2020ರಲ್ಲಿ ಭಾರತ ಆರ್ಥಿಕತೆಗೆ ಯೂಟ್ಯೂಬ್​ ಕ್ರಿಯೆಟರ್ಸ್​ ನೀಡಿದ ಕೊಡುಗೆಯ ಮೊತ್ತ ಕೇಳಿದ್ರೆ ಅಚ್ಚರಿ ಖಂಡಿತ!

ನವದೆಹಲಿ: ಭಾರತದ ಆರ್ಥಿಕತೆಗೆ ಯೂಟ್ಯೂಬ್ ಸೃಜನಶೀಲ ಪರಿಸರ ವ್ಯವಸ್ಥೆಯು ಸಾವಿರಾರು ಕೋಟಿ ರೂಪಾಯಿಗಳ ಕೊಡುಗೆಯನ್ನು ಹರಿಸುತ್ತಿದೆ ಎಂದು ಆಕ್ಸ್​ಫರ್ಡ್​ ಎಕನಾಮಿಕ್ಸ್​ ವರದಿ ತಿಳಿಸಿದೆ. 2020ನೇ ಸಾಲಿನಲ್ಲಿ ಕಂಟೆಂಟ್​ ಕ್ರಿಯೆಟರ್ಸ್​ಗಳು ಭಾರತದ​ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ)ಕ್ಕೆ 6,800 ಕೋಟಿ ರೂಪಾಯಿ ಕೊಡುಗೆಯನ್ನು ನೀಡಿದ್ದಾಇದೇ ಸಂದರ್ಭದಲ್ಲಿ ಅಂದರೆ 2020ರಲ್ಲಿ ಯೂಟ್ಯೂಬ್​ ಕಂಪನಿಯು 6,83,900 ಪೂರ್ಣ ಸಮಯದ ಸಮಾನ ಉದ್ಯೋಗಗಳನ್ನು ಭಾರತದಲ್ಲಿ ಕಲ್ಪಿಸಿದೆ. ಸುಮಾರು ಒಂದು ಲಕ್ಷಕ್ಕೂ ಅಧಿಕ ಚಂದಾದಾರರು ಇರುವ 40 ಸಾವಿರಕ್ಕೂ ಅಧಿಕ ಯೂಟ್ಯೂಬ್​ ಚಾನೆಲ್​ಗಳು ಭಾರತದಲ್ಲಿ ಇವೆ. ಅನೇಕ ಯೂಟ್ಯೂಬ್ ಚಾನೆಲ್‌ಗಳು, ಆರು ಅಂಕಿ ಅಥವಾ ಅದಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸುತ್ತಿದೆ ಎಂದು ಸ್ವತಂತ್ರ ಸಲಹಾ ಸಂಸ್ಥೆಯು ಹೊರತಂದಿರುವ ವರದಿ ತಿಳಿಸಿದೆ.

 

ಯೂಟ್ಯೂಬ್​ ಕ್ರಿಯೆಟರ್​ಗಳ​ ಆರ್ಥಿಕತೆಯ ಉತ್ತಮ ಭಾಗವೆಂದರೆ ಅಡೆತಡೆಗಳು ತುಂಬಾ ಕಡಿಮೆ ಇರುವುದು ಎಂದು ಪರಿಣಿತರು ಹೇಳುತ್ತಾರೆ. ಯಾರಾದರೂ ಯಾವುದೇ ಉತ್ತಮವಾಗಿ ವಿಷಯವನ್ನು ಹೊಂದಿದ್ದರೆ, ಅವರಿಗೆ ಯೂಟ್ಯೂಬ್​ ಮಾಡಲು ಬೇಕಾಗಿರುವುದು ಕೇವಲ ಯೋಗ್ಯವಾದ ಸ್ಮಾರ್ಟ್​ಫೋನ್​ ಮಾತ್ರ ಎಂದು ಹೇಳಿದ್ದಾರೆ. ಹೆಚ್ಚು ಬಂಡವಾಳ ಇಲ್ಲದೆ, ಅಧಿಕ ಆದಾಯವನ್ನು ಇದರಿಂದ ತೆಗೆಯಬಹುದಾಗಿದೆ.

