CRICKET:ಲಕ್ನೋ-ಅಹಮದಾಬಾದ್ ಅಲ್ಲ, ಶ್ರೇಯಸ್ ಅಯ್ಯರ್ ಈ ತಂಡದ ನಾಯಕನಾಗಬಹುದು!

ನವದೆಹಲಿ: ಐಪಿಎಲ್ ಮೆಗಾ ಹರಾಜಿನ(IPL Mega Auction) ಬಗ್ಗೆ ಕಾತುರ ಹೆಚ್ಚಾಗುತ್ತಿದೆ. ಅಹಮದಾಬಾದ್ ತಂಡ ಮೂವರು ಸ್ಫೋಟಕ ಆಟಗಾರರನ್ನು ಆಯ್ಕೆ ಮಾಡುವ ಮೂಲಕ ಎದುರಾಳಿಗಳನ್ನು ಸೋಲಿಸಿದೆ. ಶ್ರೇಯಸ್ ಅಯ್ಯರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡಿಲ್ಲ.

ಇಂತಹ ಪರಿಸ್ಥಿತಿಯಲ್ಲಿ ಅವರು ಐಪಿಎಲ್ ಮೆಗಾ ಹರಾಜಿಗೆ ಪ್ರವೇಶಿಸುವುದು ಖಚಿತವಾಗಿದೆ. ಐಪಿಎಲ್ ಮೆಗಾ ಹರಾಜಿನಲ್ಲಿ ಶ್ರೇಯಸ್ ಅಯ್ಯರ್(Shreyas Iyer) ದೊಡ್ಡ ಬಿಡ್ ಪಡೆಯಬಹುದು. ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಲು ಮೂರು ತಂಡಗಳ ನಡುವೆ ಪೈಪೋಟಿ ನಡೆಯುತ್ತಿದೆ.

ಅಯ್ಯರ್ ಒಬ್ಬ ಶ್ರೇಷ್ಠ ಬ್ಯಾಟ್ಸ್‌ ಮನ್

ಬಿರುಸಿನ ಬ್ಯಾಟಿಂಗ್‌ನ ಹೊರತಾಗಿ ಶ್ರೇಯಸ್ ಅಯ್ಯರ್ (Shreyas Iyer)ಅತ್ಯುತ್ತಮ ನಾಯಕತ್ವಕ್ಕೂ ಹೆಸರುವಾಸಿಯಾಗಿದ್ದಾರೆ. ಅವರ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫೈನಲ್‌ವರೆಗೆ ಪ್ರಯಾಣಿಸಿತ್ತು. ಅವರು ಬೌಲಿಂಗ್ ವಿಭಾಗದಿಂದ ಪಂದ್ಯದ ಗತಿಯನ್ನೇ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಮೈದಾನದಲ್ಲಿ ಬೌಲರ್‌ಗಳಿಗೆ ಅಗತ್ಯ ಸೂಚನೆಗಳನ್ನು ನೀಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಡುವ ತಂತ್ರಗಳನ್ನು ರೂಪಿಸುತ್ತಾರೆ. ಬ್ಯಾಟಿಂಗ್ ನಲ್ಲಿಯೂ ಮಿಂಚುವ ಅಯ್ಯರ್ ಡೆಲ್ಲಿ ತಂಡಕ್ಕೆ ಅನೇಕ ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಅಯ್ಯರ್ ಯಾವಾಗಲೂ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ನಿಪುಣರಾಗಿದ್ದಾರೆ. ತಮ್ಮ ಲಯದಲ್ಲಿದ್ದಾಗ ಅವರು ಯಾವುದೇ ಬೌಲಿಂಗ್ ಕ್ರಮಾಂಕವನ್ನು ದಿಟ್ಟವಾಗಿ ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶ್ರೀಲಂಕಾಗೆ 3750 ಕೋಟಿ ರೂಪಾಯಿ ಸಾಲದ ಆಫರ್ ನೀಡಿದ ಭಾರತ;

Tue Jan 18 , 2022
ಭಾರತ ಶ್ರೀಲಂಕಾಗೆ 3750 ಕೋಟಿ ರೂಪಾಯಿಯ ಸಾಲದ ಆಫರ್ ನೀಡಿದೆ. ಈ ಮೂಲಕ ಚೀನಾದ ಸಾಲದ ಸುಳಿ ಹಾಗೂ ವಿದೇಶೀ ವಿನಿಮಯ ಕೊರತೆಯಿಂದ ಬೆಂಡಾಗಿರೋ ಶ್ರೀಲಂಕಾ ನೆರವಿಗೆ ಭಾರತ ಧಾವಿಸಿದೆ. ಈ ಹಿಂದೆಯೂ ಭಾರತ ಸುಮಾರು 7೦೦೦ ಕೋಟಿ ರೂಪಾಯಿ ಸಹಾಯ ಮಾಡಿತ್ತು. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹಾಗೂ ಶ್ರೀಲಂಕಾದ ಹಣಕಾಸು ಸಚಿವ ಬಸಿಲ್ ರಾಜಪಕ್ಷಾ ಮಾತುಕತೆ ಬಳಿಕ ಭಾರತ ಈ ಸಹಾಯದ ನಿರ್ಧಾರ ಮಾಡಿದ್ದಾರೆ. ಇತ್ತೀಚಿನ […]

Advertisement

Wordpress Social Share Plugin powered by Ultimatelysocial