ಯೂಟ್ಯೂಬ್​ ಹಣದಲ್ಲಿ ದುಬಾರಿ ಆಡಿ ಕಾರು ಖರೀದಿಸಿದ ಯುವಕ.

ಟನಾ: ಯೂಟ್ಯೂಬ್ (YouTube)​ ಅನೇಕರ ಜೀವನವನ್ನೇ ಬದಲಾಯಿಸಿದೆ. ಯೂಟ್ಯೂಬ್​ ವಿಡಿಯೋಗಳನ್ನು ಮಾಡುವ ಜನರು ಉದ್ಯೋಗಿಗಳಿಗಿಂತ ಹೆಚ್ಚಿನ ಹಣ ಸಂಪಾದನೆ ಮಾಡುತ್ತಿದ್ದಾರೆ. ಅಲ್ಲದೆ, ಖ್ಯಾತಿಯನ್ನು ತಂದುಕೊಡುತ್ತಿದೆ. ಬಿಹಾರ ಮೂಲದ ಯುವಕನೊಬ್ಬ ಯೂಟ್ಯೂಬ್​ ಸಂಪಾದನೆಯಲ್ಲಿ ದುಬಾರಿ ಆಡಿ ಕಾರು ಖರೀದಿಸುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

ಕೊಟ್ಟಿಗೆಯ ಪಕ್ಕದಲ್ಲಿ ಆಡಿ ಕಾರನ್ನು ಪಾರ್ಕ್​ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಂದಹಾಗೆ ಆ ಯುವಕನ ಹೆಸರು ಹರ್ಷ ರಜಪೂತ್​ (27). ಬಿಹಾರದ ಔರಂಗಬಾದ್​ನ ಜಸೋಯಾ ಗ್ರಾಮದ ನಿವಾಸಿ. ಮೂಲಗಳ ಪ್ರಕಾರ ಯೂಟ್ಯೂಬ್​ ವಿಡಿಯೋಗಳಿಂದ 8 ಲಕ್ಷ ರೂ. ಸಂಪಾದನೆ ಮಾಡುತ್ತಾನಂತೆ.

ಕರೊನಾ ಲಾಕ್‌ಡೌನ್ ಸಮಯದಲ್ಲಿ ಕಾಮಿಡಿ ವಿಡಿಯೊಗಳನ್ನು ಮಾಡಲು ಮತ್ತು ಅವುಗಳನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದರು. ಅವರ ಕಾಮಿಡಿ ಟೈಮಿಂಗ್ ಅನೇಕ ಜನರನ್ನು ಆಕರ್ಷಿಸಿತು. ಕೆಲವು ವಿಡಿಯೋಗಳಂತೂ ಸಿಕ್ಕಾಪಟ್ಟೆ ವೈರಲ್​ ಆಗಿವೆ. 10 ನಿಮಿಷದ ಕಾಮಿಡಿ ವಿಡಿಯೋ 20 ಮಿಲಿಯನ್ ವೀಕ್ಷಣೆ ಪಡೆದಿರುವುದು ಗಮನಾರ್ಹ. ಯೂಟ್ಯೂಬ್​ ಚಾನಲ್‌ ಗಳಿಕೆಯೊಂದಿಗೆ ಸುಮಾರು 50 ಲಕ್ಷ ರೂ. ಮೌಲ್ಯದ ಆಡಿ ಕಾರನ್ನು ಖರೀದಿಸಿದ್ದಾರೆ.

ವಿವಿಧ ವಿಷಯಗಳ ಕುರಿತು ಕಾಮಿಡಿ ವಿಡಿಯೋಗಳನ್ನು ಮಾಡುವುದು ಹರ್ಷ ರಜಪೂತ್ ಅವರ ವಿಶೇಷತೆಯಾಗಿದೆ. ಪ್ರಸ್ತುತ, ಹರ್ಷ ರಜಪೂತ್ ಅವರ ಯೂಟ್ಯೂಬ್ ಚಾನೆಲ್ 33 ಲಕ್ಷ ಚಂದಾದಾರರನ್ನು ಹೊಂದಿದೆ. ಜೂನ್ 2022 ರಿಂದ ಅಕ್ಟೋಬರ್ 2022ರವರೆಗೆ ಹರ್ಷ ಸರಾಸರಿ 4.5 ಲಕ್ಷ ರೂ. ಗಳಿಸಿದ್ದಾರೆ.

