ಕುಂಬಾರರ ಚುನಾವಣೆಯಲ್ಲಿ ಅಧಿಕಾರಿಗಳೇ ಅಕ್ರಮ ಮತಚಲಾವಣೆ!

ಆಂಕರ್: ಇತ್ತೀಚೆಗೆ ನಡೆದ ಕುಂಬಾರರ ಚುನಾವಣೆಯಲ್ಲಿ ಚುನಾವಣಾಧಿಕಾರಿಗಳೇ ಶಾಮೀಲಾಗಿ ಅಕ್ರಮ ಮತಚಲಾವಣೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಮಾರ್ಚ್ 27ರಂದು ಕುಂಬಾರರ ಸಂಘ ಕಲಾಸಿಪಾಳ್ಯ, ಈ ಸಂಘದ ಆಡಳಿತ ಮಂಡಳಿಗಾಗಿ ಚುನಾವಣಾ‌ ಮತದಾನ ನಡೆದಿರುತ್ತದೆ. ಈ ವೇಳೆ ಸರ್ಕಾರವೇ ನೇಮಿಸಿದ್ದ ಚುನಾವಣಾಧಿಕಾರಿ ಮಂಜುನಾಥ್ ಎಂ.ಪಿ ಸೇರಿದಂತೆ 120 ಮಂದಿ ಮತದಾನದಲ್ಲಿ ಅಕ್ರಮ‌ ನಡೆಸಿದ್ದಲ್ಲದೇ ಅವರೇ ಮತದಾರಾಗಿ ಸಾವಿರಾರು ಮತಗಳನ್ನ ಚಲಾವಣೆ ಮಾಡಿದ್ದಾರೆ. ಇದೆಲ್ಲವೂ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸಂಘದ ಹಾಲಿ ಸದಸ್ಯರುಗಳು ಸುದ್ದಿಗೋಷ್ಠಿ ನಡೆಸಿ ದಾಖಲೆ, ಸಿಸಿಟಿವಿ ವೀಡಿಯೋ ಸಮೇತ ಅಕ್ರಮವನ್ನ ಬಯಲು ಮಾಡಿದ್ದಾರೆ. ಅಲ್ಲದೆ ಅಕ್ರಮ ನಡೆಸಿ ಅಧಿಕಾರಿಗಳ ವಿರುದ್ದ ಕ್ರಮಿನಲ್ ಮೊಕದ್ದಮೆ ಹೂಡಬೇಕು. ಯಾಕಂದ್ರೆ ಕುಂಬಾರರ ಸಂಘದಲ್ಲಿ 700ಕೋಟಿಗೂ ಅದಿಕವಾದ ಹಣವಿದೆ. ಈ ಹಣವನ್ನ ದುರುಪಯೋಗ ಪಡಿಸಿಕೊಳ್ಳಲು ಸಂಚು ರೂಪಿಸಿದ್ದು, ಚುನಾವಣೆಗೆ ಸ್ಪರ್ದಿಸಿದ್ದ ಕೆಲವರೊಂದಿಗೆ ಕೈ ಜೋಡಿಸಿ ಅವರ ಪರವಾಗಿ ಅಕ್ರಮ ಮತಚಲಾವಣೆ ಮಾಡಲಾಗಿದೆ ಎಂದು ಮಾಜಿಸಿ ಸದಸ್ಯ‌ ನಾಗೇಶ್ ಎಂಬುವವರು ಆರೋಪಿಸಿದ್ರು. ಅಲ್ಲದೇ ಅಕ್ರಮ ನಡೆಸಿರುವ ಅಧಿಕಾರಿ ಮಂಜುನಾಥ್ ಎಂಪಿಯವರನ್ನ ಕೂಡಲೇ ಕೆಲಸದಿಂದ ವಜಾಗೊಳಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅಕ್ರಮ‌ವೆಸಗದಿವರ ವಿರುದ್ಧ ದೊಡ್ಡ ಮಟ್ಟದ ಮುಷ್ಕರ ಮಾಡೋದಾಗಿ ನಾಗೇಶ್ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಹೇಳಿಕೆ!

Tue Apr 26 , 2022
ಎರಡು ಮುಖ್ಯ ಅಂಶಗಳು, ಟೆಸ್ಟಿಂಗ್ ಹೆಚ್ಚಳ ಹಾಗೂ ಲಸಿಕೆ ಹಂಚಿಕೆ. ಪ್ರತೀದಿನ ಸರಾಸರಿ 4 ಸಾವಿರ ಟೆಸ್ಟಿಂಗ್ ಆಗುತ್ತಿದೆ.ಲಸಿಕೆ ಪಡೆದುಕೊಳ್ಳಲು ಕರೆ ಮಾಡಿ ತಿಳಿಸಲಾಗ್ತಿದೆ. ಇನ್ನೂ ಬೆಂಗಳೂರಲ್ಲಿ 3 ಲಕ್ಷ ಜನ ಎರಡನೇ ಡೋಸ್ ಅನ್ನೇ ಪಡೆದಿಲ್ಲಪ್ರತಿನಿತ್ಯ 80-100 ಪ್ರಕರಣಗಳು ದೃಢಪಡುತ್ತಿವೆ. ಬೆಂಗಳೂರಿನ ಪೂರ್ವ ಹಾಗೂ ಮಹದೇವಪುರ ವಲಯದಲ್ಲಿ ಹೆಚ್ಚಾಗುತ್ತಿವೆ.ಸೌಮ್ಯ ಗುಣಲಕ್ಷಣಗಳೇ ಇದಾವೆ. ಲಸಿಕೆ ಪಡೆಯದವರು, ಅನ್ಯ ಖಾಯಿಲೆ ಇರುವವರು ಕೋವಿಡ್ ಗೆ ಹೆಚ್ಚು ಒಳಗಾಗುವ ಸಾಧ್ಯತೆ ಇದೆ.ನಾಲ್ಕನೇ ಅಲೆ […]

Advertisement

Wordpress Social Share Plugin powered by Ultimatelysocial