ಯೂಟ್ಯೂಬ್​ ಆರ್ಥಿಕ ಬೆಳವಣಿಗೆಗೆ ಎರಡು ಅಂಶಗಳು ಗಣನೀಯವಾಗಿ ಕೊಡುಗೆ ನೀಡಿವೆ. ಒಂದು ಅಗ್ಗದ ಡೇಟಾ ಮತ್ತು ಸಾಂಕ್ರಾಮಿಕ ಪ್ರೇರಿತ ಲಾಕ್‌ಡೌನ್ ಸಮಯದಲ್ಲಿ ಸ್ಮಾರ್ಟ್‌ಫೋನ್‌ಗಳ ಹೆಚ್ಚಿದ ಬಳಕೆ.

ಇನ್ನು ಕಂಟೆಂಟ್​ ಕ್ರಿಯೆಟರ್ಸ್​ಗಳು ಸವಾಲುಗಳನ್ನು ಎದುರಿಸಬೇಕಾಗಿದೆ. ಮೂಲ ಮತ್ತು ವಿಶಿಷ್ಟವಾದ ವಿಷಯವನ್ನು ರಚಿಸುವ ಹಲವು ಚಾನೆಲ್‌ಗಳಿವೆ. ಇಲ್ಲಿ ನಂಬರ್​ ಗೇಮ್​ ತುಂಬಾ ಮುಖ್ಯವಾಗಿರುತ್ತದೆ. ಅಲ್ಲದೆ, ಕೃತಿ ಸ್ವಾಮ್ಯವು ಕೂಡ ಪ್ರಭಾವ ಬೀರುತ್ತದೆ. ಚಂದಾದಾರರು ಸೆಳೆಯುವುದು ಕೂಡ ಸವಾಲಿನ ಕೆಲಸವಾಗಿದ್ದು, ಈ ಎಲ್ಲ ಅಡೆತಡೆಗಳನ್ನು ದಾಟಿ ಯೂಟ್ಯೂಬ್​ ಹಾದಿಯನ್ನು ಯಶಸ್ವಿಯತ್ತ ಸಾಗಿಸಲು ನಿರಂತರ ಪ್ರಯತ್ನ ಮುಖ್ಯವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಕ್ಟರ್ ಹ್ಯೂಗೋ

Tue Mar 15 , 2022
ಮಹಾನ್ ಕಾದಂಬರಿಕಾರ ವಿಕ್ಟರ್ ಹ್ಯೂಗೋ ವಿಶ್ವದೆಲ್ಲೆಡೆ ಪರಿಚಿತರು. ಅವರ ಒಂದು ಉದ್ಘೋಷ ಹೀಗಿದೆ”: “The reduction of the univserse to single being, the expansion of single being even to God, this is love.” ಇಡಿಯ ಬ್ರಹ್ಮಾಂಡವನ್ನೇ ಒಂದು ಜೀವಿಯಲ್ಲಿ ಹ್ರಸ್ವ ಮಾಡಬಲ್ಲಂತದ್ದೂ, ಜೀವಿಯೊಂದನ್ನು ದೈವತ್ವಕ್ಕೂ ವಿಸ್ತರಿಸಿಬಲ್ಲಂಥದೂ ಒಂದಿದೆ. ಅದೇ ಪ್ರೀತಿ.’ ಪ್ರಖ್ಯಾತ ಫ್ರೆಂಚ್ ಕವಿ, ನಾಟಕಕಾರ, ಕಾದಂಬರಿಕಾರ, ಪ್ರಬಂಧಕಾರ, ಮಹಾನ್ ಚಿತ್ರಕಾರ, ರಾಜನೀತಿಜ್ಞ, […]

Advertisement

Wordpress Social Share Plugin powered by Ultimatelysocial