ಏಲಕ್ಕಿ ಚರ್ಮದ ಸಮಸ್ಯೆಗೆ ರಾಮಬಾಣ !

ಏಲಕ್ಕಿ ನಮ್ಮ ಆಹಾರದ ಒಂದು ಭಾಗ.
ರುಚಿ ಮತ್ತು ಸುವಾಸನೆ ಹೆಚ್ಚು ಮಾಡುವಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಏಲಕ್ಕಿಯಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿದೆ.
ಇದು ತ್ವಚೆ ಮತ್ತು ಕೂದಲಿನ ಆರೈಕೆಯಲ್ಲಿ ಸಹ ಸಹಾಯ ಮಾಡುತ್ತದೆ. ಆಶ್ಚರ್ಯವಾದ್ರೂ ಸತ್ಯ. ಏಲಕ್ಕಿಯನ್ನು ಬಳಸಿ ನಾವು ಕೂದಲು ಮತ್ತು ತ್ವಚೆಯ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಹೇಗೆ ಎಂಬುದು ಇಲ್ಲಿದೆ.

ಏಲಕ್ಕಿಯನ್ನು ಫೇಸ್ ಪ್ಯಾಕ್ ಆಗಿ ಸಹ ಬಳಕೆ ಮಾಡಬಹುದು. ಇದರಲ್ಲಿ ಹೆಚ್ಚಿನ ಉರಿಯೂತ ಶಮನಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇದ್ದು, ಚರ್ಮದ ಆರೋಗ್ಯ ಕಾಪಾಡಲು ಸಹಕಾರಿ ಎನ್ನಲಾಗುತ್ತದೆ. ಏಲಕ್ಕಿಯಲ್ಲಿ ಇರುವಂತಹ ಸಾರಭೂತ ಎಣ್ಣೆಯು ಮುಖದ ಮೇಲಿನ ಕಪ್ಪು ಕಲೆಗಳು ಮತ್ತು ಮೊಡವೆ ಕಲೆಗಳನ್ನು ನಿವಾರಣೆ ಮಾಡಲು ಹೆಚ್ಚು ಸಹಕಾರಿ.

ನೀವು ಏಲಕ್ಕಿ ಪುಡಿಯನ್ನು ನೀರಿನ ಜೊತೆ ಕಲಸಿ ಫೇಸ್ಪ್ಯಾಕ್ ರೀತಿ ಹಚ್ಚಿ, 15 ನಿಮಿಷ ಬಿಟ್ಟು ತೊಳೆಯಿರಿ.
ಇದು ಚರ್ಮಕ್ಕೆ ಒಳ್ಳೆಯ ಕಾಂತಿ ನೀಡುತ್ತದೆ, ಏಲಕ್ಕಿ ಪುಡಿಯನ್ನು ಜೇನುತುಪ್ಪದ ಜತೆಗೆ ಬೆರೆಸಿಕೊಂಡು ಮುಖಕ್ಕೆ ಹಚ್ಚಿ. ಇದನ್ನು ನಿಯಮಿತವಾಗಿ ಬಳಕೆ ಮಾಡುವುದು ನಿಮ್ಮ ತ್ವಚೆಯ ಸಮಸ್ಯೆಯನ್ನು ಬಗೆಹರಿಸುತ್ತದೆ.

ಕಪ್ಪು ಏಲಕ್ಕಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು, ಚರ್ಮದ ಅಲರ್ಜಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಪ್ಪು ಏಲಕ್ಕಿ ಪುಡಿ ಮತ್ತು ಜೇನುತುಪ್ಪ ಸೇರಿಸಿ ಪೇಸ್ಟ್ ಮಾಡಿ ಅಲರ್ಜಿ ಇರುವ ಜಾಗಕ್ಕೆ ಹಚ್ಚಿ.

ಏಲಕ್ಕಿ ನಮ್ಮ ಬಾಯಿಯ ದುರ್ವಾಸನೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೆಯೆ ಇದನ್ನ ಚರ್ಮದ ಟೋನರ್ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತದೆ. ಇದು ಚರ್ಮಕ್ಕೆ ತಾಜಾತನ ನೀಡುತ್ತದೆ.

ಏಲಕ್ಕಿಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ತಲೆಯ ಸೋಂಕನ್ನು ನಿವಾರಣೆ ಮಾಡುತ್ತದೆ. ಏಲಕ್ಕಿ ನೀರಿನಿಂದ ಕೂದಲನ್ನು ತೊಳೆದರೆ ತಲೆಹೊಟ್ಟು ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸೂರ್ಯನ ಕಿರಣದಿಂದ ದೂರವಾಗಲಿದೆ ಈ ರೋಗ

Tue Dec 21 , 2021
ಸೂರ್ಯನ ಕಿರಣ ಆರೋಗ್ಯಕ್ಕೆ ಪ್ರಯೋಜನಕಾರಿ. ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಮಾಹಿತಿ ಹೊರಬಿದ್ದಿದೆ. ಯುವಿ ಕಿರಣಗಳಿಗೆ ದೇಹವನ್ನು ಒಡ್ಡಿಕೊಳ್ಳುವುದರಿಂದ ವಿಟಮಿನ್-ಡಿ ಹೆಚ್ಚಾಗುತ್ತದೆ. ಇದು ಆಟೊ ಇಮ್ಯುನ್ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಸಂಶೋಧಕರ ಪ್ರಕಾರ, ಸೂರ್ಯನ ಬೆಳಕು ಎಲ್ಲಾ ವಯಸ್ಸಿನ ಜನರಿಗೆ ಪ್ರಯೋಜನಕಾರಿಯಾಗಿದೆ. ಸಂಶೋಧಕರು ಈ ಅಧ್ಯಯನದಲ್ಲಿ 332 ಜನರ ಮೇಲೆ ಅಧ್ಯಯನ ನಡೆಸಿದ್ದಾರೆ. ಮೂರರಿಂದ 22 ವರ್ಷ ವಯಸ್ಸಿನವರು ಅಧ್ಯಯನದಲ್ಲಿ ಪಾಲ್ಗೊಂಡಿದ್ದರು. ಇವರೆಲ್ಲ ಮಲ್ಟಿಪಲ್ ಸ್ಕ್ಲೆರೋಸಿಸ್ […]

Advertisement

Wordpress Social Share Plugin powered by Ultimatelysocial