ಕೊರೊನಾ ಸಾಂಕ್ರಾಮಿಕ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡಿರುವ ಸಂಬಂಧ ಬಡವರು ಹಾಗು ನಿರ್ಗತಿಕರು ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅಂತಹವರಿಗೆ ಸಹಾಯ ಹಸ್ತ ಚಾಚುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಕರ್ತವ್ಯ ಎಂದು ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು. ಪಟ್ಟಣದ ಮಾಲಿ ಮರಿಯಪ್ಪ ರಂಗಮಂದಿರದಲ್ಲಿ ಆಟೋ ಚಾಲಕರಿಗೆ ಮತ್ತು ಬಡವರಿಗೆ ಆಹಾರದ ದಿನಸಿ ಕಿಟ್ ಗಳನ್ನು ವಿತರಿಸಿದರು. ನಂತರ ಮಾತನಾಡಿದ ಅವರು ಕೊರೊನಾ ಸಾಂಕ್ರಾಮಿಕ ರೋಗ ತಡೆಗಟ್ಟಲು ಪ್ರತಿಯೊಬ್ಬರು ಸಾಮಾಜಿಕ ಅಂತರವನ್ನು ತಪ್ಪದೇ ಪಾಲಿಸಬೇಕು, ಮನೆಯಿಂದ ಆಚೆ ಹೋಗುವಾಗ ತಪ್ಪದೆ ಮಾಸ್ಕ್ ಧರಿಸಿ ಹಾಗೂ ಸರ್ಕಾರದ ಆದೇಶಗಳನ್ನು ಪಾಲಿಸಬೇಕು ಎಂದು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯರುಗಳಾದ ಎಂ ಎಲ್ ಗಂಗರಾಜು, ಎಂ ಆರ್ ಜಗನ್ನಾಥ್ ನರಸಿಂಹಮೂರ್ತಿ, ಮುಖಂಡ ತುಂಗೋಟಿ ರಾಮಣ್ಣ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕೊರೊನಾದಿಂದ ತೊಂದರೆಗೀಡಾದ ಜನತೆ
Please follow and like us: