‘ಕೆಜಿಎಫ್ 2’ ವೀಕ್ಷಿಸಿದ ಶಿವಣ್ಣ, ಯಶ್ ಬಗ್ಗೆ ಹೇಳಿದ್ದು ಹೀಗೆ!

‘ಕೆಜಿಎಫ್ 2’ ಸಿನಿಮಾ ವಿಶ್ವದಾದ್ಯಂತ ಮನ್ನಣೆ ಗಳಿಸಿದೆ. ಸಿನಿಮಾವನ್ನು ಭಾರತದ ದೊಡ್ಡ ದೊಡ್ಡ ಸ್ಟಾರ್ ನಟ, ನಿರ್ದೇಶಖರು, ತಂತ್ರಜ್ಞರು ನೋಡಿ ಮೆಚ್ಚಿ ತಲೆದೂಗಿದ್ದಾರೆ. ಇದೀಗ ನಟ ಶಿವರಾಜ್ ಕುಮಾರ್ ಸಹ ‘ಕೆಜಿಎಫ್ 2’ ಸಿನಿಮಾ ವೀಕ್ಷಿಸಿದ್ದು ಸಿನಿಮಾವನ್ನು ಹಾಡಿ ಹೊಗಳಿದ್ದಾರೆ.

ಜೊತೆಗೆ ಯಶ್‌ ಬಗ್ಗೆಯೂ ಮಾತನಾಡಿದ್ದಾರೆ.

”ಸಿನಿಮಾ ಚೆನ್ನಾಗಿದೆ. ಒಳ್ಳೆಯ ಫೋರ್ಸ್ ಸಿನಿಮಾದಲ್ಲಿದೆ. ಸಿನಿಮಾಟೊಗ್ರಫಿ, ಸಂಗೀತ ಎಲ್ಲವೂ ಚೆನ್ನಾಗಿದೆ. ಯಶ್ ಅದ್ಭುತವಾಗಿ ಕಾಣ್ತಾರೆ. ಕೆಲವು ಸೀನ್ಸ್ ಅದ್ಭುತವಾಗಿವೆ. ಚೆನ್ನಾಗಿ ಕತೆಯನ್ನು ತೆರೆಗೆ ತಂದಿದ್ದಾರೆ” ಎಂದು ಹೊಗಳಿದರು ಶಿವರಾಜ್ ಕುಮಾರ್.

ಸಿನಿಮಾ ಅದ್ಭುವಾಗಿ ಕಲೆಕ್ಷನ್ ಮಾಡುತ್ತಿರುವ ಕುರಿತು ಮಾತನಾಡಿದ ಶಿವರಾಜ್ ಕುಮಾರ್, ”ಕನ್ನಡದಿಂದ ಬಂದವರು ಯಾರೇ ಬೆಳೆದರು ನನಗೆ ಬಹಳ ಹೆಮ್ಮೆ. ಯಶ್ ನನಗೆ ಮೊದಲಿನಿಂದಲೂ ಬಹಳ ಇಷ್ಟ. ಯಶ್ ಆರಂಭದ ದಿನದಲ್ಲೇ ಹೇಳುತ್ತಿದ್ದೆ, ತುಂಬಾ ಸ್ಮಾರ್ಟ್ ಆಗಿದ್ದೀಯ ಎಂದು. ಬಹಳ ಎತ್ತರಕ್ಕೆ ಬೆಳೆಯುತ್ತೀಯ ಎಂದು ನಾನು ಈ ಹಿಂದೆಯೇ ಯಶ್‌ಗೆ ಹೇಳಿದ್ದೆ” ಎಂದು ನೆನಪು ಮಾಡಿಕೊಂಡರು ಯಶ್.

