ಕೋವಿಡ್-19 ಲಾಕ್ಡೌನ್ ವೇಳೆಯಲ್ಲಿ ಒಂದರ ನಂತರ ಒಂದು ಟಿಕ್ ಟಾಕ್ ವಿಡಿಯೋ ಮಾಡುವ ಮೂಲಕ ಅಭಿಮಾನಿಗಳನ್ನು ಮನರಂಜಿಸುತ್ತಿರುವ ವಾರ್ನರ್, ಮತ್ತೊಂದು ವಿಡಿಯೋ ಮೂಲಕ ಸುದ್ದಿಯಾಗಿದ್ದಾರೆ. ಈ ಹಿಂದೆ, ಪ್ರಭಾಸ್, ಮಹೇಶ್ ಬಾಬು ಸೇರಿದಂತೆ ಹಲವು ನಟರ ಸಿನಿಮಾಗಳ ಡೈಲಾಗ್ ಗಳಿಗೆ ಅಭಿನಯಿಸಿ ಮನರಂಜಿಸಿದ್ದ ವಾರ್ನರ್, ಅಕ್ಷಯ್ ಕುಮಾರ್ ಸಿನಿಮಾ ಹಾಡಿಗೆ ಒಬ್ಬರೇ ಸ್ಟೆಪ್ ಹಾಕಿ ವಿಡಿಯೋ ಹರಿಬಿಟ್ಟಿದ್ದ ವಿಡಿಯೋಗಳು ತುಂಬಾ ವೈರಲ್ ಆಗಿದ್ದವು. ಆದರೆ ವಿಶೇಷವೆಂದರೆ ಈ ಬಾರಿ ಮತ್ತೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಸಿನಿಮಾ ಹಾಡಿಗೆ ಟಿಕ್ ಟಾಕ್ ನಲ್ಲಿ ಹೆಜ್ಜೆ ಹಾಕಿದ್ದಾರೆ. ತಾವಷ್ಟೇ ಅಲ್ಲದೆ, ಜೊತೆಯಲ್ಲಿ ಇಬ್ಬರೂ ಚಿಕ್ಕಮಕ್ಕಳೂ ಕುಣಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಜನರ ಮೆಚ್ಚುಗೆ ಗಳಿಸಿದೆ. ಹಾಗೆಯೇ ಅಕ್ಷಯ್ ಕುಮಾರ್ ಅವರನ್ನೂ ಟ್ಯಾಗ್ ಮಾಡಿ ಬಾಲ ಡ್ಯಾನ್ಸ್ ಎಂದೂ ಕರೆದುಕೊಂಡಿದ್ದಾರೆ.