ್ದು, 50 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ (ಏಪ್ರಿಲ್ 30) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ. ದೇಶದಲ್ಲಿನ ಕೋವಿಡ್ 19 ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 4,30,75,864ಕ್ಕೆ ಏರಿಕೆಯಾಗಿದೆ. ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 18,684ಕ್ಕೆ ತಲುಪಿದೆ ಎಂದು ಸಚಿವಾಲಯದ ಅಂಕಿಅಂಶದಲ್ಲಿ ಹೇಳಿದೆ. ಒಂದೇ ದಿನದಲ್ಲಿ 2,755 ಮಂದಿ ಕೋವಿಡ್ 19 ಸೋಂಕಿನಿಂದ ಗುಣಮುಖರಾಗಿದ್ದಾರೆ. […]

Advertisement

Wordpress Social Share Plugin powered by Ultimatelysocial