ಟಿಕೆಟ್ ಬಿಸಿ: ಕಾಂಗ್ರೆಸ್ ಶಿಬಿರಕ್ಕೆ ಗೈರಾದ ಎಸ್.ಆರ್.ಪಾಟೀಲ್, ಬಿ.ಎಲ್.ಶಂಕರ್, ಜಮೀರ್

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯ ಕಾರ್ಯತಂತ್ರ ಹಾಗೂ ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಹೋರಾಟ ಕುರಿತು ರೂಪುರೇಷೆ ಸಿದ್ಧಪಡಿಸಲು ಕಾಂಗ್ರೆಸ್‌ ನ ಎರಡು ದಿನಗಳ ಕಾಲ ಚಿಂತನ -ಮಂಥನ ಶಿಬಿರ ಇಂದು ಬೆಂಗಳೂರು ಹೊರವಲಯದ ರೆಸಾರ್ಟ್ ನಲ್ಲಿ ಆರಂಭವಾಗಿದೆ.

ಆದರೆ ಈ ನವ ಸಂಕಲ್ಪ ಶಿಬಿರಕ್ಕೆ ಹಿರಿಯ ನಾಯಕರುಗಳಾ ಎಸ್‌. ಆರ್. ಪಾಟೀಲ್, ಮುದ್ದಹನುಮೇಗೌಡ, ಬಿ.ಎಲ್.ಶಂಕರ್, ಎಂ.ಆರ್.ಸೀತಾರಾಂ ಜಮೀರ್ ಅಹಮದ್ ಖಾನ್ ಗೈರಾಗಿದ್ದಾರೆ. ವಿಧಾನ ಪರಿಷತ್ ಮತ್ತು ರಾಜ್ಯಸಭೆ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿನ ಅಸಮಾಧಾನ ಇದಕ್ಕೆ ಕಾರಣವಾಗಿದೆ.

ಎರಡನೇ ಬಾರಿಯೂ ವಿಧಾನ ಪರಿಷತ್ ಟಿಕೆಟ್ ಕೈತಪ್ಪಿದ್ದಕ್ಕೆ ಮುನಿಸಿಕೊಂಡಿರುವ ಕಾಂಗ್ರೆಸ್ ನ ಹಿರಿಯ ನಾಯಕ ಎಸ್.ಆರ್.ಪಾಟೀಲ್ ಶಿಬಿರಕ್ಕೆ ಗೈರು ಹಾಜರಾಗಿದ್ದಾರೆ. ಟಿಕೆಟ್ ಸಿಗದಿದ್ದಕ್ಕೆ ಸಿದ್ದರಾಮಯ್ಯ ಮುಂದೆ ಅಸಮಾಧಾನ ಹೊರಹಾಕಿರುವ ಎಂ.ಆರ್.ಸೀತಾರಾಂ, ರಾಜ್ಯಸಭೆ- ಪರಿಷತ್ ಎರಡೂ ಕಡೆ ಪರಿಗಣಿಸದಿರುವುದಕ್ಕೆ ಮುದ್ದಹನುಮೇಗೌಡ ಬೇಸರ ಹೊಂದಿದ್ದಾರೆ.

ಪಕ್ಷದ ಬೆಳವಣಿಗೆಗಳ ಬಗ್ಗೆ ಅಸಮಾಧಾನ ಹೊಂದಿರುವ ಜಮೀರ್ ಅಹಮದ್ ಖಾನ್ ಕೂಡಾ ಪಕ್ಷದ ಚಿಂತನ ಮಂಥನ ಶಿಬಿರಕ್ಕೆ ಗೈರಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

3ನೇ ಅಭ್ಯರ್ಥಿ ಗೆಲುವಿಗೆ ಬಿಜೆಪಿ ಹೊಸ ತಂತ್ರ

Thu Jun 2 , 2022
ಬೆಂಗಳೂರು, ಜೂ.2- ರಾಜ್ಯಸಭೆಯ ನಾಲ್ಕನೇ ಸ್ಥಾನಕ್ಕಾಗಿ ಜೆಡಿಎಸ್ ಸದಸ್ಯರ ಅಡ್ಡ ಮತದಾನ ಅಗತ್ಯವಿದ್ದು, ಶತಾಯ-ಗತಾಯ ಒಂದೆರಡು ಸದಸ್ಯರಿಂದ ಅಡ್ಡಮತದಾನ ನಡೆಯುವ ನಿರೀಕ್ಷೆಯಲ್ಲಿ ಬಿಜೆಪಿ ನಾಯಕರಿದ್ದಾರೆ. ಈ ಸ್ಥಾನಕ್ಕೆ ಪರಾವಲಂಬನೆ ಅಗತ್ಯವಿದೆ ಎನ್ನುವ ಹಿನ್ನೆಲೆಯಲ್ಲಿ ಅನ್ಯ ಶಾಸಕರಿಗೆ ಬಲೆ ಬೀಸಿದೆ. ಸದ್ಯ ಬಿಜೆಪಿ ಪಕ್ಷೇತರ ಸದಸ್ಯ ನಾಗೇಶ್, ಬಿಎಸ್‍ಪಿಯ ಮಹೇಶ್ ಬೆಂಬಲದೊಂದಿಗೆ ವಿಧಾನಸಭೆಯಲ್ಲಿ 122 ಸದಸ್ಯ ಬಲವನ್ನು ಹೊಂದಿದೆ. ಇದರಲ್ಲಿ ಇಬ್ಬರು ಅಭ್ಯರ್ಥಿಗಳು ರಾಜ್ಯಸಭೆಗೆ ಅನಾಯಾಸವಾಗಿ ಆಯ್ಕೆಯಾಗಲಿದ್ದು, ಹೆಚ್ಚುವರಿ ಮತಗಳ ಜೊತೆ […]

Advertisement

Wordpress Social Share Plugin powered by Ultimatelysocial