ಬೈಪಾಸ್‌ ರಸ್ತೆ ಬೇಡಿಕೆ ಈಡೇರುವ ನಿರೀಕ್ಷೆ;

ಬೈಪಾಸ್‌ ರಸ್ತೆ ಬೇಡಿಕೆ ಈಡೇರುವ ನಿರೀಕ್ಷೆ

ಸಿಂಧನೂರು:

ಟ್ರ್ಯಾಕ್‌ ದಟ್ಟಣೆ ತಪ್ಪಿಸಲು ನಗರಕ್ಕೆ ಬೈಪಾಸ್‌ ರಸ್ತೆ ನಿರ್ಮಾಣವಾಗಬೇಕೆಂಬ ಬಹುದಿನಗಳ ಬೇಡಿಕೆ ಈಡೇರುವ ಮುನ್ಸೂಚನೆ ದಟ್ಟವಾಗಿದ್ದು, ಭೂಸ್ವಾ ಧೀನಕ್ಕೆ ಅಗತ್ಯವಿದ್ದ ಅನುದಾನ ನೀಡಲು ರಾಜ್ಯ ಸರಕಾರ ಅಸ್ತು ಎಂದಿದೆ.

ರಾಜ್ಯ-ಕೇಂದ್ರ ಸರಕಾರಶೇ.50/50 ಆಧಾರದಲ್ಲಿ ಭೂಸ್ವಾಧೀನಕ್ಕೆ ಹಣ ವಿನಿಯೋಗಿಸ ಬೇಕಿದ್ದು, ರಾಜ್ಯ ಸರಕಾರ ತನ್ನ ಪಾಲಿನ ಹಣ ಕೊಡಲುಮುಂದಾಗಿದೆ.

ಕಳೆದ ಫೆಬ್ರವರಿಯಲ್ಲಿ ಕ್ರಿಯಾ ಯೋಜನೆ ರೂಪಿಸಿದ್ದ ರಾಜ್ಯ ಹೆದ್ದಾರಿ ಪ್ರಾಧಿಕಾರ ಭೂಸ್ವಾಧೀನಕ್ಕೆ ತಗಲುವ 87.55 ಕೋಟಿ ರೂ. ಅನುದಾನ ನಿರೀಕ್ಷೆಯಲ್ಲಿತ್ತು.ಈ ನಿಟ್ಟಿನಲ್ಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ, ಶಾಸಕ ವೆಂಕಟ ರಾವ್‌ ನಾಡಗೌಡ ಪ್ರಯತ್ನದಲ್ಲಿದ್ದರು. ಇದಕ್ಕೆ ಕೊನೆಗೂ ಆರ್ಥಿಕ ಇಲಾಖೆ ಒಪ್ಪಿಗೆ ದೊರೆತಿದ್ದು,ಬೈಪಾಸ್‌ ಬೇಡಿಕೆ ಈಡೇರುವ ನಿರೀಕ್ಷೆಗರಿಗೆದರಿದೆ.

ಏನಿದು ಯೋಜನೆ?:

ರಾಜ್ಯ ಹೆದ್ದಾರಿ ಪ್ರಾಧಿಕಾರ ಮುಖ್ಯ ಎಂಜಿನಿಯರ್‌ ರೂಪಿಸಿರುವ ಕ್ರಿಯಾ ಯೋಜನೆ ಪ್ರಕಾರಬೈಪಾಸ್‌ಗೆ 12.430 ಎಕರೆ ಜಮೀನು ಭೂಸ್ವಾಧೀನವಾಗಬೇಕಿದೆ. ಪ್ರತಿ ಎಕರೆಗೆ 12 ಲಕ್ಷ 35 ಸಾವಿರ ರೂ. ಮಾರುಕಟ್ಟೆ ಮೌಲ್ಯಇರುವ ಭೂತಲದಿನ್ನಿ ಗ್ರಾಮ ವ್ಯಾಪ್ತಿ, 12 ಲಕ್ಷ ರೂ. ಮೌಲ್ಯ ಇರುವ ಸಿಂಧನೂರುನಗರ ವ್ಯಾಪ್ತಿಯ ಜಮೀನು, 10 ಲಕ್ಷ 86ಸಾವಿರ ರೂ. ಮಾರುಕಟ್ಟೆ ಮೌಲ್ಯ ಇರುವಹೊಸಳ್ಳಿ ಗ್ರಾಮದ ವ್ಯಾಪ್ತಿ, 12 ಲಕ್ಷ 35ಸಾವಿರ ರೂ. ಮೌಲ್ಯವಿರುವ ಸಾಸಲಮರಿ ವ್ಯಾಪ್ತಿಯಲ್ಲಿ ಜಮೀನನ್ನು ಸ್ವಾಧೀನ ಪಡೆಯಬೇಕಿದೆ. ಈ ಎಲ್ಲ ಜಮೀನು ಸ್ವಾಧೀನವಾದರೆ ಗಂಗಾವತಿ-ರಾಯಚೂರು ರಸ್ತೆಯ ಹೊರಭಾಗದಿಂದ ನೇರವಾಗಿ ಜೇವರ್ಗಿ ಹೆದ್ದಾರಿ-150ಎಗೆ ಸಂಪರ್ಕ ದೊರೆಯಲಿದೆ.

ಡಿಸೆಂಬರ್‌ನಲ್ಲಿ ಒಪ್ಪಿಗೆ:

ಕಳೆದ ಹಲವು ತಿಂಗಳಿಂದ ರಾಜ್ಯ ಸರಕಾರದಿಂದಅನುದಾನ ನೀಡಬೇಕೆಂಬ ಒತ್ತಾಯ ಕೇಳಿ ಬಂದಿದ್ದವು. ಆದರೆ ಆರ್ಥಿಕ ಇಲಾಖೆಸಿಂಧನೂರು ಬೈಪಾಸ್‌ಗೆ ಬೇಕಾಗುವ87.55 ಕೋಟಿ ರೂ.ಗಳಲ್ಲಿ ಶೇ.50 ಭರಿಸಲು ಡಿಸೆಂಬರ್‌ 6, 2021ರಂದು ಒಪ್ಪಿಗೆ ನೀಡಿದೆ. ಈ ಆದೇಶದ ಪ್ರಕಾರ ರಾಜ್ಯ ಸರಕಾರದಿಂದ ಭೂಸ್ವಾಧೀನಕ್ಕಾಗಿ 43.77 ಕೋಟಿ ರೂ. ದೊರೆಯಲಿದೆ. ಕೇಂದ್ರ ಸರಕಾರ 150-ಎ ಜೇವರ್ಗಿ ಮಾರ್ಗದ ಎಲ್ಲ ಬೈಪಾಸ್‌ ನಿರ್ಮಾಣಕ್ಕೆ ಬೇಕಾಗುವ ಮೊತ್ತ ಭರಿಸಲು ಸಿದ್ಧವಿದೆ. ಅಧಿಕಾರಿಗಳು ಹಣಕಾಸಿನ ಕೊರತೆಯಿಲ್ಲವೆಂಬ ಭರವಸೆ ವ್ಯಕ್ತಪಡಿಸಿದ್ದರು. ರಾಜ್ಯ ಸರಕಾರಬೈಪಾಸ್‌ಗೆ ಬೇಕಾಗುವ ಜಮೀನುಒದಗಿಸುವ ಕೆಲಸ ಮಾಡಿಕೊಡಬೇಕೆಂಬಒತ್ತಾಯವಿತ್ತು. ಇದೀಗ ಆರ್ಥಿಕಇಲಾಖೆಯೇ ಸಮ್ಮತಿ ಸೂಚಿಸಿರುವುದರಿಂದಬೈಪಾಸ್‌ಗೆ ಎದುರಾಗಿದ್ದ ವಿಘ್ನ ನಿವಾರಣೆಯಾದಂತಾಗಿದೆ.

ಸರ್ವೇ ನಂಬರ್‌ಗಳು ಗೌಪ್ಯ :

ಸಿರುಗುಪ್ಪ ಮಾರ್ಗದ ಪವರ್‌ಗ್ರಿಡ್‌ ಪ್ರದೇಶದಿಂದ ಹಾಯ್ದು ಬರಲಿರುವ ಬೈಪಾಸ್‌, ಇಂಡಸ್ಟ್ರಿಯಲ್‌ ಏರಿಯಾದ ಸಮೀಪ ಗಂಗಾವತಿ ರಸ್ತೆಯಲ್ಲಿ ಕ್ರಾಸ್‌ ಆಗಿ, ಭೂತಲದಿನ್ನಿ-ಕಲ್ಲೂರು ಮಧ್ಯಭಾಗದಿಂದ ದೇವರಗುಡಿ, ಬಪ್ನೂರು, ಕುಷ್ಟಗಿ ರಸ್ತೆ ಮೂಲಕ ಹಾಯ್ದು ಹೋಗಲಿದೆ ಎಂದು ಅಂದಾಜಿಸಲಾಗಿದೆ. ಜಮೀನಿನ ಸರ್ವೇ ನಂಬರ್‌ ಇತರೆ ಮಾಹಿತಿಯನ್ನು ನೋಟಿμಕೇಶನ್‌ ಪೂರ್ವ ಬಯಲುಗೊಳಿಸದೇ ಗೌಪ್ಯವಾಗಿರಿಸಲಾಗಿದೆ. ರಿಯಲ್‌ಎಸ್ಟೇಟ್‌ ದಂಧೆ ಜಮೀನಿಗೆ ಲಗ್ಗೆ ಹಾಕುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ.

ಕಳೆದ ಒಂದು ವರ್ಷದಿಂದ ಭೂಸ್ವಾಧೀನಕ್ಕೆ ಬೇಕಾದ ಅನುದಾನಕ್ಕೆ ಪ್ರಯತ್ನಿಸಲಾಗುತ್ತಿತ್ತು. ಬಸವರಾಜ ಬೊಮ್ಮಾಯಿ ಅವರ ಸರಕಾರ ಬಂದ ನಂತರ ಒಪ್ಪಿಗೆ ಸಿಕ್ಕಿದ್ದು, ಹಣ ನೀಡಲು ಆರ್ಥಿಕ ಇಲಾಖೆಯವರು ಅನುಮತಿ ಕೊಟ್ಟಿದ್ದಾರೆ

Please follow and like us:

Leave a Reply

Your email address will not be published. Required fields are marked *

Next Post

CT RAVI:ಯಾರಲ್ಲಿ.. ಎಲ್ರೂ ಬರ್ರಪ್ಪಾ.. ಯಾವ್‌ ಪಕ್ಷ ಆದ್ರೇನು. ಎಲ್ಲರೂ ನಮ್ಮವ್ರೇ.. ಬನ್ನಿ ಫೋಟೋಗೆ ಎಂದು ಮನಗೆದ್ದ ;

Tue Dec 28 , 2021
ಚಿಕ್ಕಮಗಳೂರು: ಯಾರಲ್ಲಿ…. ಎಲ್ರೂ ಬರ್ರಪ್ಪಾ… ಎಲ್ಲರೂ ನಮ್ಮವ್ರೇ… ಯಾರ್‌ ಗೆದ್ರೆ ಏನಂತೆ? ಬನ್ನಿ ಫೋಟೋ ತೆಗಿಸಿಕೊಳ್ಳೋಣ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಎಲ್ಲಾ ಪಕ್ಷದವರನ್ನೂ ಕರೆದ ಘಟನೆ ಚಿಕ್ಕಮಗಳೂರಿನಲ್ಲಿ ನಡೆಯಿತು. ನಗರಸಭೆ ಚುನಾವಣೆ ವೇಳೆ ಪತ್ನಿ ಸಹಿತ ಆಗಮಿಸಿದ್ದ ರವಿ ಅವರು, ಹೀಗೆ ಹೇಳುವ ಮೂಲಕ ಬಿಜೆಪಿ-ಕಾಂಗ್ರೆಸ್-ಪಕ್ಷೇತರ ಅಭ್ಯರ್ಥಿಗಳ ಜೊ ನಿಂತು ಫೋಟೋ ತೆಗೆಸಿಕೊಂಡರು. ಫೋಟೋ ಈಗ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದು, […]

Advertisement

Wordpress Social Share Plugin powered by Ultimatelysocial