ಮೊದಲೇ ನಿರ್ಧರಿಸಿದಂತೆ, ನಿಗದಿತ ದಿನಾಂಕದಂದೇ ಕೆಜಿಎಫ್-2 ರಿಲೀಸ್;

ಕೋವಿಡ್ ಮೂರನೇ ಅಲೆಯ ಆತಂಕದಿಂದಾಗಿ ರಾಕಿಂಗ್ ಸ್ಟಾರ್ ಯಶ್ ತಮ್ಮ ಜನ್ಮ ದಿನವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ಅವರ ಅಭಿಮಾನಿಗಳು ಇಲ್ಲದಿದ್ದರೆ, ಅವರ ಹುಟ್ಟುಹಬ್ಬವನ್ನು ಆಚರಿಸಲು ಯಾವುದೇ ಕಾರಣವಿಲ್ಲ ಎಂದು ಯಶ್ ಹೇಳಿದ್ದಾರೆ.

ಇನ್ನೂ ಪ್ರಶಾಂತ್ ನೀಲ್ ನಿರ್ದೇಶನದ ಕೆಜೆಫ್ 2 ಸಿನಿಮಾ ಪ್ಲಾನ್ ಪ್ರಕಾರವೇ ಏಪ್ರಿಲ್ 14 ರಂದು ರಿಲೀಸ್ ಆಗಲಿದೆ, ಮೂರನೇ ಅಲೆ ಮುಗಿಯಲಿದೆ, ಹಲವು ವರದಿಗಳನ್ನು ನೋಡಿ ನಾನು ಇದನ್ನು ಹೇಳುತ್ತಿದ್ದೇನೆ, ಸಿನಿಮಾ ರಿಲೀಸ್ 8 ತಿಂಗಳು ಮುಂದೂಡಿದ್ದು ಏಕೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ, ನಾವು ಈ ಪರಿಸ್ಥಿತಿಯನ್ನು ನಿರೀಕ್ಷಿಸಿದ್ದೇವು.

ಹೀಗಾಗಿ ಮುಂದೂಡಲಾಗಿತ್ತು ಎಂದು ಯಶ್ ಹೇಳಿದ್ದಾರೆ.

ಹಲವು ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆಯನ್ನು ಮುಂದೂಡಿವೆ, ಹೀಗಾಗಿ ಏಪ್ರಿಲ್ ತಿಂಗಳಲ್ಲಿ ಭಾರೀ ಕಾಂಪಿಟೇಶನ್ ಇರಲಿದೆ, ಇದು ಕಷ್ಟದ ಸಮಯ ನಾವೆಲ್ಲರೂ ಸಹಕರಿಸಬೇಕು. ಯಾವುದೂ ನಮ್ಮ ಹಿಡಿತದಲ್ಲಿಲ್ಲ. ನಮ್ಮ ಮುಂದೆ ಕೋವಿಡ್ ದೊಡ್ಡ ಅಲೆಯಿದೆ, ಉತ್ತಮವಾದ ದಿನಾಂಕವನ್ನು ಮಾತ್ರ ಆರಿಸಿಕೊಳ್ಳುವುದನ್ನಷ್ಟೆ ನಾವು ಮಾಡಲು ಸಾಧ್ಯ, ಎಲ್ಲವೂ ಸರಿಯಿದ್ದರೇ ಜನವರಿಗೆ ಕೆಜಿಎಫ್ -2 ರಿಲೀಸ್ ಆಗಬೇಕಿತ್ತು. ಆದರೆ ಇದು ವಿಧಿ ಎಂದು ನಾನು ಭಾವಿಸುತ್ತೇನೆ, ನಮಗೆ ಕೆಜಿಎಫ್-2 ಸಿನಿಮಾ ಮೇಲೆ ಭಾರೀ ವಿಶ್ವಾಸವಿದೆ, ಶೇ.100 ರಷ್ಟು ಆಕ್ಯುಪೆನ್ಸಿಯೊಂದಿಗಿ ಥೀಯೇಟರ್ ನಲ್ಲಿ ರಿಲೀಸ್ ಮಾಡಲು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಯಶ್ ತಿಳಿಸಿದ್ದಾರೆ.

ತಮ್ಮ ಮುಂದಿನ ಸಿನಿಮಾವನ್ನು ಮುಫ್ತಿ ನಿರ್ದೇಶಕ ನರ್ತನ್ ನಿರ್ದೇಶಿಸಲಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಯಶ್ ಕಳೆದ ಎರಡು ವರ್ಷಗಳಿಂದ ಈ ಬಗ್ಗೆ ನನಗೆ ಕೇಳಲಾಗುತ್ತಿದೆ, ಮುಂದೆ ನೋಡೋಣ, ಹುಟ್ಟಹಬ್ಬದಂದೇ ಹೊಸ ಚಿತ್ರವನ್ನು ಘೋಷಿಸಬೇಕೆಂದು ನಾನು ಬಯಸುವುದಿಲ್ಲ. ಆದರೂ ಈ ವರ್ಷ ಹೊಸ ಸಿನಿಮಾ ಘೋಷಿಸುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಹೊಸ ಸಿನಿಮಾ ಘೋಷಣೆಯಾಗಿಲ್ಲ ಎಂದ ಮಾತ್ರಕ್ಕೆ ನಾನು ಸುಮ್ಮನೇ ಕೂತಿಲ್ಲ, ಲಾಕ್ ಡೌನ್ ಸಮಯದಲ್ಲಿ ನಾನಿ ಬರವಣಿಗೆಯಲ್ಲಿ ನಿರತನಾಗಿದ್ದೆ, ನಾನು ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳಲು ಬಯಸಿದಾಗ, ನನ್ನ ಹಿಂದಿನ ಯಶಸ್ಸಿನಿಂದ ಮುಂದುವರಿಯಲು ನಾನು ಬಯಸುವುದಿಲ್ಲ. ಪ್ರತಿ ಹೊಸ ಚಿತ್ರವೂ ಒಂದು ಹೊಸ ಅಧ್ಯಾಯವಾಗಿರಬೇಕು, ಅದು ಒಂದು ದೃಶ್ಯ ಚಮತ್ಕಾರವಾಗಬೇಕೆಂದು ನಾನು ಬಯಸುತ್ತೇನೆ.

