ಸ್ಯಾಂಡಲ್​ವುಡ್​ಗೆ ದೊಡ್ಮನೆಯ ಮತ್ತೊಂದು ಕುಡಿ ಎಂಟ್ರಿ:

ಬೆಂಗಳೂರು: ವರನಟ ಡಾ. ರಾಜ್​ಕುಮಾರ್​ ಕುಟುಂಬದ ಅಭಿಮಾನಿಗಳಿಗೆ ಈ ದಿನ ಮರೆಯಲಾಗದ ಸುದಿನವಾಗಿದೆ. ಸ್ಯಾಂಡಲ್​​ವುಡ್​ಗೆ ಅಣ್ಣಾವ್ರ ಕುಟುಂಬದ ಮತ್ತೊಂದು ಕುಡಿ ಎಂಟ್ರಿಯಾಗಿದೆ.

ಸ್ಯಾಂಡಲ್​ವುಡ್ ‘ಯುವರಾಜ್’ನಿಗೆ ಇಂದು ಪಟ್ಟಾಭಿಷೇಕವಾಗಿದೆ.

ಯಂಗ್ ಪವರ್​ ಸ್ಟಾರ್​ ಅವರನ್ನು ಹೊಂಬಾಳೆ ಸಿನಿಮಾ ಸಂಸ್ಥೆ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದು, ಹೊಸ ಸಿನಿಮಾ ಘೋಷಣೆಯಾಗಿದೆ. ಪುನೀತ್​ ರಾಜ್​ಕುಮಾರ್​ ಅವರ ನೆಚ್ಚಿನ ನಿರ್ದೇಶಕ ಸಂತೋಷ್​ ಆನಂದ​ರಾಮ್ ಯುವ ರಾಜ್​ಕುಮಾರ್​​ಗೆ ನಿರ್ದೇಶನ ಮಾಡಲಿದ್ದಾರೆ.

ಅಪ್ಪು ಸಿನಿಮಾ ಅನೌನ್ಸ್ ಮಾಡುವ ಮೂಲಕವೇ ಚಿತ್ರ ನಿರ್ಮಾಣಕ್ಕೆ ಹೊಂಬಾಳೆ ಸಿನಿಮಾ ಸಂಸ್ಥೆ ಚಿತ್ರರಂಗಕ್ಕೆ ಕಾಲಿಟ್ಟಿತು. ಅಭಿಮಾನಿಗಳ ಮನದಲ್ಲಿ ಅಪ್ಪು ಉತ್ತರಾಧಿಕಾರಿ ಆಗಿರುವ ಯುವರಾಜ್​ ಅವರನ್ನು ಹೊಂಬಾಳೆ ಫಿಲ್ಮ್ಸ್​ ಚಿತ್ರರಂಗಕ್ಕೆ ಪರಿಚಯಿಸುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಹೊಂಬಾಳೆ ಸಿನಿಮಾ ಸಂಸ್ಥೆ, ಡಾ. ರಾಜ್​ಕುಮಾರ್​ ಕುಟುಂಬ ಹಾಗೂ ಹೊಂಬಾಳೆ ಸಂಸ್ಥೆ ನಡುವೆ ಇರುವ ಸಂಬಂಧದ ಮುಂದುವರಿದ ಭಾಗವಾಗಿ ನಾವು ನಮ್ಮ ಹೊಂಬಾಳೆ ಫಿಲಂಸ್​ನಲ್ಲಿ ದೊಡ್ಮನೆಯ ಮೂರನೇ ತಲೆಮಾರಿನ ಯುವರಾಜ್​ ಕುಮಾರ್​ರನ್ನು ನಾಯಕನಟನಾಗಿ ಬೆಳ್ಳಿಪರದೆಗೆ ಪರಿಚಯಿಸಲು ಹಮ್ಮೆ ಪಡುತ್ತೇವೆ. ಈ ಪ್ರಯತ್ನದಲ್ಲಿ ನಮ್ಮ ಸಂಸ್ಥೆಯಲ್ಲಿ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಸಂತೋಷ್​ ಆನಂದ್​ ರಾಮ್​ ಅವರ ಸಾರಥ್ಯದಲ್ಲಿ ಈ ಚಿತ್ರವನ್ನು ನಿರ್ಮಿಸಲಿದ್ದೇವೆ. ನಮ್ಮ ಸಂಸ್ಥೆಯ ಚಿತ್ರಗಳಿಗೆ ನೀವು ನೀಡಿರುವ ಬೆಂಬಲವನ್ನು ಈ ಚಿತ್ರಕ್ಕೂ ನೀಡಿ ಈ ಸಂಕಲ್ಪವನ್ನು ಯಶಸ್ವಿಯಾಗಿಸಬೇಕೆಂದು ಹೊಂಬಾಳೆ ಫಿಲ್ಮ್ಸ್​ ಕೋರಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ಕೊರೊನಾ 4ನೇ ಹೆಚ್ಚಾಗುತ್ತಿದ್ದಂತೆ ಇದೀಗ ಸಾರಿಗೆಯಲ್ಲೂ ನಿರ್ದಿಷ್ಟ ಪ್ರಯಾಣಿಕರ ಸಂಚಾರ

Wed Apr 27 , 2022
  ‌ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ : ರಾಜ್ಯದಲ್ಲಿ ಕೊರೊನಾ 4ನೇ ಹೆಚ್ಚಾಗುತ್ತಿದ್ದಂತೆ ಇದೀಗ ಸಾರಿಗೆಯಲ್ಲೂ ನಿರ್ದಿಷ್ಟ ಪ್ರಯಾಣಿಕರ ಸಂಚಾರಕ್ಕೆ ನಿಯಮಗಳನ್ನು ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ. ಹಾಗಿದ್ರೆ ಯಾವೆಲ್ಲ ಹೊಸ ನಿಯಮಗಳನ್ನು ಜಾರಿಗೊಳಿಸಲಿದೆ ಅನ್ನೊದರ ಕಂಪ್ಲೀಟ್‌ ಮಾಹಿತಿ ಇಲ್ಲಿದೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಮೆಟ್ರೋ ಸಂಚಾರಕ್ಕೂ ಟಫ್‌ ರೂಲ್ಸ್ ಮಾಡಲಾಗಿದ್ದು, ಪ್ರಯಾಣಿಕರಿಗೆ ಮಾಸ್ಕ್‌ ಸ್ಯಾನಿಟೈಸರ್‌ ಥರ್ಮಲ್‌ ಸ್ಕ್ರೀನಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ದಬಲ್‌ ದೋಸ್‌ ವ್ಯಾಕ್ಸಿನೇಷನ್‌ ಸರ್ಟಿಫಿಕೆಟ್‌ ಕಡ್ಡಾಯಗೊಳಿಸಲಾಗುತ್ತದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನಿಲ್ದಾಣಗಳಲ್ಲಿ […]

Advertisement

Wordpress Social Share Plugin powered by Ultimatelysocial