ಥಾಯ್ಲೆಂಡ್ : ಥಾಯ್ಲೆಂಡ್ ನ 24 ವರ್ಷದ ತ್ರೀರಾಪತ್ ಕ್ಲಾಯ್ ಎಂಬಾತನನ್ನು ಪೊಲೀಸರು ಚಪ್ಪಲಿ ಕಳ್ಳತನದ ಕಾರಣಕ್ಕೆ ಬಂಧಿಸಿದ್ದಾರೆ. ಆತ ಯಾವ ಕಾರಣಕ್ಕೆ ಚಪ್ಪಲಿ ಕದಿಯುತ್ತಾನೆಂದು ಕಾರಣ ಕೇಳಿ ಪೊಲೀಸರು ದಂಗಾಗಿದ್ದಾರೆ. ಆತನ ಮನೆಯನ್ನು ನೋಡಿದ ಪೊಲೀಸರಿಗೆ ಆಶ್ಚರ್ಯ ಒಂದು ಕಾದಿತ್ತು. ಆತ ಕಳೆದ ಎರಡು ವರ್ಷಗಳಿಂದ ನೆರೆಹೊರೆಯವರ ಮನೆಗಳಿಂದ ಕದ್ದಿದ್ದ ಚಪ್ಪಲಿಗಳನ್ನು ಕೂಡಿಟ್ಟಿದ್ದ. ಅಲ್ಲಿ ವಿಭಿನ್ನ ಬಣ್ಣದ, ವಿಭಿನ್ನ ಬ್ರಾಂಡ್ ಗಳ ಪಾದರಕ್ಷೆ ಇದ್ದವು. ಆಘಾತಕಾರಿ ಎಂದರೆ ಲೈಂಗಿಕ ತೃಷೆಗಾಗಿ ಈ ಕಳ್ಳ ಕದ್ದ ಪಾದರಕ್ಷೆಗಳಿಗೆ, ಮುತ್ತಿಟ್ಟು ಅಪ್ಪಿ ಮುದ್ದಾಡುತ್ತ ವಿಲಕ್ಷಣವಾಗಿ ವರ್ತಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅವನ ಮನೆಯಲ್ಲಿ 126 ಜತೆ ಪಾದರಕ್ಷೆ ಸಿಕ್ಕಿದೆ. ಚಪ್ಪಲಿ ಕದ್ದ ಆರೋಪದ ಜೊತೆಗೆ ಕೊರೊನಾ ಕರ್ಫ್ಯೂ ಉಲ್ಲಂಘಿಸಿದ ಮೂರು ಪ್ರಕರಣಗಳನ್ನು ಆತನ ಮೇಲೆ ದಾಖಲಿಸಿಕೊಳ್ಳಲಾಗಿದೆ.