ಕನ್ನಡ ಚಿತ್ರರಂಗ ಎಂದಾಕ್ಷಣ ನೆನಪಿಗೆ ಬರುವುದೆ ಅಣ್ಣಾವ್ರು. ರಾಜಕುಮಾರ ಇಡೀ ಫ್ಯಾಮಿಲಿನೇ ಚಿತ್ರರಂಗಕ್ಕೆ ಕೊಡುಗೆ ನಿಡಿದ್ದಾರೆ. ಈಗ ಅಣ್ಣಾವ್ರ ಇನ್ನೊಬ್ಬ ಮೊಮ್ಮಗ ರಾಮ್ಕುಮಾರ್ ಧೀರನ್ ಕೂಡ ಸಿನಿಮಾ ಇಂಡಸ್ಟಿçಗೆ ಪಾದಾರ್ಪಣೆ ಮಾಡಿದ್ದಾರೆ.
ರಾಮ್ಕುಮಾರ ಮಗ ಧೀರನ್ ತಮ್ಮ ಹುಟ್ಟುಹಬ್ಬದ ನಿಮಿತ್ತ ಚೊಚ್ಚಲ ಸಿನಿಮಾದ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದ್ದಾರೆ. ತೆಲುಗಿನ ಆರ್.ಎಕ್ಸ್ ೧೦೦ ಸಿನಿಮಾ ಕನ್ನಡದಲ್ಲಿ ರಿಮೇಕ್ ಆಗ್ತಿದ್ದು, ಅದರಲ್ಲಿ ಧೀರನ್ ಹೀರೋ ಆಗಿ ಮಿಂಚಲಿದ್ದಾರೆ. ಈ ಚಿತ್ರಕ್ಕೆ ಶಿವ ೧೪೩ ಅಂತಾ ಹೆಸರಿಡಲಾಗಿದ್ದು, ಚಿತ್ರದಲ್ಲಿ ಮಾನ್ವಿತಾ ನಾಯಕಿಯಾಗಿ ನಟಿಸಿದ್ದಾರೆ.
ಧೀರನ್ ಚೊಚ್ಚಲ ಸಿನಿಮಾದ ಪೋಸ್ಟರ್ ರಿಲೀಸ್
Please follow and like us: