ಕಾಣದ ವೈರಸ್ ವಿಶ್ವದ ದೂಡ್ಡ ಆರ್ಥಿಕ ಶಕ್ತಿಗೆ ಪ್ರಭಲ ಪೆಟ್ಟು ನೀಡುತ್ತಿರುವದು ಸುಳ್ಳಲ್ಲ.ವಿಶ್ವದ ದೊಡ್ಡಣ್ಣ, ಅತ್ಯಂತ ಶ್ರೀಮಂತ ರಾಷ್ಟ್ರ ಅಂತಾ ಬಿಲ್ಡಪ್ ಕೊಡುವ ಅಮೆರಿಕದ ಮರ್ಯಾದೆ ಇದೀಗ ಬೀದಿಪಾಲಾಗಿದೆ. ಕೊರೊನಾ ವೈರಸ್ ಅಮೆರಿಕದ ಮಾನ ಹರಾಜು ಹಾಕಿದೆ. ದೊಡ್ಡಣ್ಣನ ನಾಡಿನ ಸ್ಥಿತಿ ಹೇಗಿದೆ ಅಂದರೆ, ಸದ್ಯಕ್ಕೆ ಜೀವ ಉಳಿಸಿಕೊಳ್ಳುವುದೇ ದೊಡ್ಡ ಸಾಹಸವಾಗಿದೆ. ಈವರೆಗೆ ೩೯ ಲಕ್ಷ ಕೇಸ್ ಕನ್ಫರ್ಮ್ ಆಗಿವೆ. ನಿನ್ನೆ ಕೂಡ ೬೫ ಸಾವಿರ ಕೇಸ್ ದಾಖಲಾಗಿವೆ. ಪರಿಣಾಮ ಅಮೆರಿಕದ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಬೆಡ್ಗಳೇ ಸಿಗುತ್ತಿಲ್ಲ. ಫ್ಲೋರಿಡಾ ಸ್ಥಿತಿಯಂತೂ ಬರ್ಬರವಾಗಿದೆ. ಇಲ್ಲಿನ ೪೯ ಆಸ್ಪತ್ರೆಗಳಲ್ಲಿ ಒಂದೇ ಒಂದು ಐಸಿಯು ಹಾಸಿಗೆ ಕೂಡ ಲಭ್ಯವಿಲ್ಲ. ನಿನ್ನೆ ಕೂಡ ೧೨ ಸಾವಿರಕ್ಕೂ ಹೆಚ್ಚು ಕೇಸ್ಗಳು ಫ್ಲೋರಿಡಾ ಸ್ಟೇಟ್ನಲ್ಲಿ ದಾಖಲಾಗಿವೆ. ಒಂದೇ ದಿನ ೮೭ ಅಮೆರಿಕನ್ನರು ಫ್ಲೋರಿಡಾದಲ್ಲಿ ಪ್ರಾಣಬಿಟ್ಟಿದ್ದಾರೆ.
ದೊಡ್ಡಣ್ಣನಿಗೆ ಕಾಡಿದ ಚೈನಾ ವೈರಸ್
Please follow and like us: