ಕೆಜಿಎಫ್-2 ಎಫೆಕ್ಟ್.ಕರಣ್ ಜೋಹರ್ ಬರ್ತ್ಡೇ ಪಾರ್ಟಿಗೆ ಕನ್ನಡದ ಸೆಲೆಬ್ರಿಟಿಗಳಿಗೂ ಆಹ್ವಾನ..!

ಬಾಲಿವುಡ್‌ನ ಖ್ಯಾತ ನಿರೂಪಕ, ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹಾರ್ ಇದೇ ತಿಂಗಳು ಮೇ 25ಕ್ಕೆ ಅವರಿಗೆ 50 ವರ್ಷ. ಈ ಬಾರಿಯ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲೇ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿ ಅವರು ದಕ್ಷಿಣದ ಅನೇಕ ಸ್ಟಾರ್ ನಟರನ್ನು ಮತ್ತು ನಿರ್ದೇಶಕರನ್ನು ತಮ್ಮ ಹುಟ್ಟುಹಬ್ಬದ ಪಾರ್ಟಿಗೆ ಆಹ್ವಾನಿಸುತ್ತಿದ್ದಾರೆ ಎನ್ನುವ ಸುದ್ದಿ ಸಿಕ್ಕಿದೆ.

ಕರಣ್ ಜೋಹಾರ್ ಹುಟ್ಟುಹಬ್ಬವೆಂದರೆ ಬಿಟೌನ್‌ನಲ್ಲಿ ವಿಶೇಷತೆ ಇದ್ದೇ ಇರುತ್ತದೆ. ಬಹುತೇಕ ಬಾಲಿವುಡ್ ಸಿಲೆಬ್ರಿಟಿಗಳು ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುತ್ತಾರೆ.

ಈ ಬಾರಿಯ ಸ್ಪೆಷಲ್ ಅಂದರೆ, ಕನ್ನಡದ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ತೆಲುಗಿನ ಜೂನಿಯರ್ ಎನ್‌ಟಿಆರ್‌ ಹಾಗೂ ರಾಜಮೌಳಿ ಸೇರಿದಂತೆ ಹಲವು ಸಿಲೆಬ್ರಿಟಿಗಳನ್ನು ಆಹ್ವಾನಿಸಿದ್ದಾರಂತೆ. ಕರಣ್ ಜೋಹಾರ್ ಕೆಜಿಎಫ್ 2 ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಹೋಸ್ಟ್ ಮಾಡಿದ್ದರು. ಆ ಮೂಲಕ ದಕ್ಷಿಣದ ಮೊದಲ ಕಾರ್ಯಕ್ರಮದಲ್ಲಿ ಅವರು ನಿರೂಪಕರಾಗಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಯಶ್ ಮತ್ತು ಅವರ ಮಧ್ಯ ಒಂದೊಳ್ಳೆ ಬಾಂಧವ್ಯವೂ ಏರ್ಪಟ್ಟಿದೆ.

ಇ ದೆಲ್ಲ ಕಾರಣಕ್ಕಾಗಿ ಈ ಬಾರಿ ಯಶ್ ಅವರು ಕರಣ್ ಜೋಹಾರ್ ಅವರ ಬರ್ತ್‌ಡೇ ಪಾರ್ಟಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನುವ ಮಾಹಿತಿ ಇದೆ. ಐವತ್ತು ವರ್ಷ ತುಂಬಿದ ಸಂದರ್ಭದಲ್ಲಿ ವಿಭಿನ್ನ ರೀತಿಯಲ್ಲೇ ಕರಣ್ ಜೋಹಾರ್ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರಂತೆ. ಅಲ್ಲದೇ ಈವರೆಗೂ ತಮ್ಮ ಸಿನಿಮಾದಲ್ಲಿ ಕೆಲಸ ಮಾಡಿದ ಬಹುತೇಕ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಆಹ್ವಾನ ಹೋಗಿದೆಯಂತೆ. ಇದೊಂದು ರೀತಿಯಲ್ಲಿ ಬರ್ತ್‌ಡೇ ಪಾರ್ಟಿ ಅನ್ನುವುದಕ್ಕಿಂತ ಧನ್ಯವಾಗಳನ್ನು ಹೇಳುವ ಕಾರ್ಯಕ್ರಮವಾಗಿ ರೂಪುಗೊಂಡಿದೆ ಎನ್ನುತ್ತಿದೆ ಬಿಟೌನ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸೌಂದರ್ಯವರ್ಧಕವಾಗಿ ಬಾಳೆಹಣ್ಣು...!

Wed May 18 , 2022
ಬಾಳೆ ಹಣ್ಣು ತಿನ್ನುವುದರಿಂದ ದೇಹದ ಆರೋಗ್ಯ ಸುಧಾರಣೆಯಾಗುವಂತೆ, ಸೌಂದರ್ಯವರ್ಧಕ ಉತ್ಪನ್ನವಾಗಿ ಬಳಸುವುದರ ಮೂಲಕವೂ ಸೌಂದರ್ಯ ವೃದ್ಧಿಸಿಕೊಳ್ಳಬಹುದು. ಹೇಗೆ ಅಂತ ನೋಡಿ. * ಇದರಲ್ಲಿ ಇರುವ ಪೊಟ್ಯಾಸಿಯಂ ಗುಣ ಒಣ ಚರ್ಮವನ್ನು ಹೆಚ್ಚು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. * ಬಾಳೆಹಣ್ಣು ಅತ್ಯುತ್ತಮ ಎಕ್ಸಫೋಲಿಯೇಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಚರ್ಮದ ಮೇಲಿನ ಜಿಡ್ಡಿನಂಶವನ್ನು ನಿಯಂತ್ರಣದಲ್ಲಿ ಇಡುತ್ತದೆ. * ನೈಸರ್ಗಿಕವಾಗಿ ಸುಕ್ಕುಗಟ್ಟುವುದನ್ನು ತಡೆಯಬೇಕೆಂದರೆ ಬಾಳೆಹಣ್ಣಿನ ಸೇವನೆ ಹಾಗೂ ಚರ್ಮದ ಮೇಲೆ ಬಾಳೆಹಣ್ಣಿನ ಲೇಪನ ಹೊಂದುವುದು ಸೂಕ್ತ. […]

Advertisement

Wordpress Social Share Plugin powered by Ultimatelysocial