”ನನಗೆ ಆ ಹುಡುಗ (ಯಶ್) ಕಂಡರೆ ನನಗೆ ಬಹಳ ಪ್ರೀತಿ. ನಮ್ಮ ಕನ್ನಡ ಚಿತ್ರರಂಗದ ಎಲ್ಲ ಹಿರೋಗಳನ್ನು ಕಂಡರೆ ನನಗೆ ಬಹಳ ಪ್ರೀತಿ, ಆದರೆ ಯಶ್‌ ಮೇಲೆ ಪ್ರತ್ಯೇಕವಾಗಿ ಪ್ರೀತಿ ಇದೆ. ಅದು ಏಕೆಂದು ನನಗೆ ಗೊತ್ತಿಲ್ಲ. ಯಶ್ ನೋಡಿದರೆ ನನಗೆ ನನ್ನ ತಮ್ಮನನ್ನು ನೋಡಿದ ಹಾಗಾಗುತ್ತದೆ. ಒಳ್ಳೆಯ ಎನರ್ಜಿ, ಕುತೂಹಲ, ಶ್ರಮಪಟ್ಟು ಕೆಲಸ ಮಾಡುವ ಹಂಬಲ ಯಶ್‌ಗೆ ಇದೆ” ಎಂದರು ಶಿವರಾಜ್ ಕುಮಾರ್.

ಶಿವರಾಜ್ ಕುಮಾರ್ ಸಾಮಾನ್ಯವಾಗಿ ಕನ್ನಡದ ಬಹುತೇಕ ನಟರ ಸಿನಿಮಾಗಳನ್ನು, ಹೊಸಬರ ಸಿನಿಮಾಗಳನ್ನು ಸಹ ವೀಕ್ಷಿಸುತ್ತಾರೆ. ಎಲ್ಲರಿಗೂ ಬೆನ್ನುತಟ್ಟಿ ಪ್ರೋತ್ಸಾಹ ನೀಡುತ್ತಾರೆ. ಡಾಲಿ ಧನಂಜಯ್ ನಟನೆಯ ‘ಬಡವ ರಾಸ್ಕಲ್’ ಸಿನಿಮಾವನ್ನು ಮೈಸೂರಿನಲ್ಲಿ ವೀಕ್ಷಿಸಿ ಡಾಲಿಯನ್ನು ಬಹುವಾಗಿ ಹೊಗಳಿದ್ದರು ಶಿವಣ್ಣ. ಕನ್ನಡ ಸಿನಿಮಾಗಳ ಮೇಲೆ, ಚಿತ್ರರಂಗದ ಮೇಲೆ ಅಪಾರ ಪ್ರೀತಿಯುಳ್ಳ ಶಿವಣ್ಣ, ಒಳ್ಳೆಯ ಎಲ್ಲ ಸಿನಿಮಾಗಳನ್ನು ವೀಕ್ಷಿಸಿ ಆ ಸಿನಿಮಾದ ತಂತ್ರಜ್ಞರಿಗೆ, ನಟರಿಗೆ ಅಭಿನಂದನೆ ತಿಳಿಸುತ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಥಲಸ್ಸೆಮಿಯಾ ರೋಗದ ಬಗ್ಗೆ ಎಂದಾದರೂ ಕೇಳಿದ್ದೀರಾ?

Sat May 7 , 2022
  ಹೌದು, ಇದೊಂದು ಅಣುವಂಶೀಕವಾಗಿ ತಂದೆ-ತಾಯಿಯಿಂದ ಮಕ್ಕಳಿಗೆ ಬರುವ ರಕ್ತದ ಕಾಯಿಲೆಯಾಗಿದೆ. ಈ ಕಾಯಿಲೆಯ ಲಕ್ಷಣ ಅದರ ಚಿಕಿತ್ಸೆಯ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಮೇ 8ರಂದು ವಿಶ್ವ ಥಲಸ್ಸೆಮಿಯಾ ದಿನವನ್ನು ಆಚರಿಸಲಾಗುವುದು. ಜೊತೆಗೆ ಈ ಥಲಸ್ಸೆಮಿಯಾದಿಂದ ಬಳಲುತ್ತಿರುವ ಎಲ್ಲಾ ರೋಗಿಗಳು ಮತ್ತು ಅವರ ಕಾಯಿಲೆಯ ಹೊರೆಯ ಹೊರತಾಗಿಯೂ ಜೀವನದ ಭರವಸೆಯನ್ನು ಎಂದಿಗೂ ಕಳೆದುಕೊಳ್ಳದ ಅವರ ಹೆತ್ತವರ ಗೌರವಾರ್ಥವಾಗಿ ಮತ್ತು ಸಮರ್ಪಣಾ ಮನೋಭಾವದಿಂದ ಶ್ರಮಿಸುತ್ತಿರುವ ಮತ್ತು ಸುಧಾರಿತ […]

Advertisement

Wordpress Social Share Plugin powered by Ultimatelysocial