ಥೈರಾಯ್ಡ್‌ ಬಗ್ಗೆ ಅನುಮಾನಗಳಿಗೆ ಇಲ್ಲಿದೆ ಸಲಹೆ

 

ಥೈರಾಯ್ಡ್.. ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ಅದರಲ್ಲೂ ಪುರಷರಿಗಿಂತ ಮಹಿಳೆಯರಲ್ಲೇ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಆದರೆ, ಕೆಲವೊಮ್ಮೆ ಥೈರಾಯ್ಡ್ ಬಗ್ಗೆ ಸೂಕ್ತ ಮಾಹಿತಿ ಇಲ್ಲದೇ ಎಲ್ಲಾ ಲಕ್ಷಣಗಳನ್ನೂ ಥೈರಾಯ್ಡ್ ಎಂಬ ಭಾವಿಸಿ, ಅದಕ್ಕೆ ಅನೌಚಾರಿಕೆ ಚಿಕಿತ್ಸೆ ಪಡೆಯುತ್ತಿರುವುದು ಇನ್ನಷ್ಟು ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎನ್ನುವುದು ಅಧ್ಯಯನಗಳಿಂದ ತಿಳಿದು ಬರುತ್ತಿದೆ.

ಹೀಗಾಗಿ ಥೈರಾಯ್ಡ್ ಬಗ್ಗೆ ಸೂಕ್ತ ಅರಿವು ಮೂಡಿಸುವ ದೃಷ್ಟಿಯಿಂದ ಜನವರಿ ತಿಂಗಳನ್ನು “ಥೈರಾಯ್ಡ್ ಜಾಗೃತಿ” ಮಾಸವೆಂದು ಆಚರಿಸಲಾಗುತ್ತದೆ. ಥೈರಾಯ್ಡ್ ಬಗ್ಗೆ ನಿಮಗಿರುವ ಎಲ್ಲಾ ಅನುಮಾನಗಳಿಗೂ ವೈದ್ಯರು ಮಾಹಿತಿ ನೀಡಿದ್ದಾರೆ.

ಥೈರಾಯ್ಡ್‌ನಿಂದ ತೂಕ ಹೆಚ್ಚಳವಾಗಲಿದೆಯೇ?ಥೈರಾಯ್ಡ್ ಕುತ್ತಿಗೆ ಭಾಗದಲ್ಲಿ ಚಿಟ್ಟಿಯಾಕಾರ ಗ್ರಂಥಿಯಾಗಿದ್ದು, ಇದು ಟಿ-3 ಹಾಗೂ ಟಿ-4 ಹಾರ್ಮೋನ್‌ಗಳನ್ನು ಉತ್ಪತ್ತಿಸುತ್ತವೆ. ಇದು ಪಿಟ್ಯುಟರಿ ಗ್ರಂಥಿಯಿಂದ ಸ್ರವಿಸುವ ಥೈರಾಯ್ಡ್ ಆಗಿದ್ದು, ಟಿಎಸ್‌ಎಚ್ ಹಾರ್ಮೋನ್ ಉತ್ಪದಿಸಲಿದ್ದು, ದೇಹದ ಪಚನ ಕ್ರಿಯೆಯನ್ನು ನಿಯಂಥ್ರಿಸುತ್ತದೆ. ಥೈರಾಯ್ಡ್ನಲ್ಲಿ ಹೈಪೋ ಥೈರಾಯ್ಡ್ ಮಹಿಳೆಯರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ಅತ್ಯಂತ ಅಪಾಯಕಾರಿ ಕೂಡ ಹೌದು. ಹೈಪೋ ಥೈರಾಯ್ಡ್‌ನಿಂದ ಪಚನ ಕ್ರಿಯೆ ಸಂಪೂರ್ಣ ನಿಧಾನವಾಗುವುದರಿಂದ ದೇಹದಲ್ಲಿ ತೂಕ ಹೆಚ್ಚಳವಾಗುತ್ತದೆ. ಇದು ಕೂದಲು ಉದುರುವಿಕೆ, ರಕ್ತದೊತ್ತಡ ಹೆಚ್ಚಳ, ಸಕ್ಕರೆ ಕಾಯಿಲೆ ಇತ್ಯಾದಿ ರೋಗಕ್ಕೆ ಕಾರಣವಾಗಬಹುದು. ಹೀಗಾಗಿ ಥೈರಾಯ್ಡ್ನ ಲಕ್ಷಣ ಕಂಡು ಬಂದ ಕೂಡಲೇ ವೈದ್ಯರನ್ನು ಭೇಟಿ ಮಾಡಿಚಿಕಿತ್ಸೆ ಪಡೆದುಕೊಳ್ಳಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಣ್ಣಿನ ಸುತ್ತಲಿನ ʼಸುಕ್ಕುʼ ಪರಿಹಾರಕ್ಕಾಗಿ ಇಲ್ಲಿದೆ ಪಟ್ಟಿ

Fri Jan 28 , 2022
  ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌ : ಕಣ್ಣಿನ ಸುತ್ತ ಕಂಡುಬರುವ ಸುಕ್ಕು(Wrinkle)ಗಳನ್ನು ನಿವಾರಿಸಲು ಆರಂಭದಲ್ಲೇ ಕಾಳಜಿ ವಹಿಸದಿದ್ದರೆ ಮುಖದಲ್ಲಿ ವಯಸ್ಸಾದಂತೆ ಕಾಣುತ್ತದೆ. ಈ ಸುಕ್ಕುಗಳು ನಿಮ್ಮ ವಯಸ್ಸನ್ನು ತೋರಿಸುತ್ತವೆ. ವಾಸ್ತವವಾಗಿ ಕಣ್ಣುಗಳ ಕೆಳಗಿರುವ ಚರ್ಮವು ತುಂಬಾ ತೆಳುವಾಗಿರುತ್ತದೆ. ಈ ಕಾರಣದಿಂದ ಇದು ಸೂಕ್ಷ್ಮವೂ ಆಗಿದೆ. ದೇಹದಲ್ಲಿನ ಕೆಲವು ಕೊರತೆಯು ವಯಸ್ಸಿನ ಪರಿಣಾಮ, ಒತ್ತಡ ಇತ್ಯಾದಿಗಳು ಸುಕ್ಕುಗಳ ರೂಪದಲ್ಲಿ ಇಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇದರಿಂದ ಸಂಕೋಚಪಡುವ ಅಗತ್ಯವಿಲ್ಲ. ಇದು ಏಕೆ ಸಂಭವಿಸುತ್ತದೆ ಮತ್ತು ಅದನ್ನು […]

Advertisement

Wordpress Social Share Plugin powered by Ultimatelysocial