ಮನೆ ಖರೀದಿಸುವ ಮಧ್ಯಮ ವರ್ಗದ ಕನಸು ನನಸಾಗುವುದೇ?!

ಬೆಂಗಳೂರು, ಫೆಬ್ರವರಿ. 17: ಸಿಲಿಕಾನ್ ಸಿಟಿಯಲ್ಲಿ ಸ್ವಂತ ಮನೆ ಮಾಡಿಕೊಳ್ಳಬೇಕು ಎಂಬ ಎಷ್ಟೋ ಮಧ್ಯಮ ವರ್ಗದ ಜನರ ಕನಸು. ಇದಕ್ಕಾಗಿ ತಮ್ಮ ದುಡಿಮೆಯ ಬಹುಪಾಲನ್ನು ಕೂಡಿಡುತ್ತಾರೆ. ಒಂದು ಪುಟ್ಟ್ ಮನೆಗಾಗಿ ಸೈಟ್ ತೆಗೆದುಕೊಳ್ಳುವುದರಿಂದ ಹಿಡಿದು ಗೃಹ ಪ್ರವೇಶ ಮಾಡುವಷ್ಟರಲ್ಲಿ ಸಾಕು ಸಾಕಾಗಿರುತ್ತದೆ.

ಆದರೂ ಒಮದು ಕನಸಿನ ಸೂರಿಗಾಗಿ ಕಷ್ಟಪಡುತ್ತಾರೆ.

ಆದರೆ, ಸಿಲಿಕಾನ್ ಸಿಟಿಯಲ್ಲಿ ಸ್ವಂತ ಮನೆಯ ಆಸೆ ದಿನದಿಂದ ದಿನಕ್ಕೆ ಗಗನ ಕುಸುಮವಾಗಿ ಪರಿಣಮಿಸುತ್ತಿದೆ. ಗಗನಕ್ಕೇರುತ್ತಿರುವ ಆಸ್ತಿ ಬೆಲೆಗಳ ಜೊತೆಗೆ, ಹೆಚ್ಚುತ್ತಿರುವ ಗೃಹ ಸಾಲದ ಬಡ್ಡಿದರಗಳು ಮಧ್ಯಮ ವರ್ಗವನ್ನು ಮನೆ ಹೊಂದುವ ಕನಸಿನಿಂದ ದೂರ ಮಾಡುತ್ತಿವೆ.

ಯಲಹಂಕ, ಹೆಬ್ಬಾಳದಲ್ಲಿ ಮನೆ ಬೆಲೆ ಕೇಳಿದರೇ ಶಾಕ್!

ಖಾಸಗಿ ಕಾಲೇಜಿನ ಬೋಧಕ ವಿನೋದ್ ಕಾಳಪ್ಪ ಅವರು ಉತ್ತರ ಬೆಂಗಳೂರಿನಲ್ಲಿ ಎರಡು ಬೆಡ್‌ರೂಮ್ ಫ್ಲಾಟ್ ಖರೀದಿಸಲು ಯೋಜಿಸಿದ್ದರು. ಆದರೆ, ಸಹಕಾರನಗರ, ಯಲಹಂಕ ಮತ್ತು ಹೆಬ್ಬಾಳದಲ್ಲಿ ಮನೆಯ ಬೆಲೆ 50 ರಿಂದ 55 ಲಕ್ಷ ರೂಪಾಯಿಯಿದ್ದು, ಮನೆ ತೆಗೆದುಕೊಳ್ಳುವ ಅವರ ಆಸೆಗೆ ತಣ್ಣೀರು ಎರಚಿದೆ.

“ನನ್ನ ಬಜೆಟ್‌ನಲ್ಲಿ ದೇವನಹಳ್ಳಿ ಅಥವಾ ರಾಜಾನುಕುಂಟೆ ಬಳಿ ಮಾತ್ರ ಮನೆ ಕಟ್ಟಲು ಸಾಧ್ಯ. ಆದರೆ ಅದು ನಗರದಿಂದ ದೂರವಿದೆ. ಆಸ್ತಿ ಬೆಲೆ ಹೆಚ್ಚಾಗಿದೆ, ಆದರೆ ನನ್ನ ಸಂಬಳ ಮೂರು ವರ್ಷಗಳಿಂದ ಕುಂಠಿತವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮನೆಕೊಳ್ಳುವ ಆಸೆಯಿಂದ ಹೊರಗಟ್ಟಿದೆ ಕನಿಷ್ಠ ವೇತನ ಹೆಚ್ಚಳ!

ಗಗನಕ್ಕೇರುತ್ತಿರುವ ಭೂಮಿಯ ಬೆಲೆಗಳ ಜೊತೆಗೆ, ಹೆಚ್ಚುತ್ತಿರುವ ಗೃಹ ಸಾಲದ ಬಡ್ಡಿದರಗಳು ಮತ್ತು ಕನಿಷ್ಠ ವೇತನ ಹೆಚ್ಚಳವು ಬೆಂಗಳೂರು ಮತ್ತು ರಾಜ್ಯದ ಇತರೆಡೆಗಳಲ್ಲಿ ಮಧ್ಯಮ ವರ್ಗದವರನ್ನು ರಿಯಲ್ ಎಸ್ಟೇಟ್ ಮಾರುಕಟ್ಟೆಯಿಂದ ಹೊರಗಿಟ್ಟಿದೆ.

ಬೆಂಗಳೂರಿನಲ್ಲಿ, ರಿಯಲ್ ಎಸ್ಟೇಟ್ ಮಾರುಕಟ್ಟೆ ಬೆಳೆಯುತ್ತಲೇ ಇದೆ. ಇದರಿಂದ ಬೆಂಗಳೂರು ಹೊರವಲಯದಲ್ಲಿ ಭೂಮಿಯ ಬೆಲೆಗಳನ್ನು ಹೆಚ್ಚಿದೆ. ಮಾಸಿಕ ಆದಾಯ 30,000 ಮತ್ತು 50,000 ರೂ.ಗಳ ನಡುವೆ ಇರುವವರು ಮನೆ ಖರೀದಿಸುವ ಯಾವ ಭರವಸೆಯನ್ನು ಹೊಂದಿರುವುದಿಲ್ಲ.

2010 ರಲ್ಲಿ ಪ್ರತಿ ಚದರ ಅಡಿಗೆ 1,200 ರೂಪಾಯಿ!

“2010-11ರಲ್ಲಿ ಪ್ರತಿ ಚದರ ಅಡಿಗೆ 2,000 ರೂ.ಗಳಿಂದ 2,500 ರೂಪಾಯಿಗೆ ಮತ್ತು 2022 ರಲ್ಲಿ 4,000 ರಿಂದ 5,000 ರೂ.ಗಳಿಗೆ ಏರಿಕೆಯಾಗಿದ್ದು, ಹೊರವಲಯದಲ್ಲಿ ಭೂಮಿಯ ಬೆಲೆಗಳು ಹೆಚ್ಚಿವೆ” ಎಂದು ಹೆಸರಾಂತ ರಿಯಲ್ ಎಸ್ಟೇಟ್ ಉದ್ಯಮಿ ಹೇಳಿದ್ದಾರೆ.

“2010 ರಲ್ಲಿ ಫ್ಲಾಟ್‌ನ ಪ್ರತಿ ಚದರ ಅಡಿ ಮೂಲ ಬೆಲೆಯು ಸುಮಾರು 1,200 ರೂ.ಗಳಷ್ಟಿತ್ತು. 2018 ರಲ್ಲಿ ಇದು ಪ್ರತಿ ಚದರ ಅಡಿಗೆ 3,000 ರೂ.ಗೆ ಏರಿತು. ಪ್ರಸ್ತುತ ಬೆಲೆಯು 4,500 ರಿಂದ 6,500 ರ ನಡುವೆ ಇದೆ” ಎಂದು ಮಾಹಿತಿ ನೀಡಿದ್ದಾರೆ.

ಸರ್ಕಾರದಿಂದ ‘ಎಲ್ಲರಿಗೂ ಕೈಗೆಟಕುವ ದರದಲ್ಲಿ ವಸತಿ’ ಎಂಬ ಮಂತ್ರ

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ‘ಎಲ್ಲರಿಗೂ ಕೈಗೆಟಕುವ ದರದಲ್ಲಿ ವಸತಿ’ ಎಂಬ ಮಂತ್ರವನ್ನು ಜಪಿಸುತ್ತಾ ಬಂದರೂ ಅದು ಯಶಸ್ಸು ಕಾಣುತ್ತಿಲ್ಲ. ಕೇಂದ್ರವು ಇತ್ತೀಚೆಗೆ ತನ್ನ ಪ್ರಮುಖ ಕಾರ್ಯಕ್ರಮವಾದ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಹಂಚಿಕೆಯಲ್ಲಿ 66% ಹೆಚ್ಚಳವನ್ನು ಘೋಷಿಸಿತು, ಆದರೆ ಕರ್ನಾಟಕದಲ್ಲಿ ಇದರ ಬಳಕೆ ಕಡಿಮೆಯಾಗಿದೆ.