ಹರ್ಷ ಬಡ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಬಿಹಾರ ಪೊಲೀಸರಿಗೆ ಹೋಮ್ ಗಾರ್ಡ್ ಆಗಿ ಮತ್ತು ಪೊಲೀಸ್ ಅಧಿಕಾರಿಗಳಿಗೆ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಈ ಹಿಂದೆ ದೆಹಲಿಯಲ್ಲಿ ಥಿಯೇಟರ್ ಕೋರ್ಸ್ ಮಾಡಿದ್ದ ಹರ್ಷ, ನಟನೆಯಲ್ಲಿ ಆಸಕ್ತಿ ಇದ್ದಿದ್ದರಿಂದ ಅವಕಾಶಕ್ಕಾಗಿ ಮುಂಬೈಗೆ ಹೋಗಿದ್ದರು. ಆದರೆ, ಕೋವಿಡ್ ಲಾಕ್‌ಡೌನ್ ಅವರ ಭರವಸೆಯನ್ನು ಹಾಳುಮಾಡಿತು. ಆದರೆ, ಆ ಸಮಯ ಅವರಿಗೆ ಹೊಸ ಬದುಕನ್ನೇ ನೀಡಿತು. ಲಾಕ್‌ಡೌನ್ ಸಮಯದಲ್ಲಿ ಅವರು ತಮ್ಮ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದರು. ತಮ್ಮದೇ ಆದ ಹಾಸ್ಯದೊಂದಿಗೆ ವಿಡಿಯೋಗಳನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದರು.

ಒಂದು ದಿನ ಬ್ಯಾಂಕ್ ಸಾಲ ಮರುಪಾವತಿಯಾಗದ ಕಾರಣ ಹರ್ಷನ ಮನೆಯನ್ನು ಹರಾಜು ಹಾಕಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದರು. ಹರ್ಷ ಕೂಡ ತನ್ನ ಯೂಟ್ಯೂಬ್ ಗಳಿಕೆಯ ಮೂಲಕ ಮನೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಒಂದು ವೇಳೆ ನಟನಾಗಿ ಅವಕಾಶಗಳು ಬಂದಿದ್ದರೂ ಇಷ್ಟು ಕಡಿಮೆ ಅವಧಿಯಲ್ಲಿ ಈ ಮಟ್ಟದಲ್ಲಿ ಹಣ ಗಳಿಸುತ್ತಿರಲಿಲ್ಲ ಎಂದೆನಿಸುತ್ತದೆ. ಇದೀಗ ಹರ್ಷ ಎಲ್ಲರಿಗೂ ಮಾದರಿಯಾಗಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannad

Please follow and like us:

Leave a Reply

Your email address will not be published. Required fields are marked *

Next Post

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಝಣ ಝಣ ಕಾಂಚಾಣದ ಸದ್ದು.

Sat Jan 21 , 2023
ಬೆಳಗಾವಿ: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ಹೀಗಾಗಿ ರಾಜಕೀಯ ಚಟುವಟಿಕೆಗಳು ರಂಗೇರಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಮೇಶ್‌ ಜಾರಕಿಹೊಳಿ ವರ್ಸಸ್‌ ಲಕ್ಷ್ಮೀ ಹೆಬ್ಬಾಳ್ಕರ್‌ ನಡುವೆ ಬಿಗ್‌ ಫೈಟ್‌ ಶುರುವಾಗಿದೆ. ಗಿಫ್ಟ್‌ ಪಾಲಿಟಿಕ್ಸ್‌ ಆಯ್ತು ಇದೀಗ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಝಣ ಝಣ ಕಾಂಚಾಣ ಸದ್ದು ಕೇಳಿಬಂದಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿ ಗ್ರಾಮದಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸಮಾವೇಶಕ್ಕೆ ಜನರನ್ನು ಕರೆದುಕೊಂಡು ಬಂದಿದ್ದ ವಾಹನ ಚಾಲಕರಿಗೆ ಜನರ ಪ್ರಯಾಣದ […]

Advertisement

Wordpress Social Share Plugin powered by Ultimatelysocial