ಹೊಸ ಉತ್ಸಾಹದಿಂದ ಏಳಬೇಕು. ಆಗ ಮಾತ್ರ ಕೆಲಸ ಆಸಕ್ತಿದಾಯಕವಾಗುತ್ತದೆ. ನನ್ನ ಬಳಿ ಒಂದು ಪ್ರಾಜೆಕ್ಟ್ ಇದೆ, ಅದು ‘ವಾವ್ ಎನ್ನುವಂತೆ ಮಾಡಲು ಸೂಕ್ತ ರಿಸೋರ್ಸ್ ಮತ್ತು ಜನರನ್ನು ಸಂಗ್ರಹಿಸಬೇಕಾಗಿದೆ ಎಂದು ಹೇಳಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಮಾತನಾಡಿದ ಯಶ್, ಹಿಂದೆ ಏನೇ ನಡೆದಿದ್ದರೂ ನಾವು ಪ್ರಸ್ತುತ ಸಮಯದ ಬಗ್ಗೆ ಯೋಚಿಸಬೇಕು, ಸಿನಿಮಾ ರಂಗದಲ್ಲಿ ಭಾರೀ ಬದಲಾವಣೆಯಾಗಿದೆ. ಪ್ರೇಕ್ಷಕರು ಸಬ್ ಟೈಟಲ್ ಗಳೊಂದಿಗೆ ಸಿನಿಮಾ ವೀಕ್ಷಿಸುತ್ತಾರೆ. ಹಿಂದೆ ಈಗಿರುವಂತೆ ಓಟಿಟಿ ವೇದಿಕೆಗಳಿಗೆ ಹೆಚ್ಚು ಮಾನ್ಯತೆ ಇರಲಿಲ್ಲ, ಥಿಯೇಟರ್ ಗಳಲ್ಲಿ ಜನರು ಬೇರೆ ಭಾಷೆಯ ಸಿನಿಮಾಗಳನ್ನು ನೋಡಲು ಬಯಸುತ್ತಾರೆ, ಅದಕ್ಕೆ ನಾವು ಹೊಂದಿಕೊಳ್ಳಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

2022 Lamborghini Aventador

Mon Jan 10 , 2022
769-hp V-12 ಎಂಜಿನ್ ಮತ್ತು ವಿಲಕ್ಷಣ ಹೊರಭಾಗದೊಂದಿಗೆ, 2022 ಲಂಬೋರ್ಘಿನಿ ಅವೆಂಟಡೋರ್ ಹೈಪರ್ ಕಾರ್‌ನ ವ್ಯಾಖ್ಯಾನವಾಗಿದೆ. ಫೆರಾರಿ SF90 ನಂತಹ ಪ್ರತಿಸ್ಪರ್ಧಿಗಳು ವಿದ್ಯುದ್ದೀಕರಿಸಿದ ಭವಿಷ್ಯವನ್ನು ಸ್ವೀಕರಿಸಿದರೆ, ಲ್ಯಾಂಬೊದ 12-ಸಿಲಿಂಡರ್ ಗಿರಣಿಯು ಫ್ರಾಟ್ ಬ್ರೋ ಚಗ್ಸ್ ಬಿಯರ್‌ನಂತೆ ಇಂಧನವನ್ನು ತಿರುಗಿಸುತ್ತದೆ. ಅದರ ಕತ್ತರಿ ಬಾಗಿಲುಗಳು, ಅಗಲವಾದ ಮತ್ತು ಕಡಿಮೆ ಪ್ರಮಾಣದಲ್ಲಿ, ಮತ್ತು ಅತೀವವಾಗಿ ಗಾಳಿಯಾಡುವ ದೇಹದ ಕೆಲಸವನ್ನು ಚಕ್ರಗಳ ಮೇಲೆ ಥಿಯೇಟರ್‌ನಂತೆ ದ್ವಿಗುಣಗೊಳಿಸಲಾಗಿದೆ, ಅದು ಫಾಸ್ಟ್ ಮತ್ತು ಫ್ಯೂರಿಯಸ್ ಚಲನಚಿತ್ರಗಳನ್ನು ಶಾಶ್ವತವಾಗಿ […]

Advertisement

Wordpress Social Share Plugin powered by Ultimatelysocial