ಕರ್ನಾಟಕ ಕೈಗೆಟಕುವ ದರದಲ್ಲಿ ವಸತಿ ನೀತಿ-2016 ರಲ್ಲಿ 21 ಲಕ್ಷ ಕುಟುಂಬಗಳಿಗೆ ವಸತಿ ಅಗತ್ಯವಿದೆ ಎಂದು ಅಂದಾಜಿಸಲಾಗಿತ್ತು, ಆದರೆ ಇದುವರೆಗೆ ಕರ್ನಾಟಕವು ಗುರಿಯ ಸುಮಾರು 30% ಮಾತ್ರ ಪೂರ್ಣಗೊಳಿಸಿದೆ. ಪ್ರಖ್ಯಾತ ಡೆವಲಪರ್‌ಗಳು ‘ಕೈಗೆಟಕುವ ದರದಲ್ಲಿ ವಸತಿ’ ಯೋಜನೆಯಿಂದ ದೂರ ಸರಿಯುತ್ತಿದ್ದಾರೆ.

ಸಿಲ್ವರ್‌ಲೈನ್ ಗ್ರೂಪ್‌ನ ಸಿಎಂಡಿ ಫಾರೂಕ್ ಮಹಮೂದ್ ಮಾತನಾಡಿ, ರಾಜ್ಯ ಬಜೆಟ್‌ನಲ್ಲಿ ಸರ್ಕಾರವು ವಿವಿಧ ಪರಿಹಾರಗಳನ್ನು ನೀಡುವ ಮೂಲಕ ಮಧ್ಯಮ ವರ್ಗದವರಿಗೆ ಸಹಾಯ ಮಾಡಬಹುದು. ಸಣ್ಣ ಉದ್ಯಮಗಳಿಗೆ ಆರ್ಥಿಕ ನೆರವು ನೀಡುವ ಮೂಲಕ, ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮತ್ತು ಆದಾಯದ ಅಸಮಾನತೆಯನ್ನು ಕಡಿಮೆ ಮಾಡುವ ಮೂಲಕ ಮಧ್ಯಮ ವರ್ಗದ ಜನರು ಎದುರಿಸುತ್ತಿರುವ ಆರ್ಥಿಕ ಸವಾಲುಗಳ ಮೂಲ ಕಾರಣವನ್ನು ಸರಕಾರವು ಪರಿಹರಿಸಬೇಕು” ಎಂದಿದ್ದಾರೆ.

ಕ್ರೆಡೈ ಬೆಂಗಳೂರು ಅಧ್ಯಕ್ಷ ಸುರೇಶ್ ಹರಿ ಮಾತನಾಡಿ, ಸರ್ಕಾರ ಪ್ರೋತ್ಸಾಹ ನೀಡದಿದ್ದರೆ ಮಧ್ಯಮ ವರ್ಗದವರಿಗೆ ಸ್ವಂತ ಮನೆ ಕನಸಾಗಿ ಉಳಿಯುತ್ತದೆ ಎಂದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಡವರ ಜೊತೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಅಮಾನವೀಯ ವರ್ತನೆ

Fri Feb 17 , 2023
ಬಡವರ ಜೊತೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಅಮಾನವೀಯ ವರ್ತನೆ ತೋರಿಸುತ್ತಿರುವ ಹಲವಾರು ಪ್ರಕರಣಗಳು ಪದೇ ಪದೇ ಬೆಳಕಿಗೆ ಬರುತ್ತಲೇ ಇವೆ. ಇದಕ್ಕೆ ಈಗ ಮತ್ತೊಂದು ಸೇರ್ಪಡೆಯಾಗಿದ್ದು, ಅಂಬುಲೆನ್ಸ್ ನೀಡಲು ನಿರಾಕರಿಸಿದ್ದಕ್ಕೆ ದಂಪತಿ, ತಮ್ಮ ಮಗುವಿನ ಶವವನ್ನು ಬೈಕಿನಲ್ಲಿ ಕೊಂಡೊಯ್ದಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣಂ ನಲ್ಲಿ ಈ ಘಟನೆ ನಡೆದಿದ್ದು, ಮುಂಚಿಗಪಟ್ಟುವಿನ ಕುಮದು ಗ್ರಾಮದಲ್ಲಿ ಮಹೇಶ್ವರಿ ಎಂಬವರಿಗೆ ಫೆಬ್ರವರಿ ಎರಡರಂದು ಮಗು ಜನಿಸಿತ್ತು. ಮಗುವಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಶಾಖಪಟ್ಟಣಂನ ಕೆಜಿ ಸರ್ಕಾರಿ […]

Advertisement

Wordpress Social Share Plugin powered by Ultimatelysocial