ಬ್ಯಾಂಕ್ ರಾಬರಿ ಪ್ಲಾನ್​ ….! ಮಡಿವಾಳದ SBI ಬ್ಯಾಂಕ್ ರಾಬರಿ ಮಾಡಿ ಸಿಕ್ಕಿಬಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ​…!

 

ಬ್ಯಾಂಕ್ ರಾಬರಿ ಮಾಡಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಿಕ್ಕಿಬಿದ್ದಿದ್ದು, ಮಡಿವಾಳದ SBI ಬ್ಯಾಂಕ್​ನಲ್ಲಿ ರಾಬರಿ ಮಾಡಿದ್ದ ಸ್ಟೂಡೆಂಟ್ ಅರೆಸ್ಟ್​ ಆಗಿದ್ದಾನೆ.​ಅರೆಸ್ಟ್​ ಆದ ಇಂಜಿನಿಯರಿಂಗ್ ಸ್ಟೂಡೆಂಟ್ ಧೀರಜ್,  40 ಲಕ್ಷ ಸಾಲ ತೀರಿಸೋಕೆ ಬ್ಯಾಂಕ್ ರಾಬರಿ ಪ್ಲಾನ್​ ಮಾಡಿದ್ದು,  BTM ಲೇಔಟ್​ನಲ್ಲಿ SBI ಬ್ಯಾಂಕ್​ಗೆ ಒಂಟಿಯಾಗಿ  ಬ್ಯಾಂಕ್​ ಕ್ಲೋಸಿಂಗ್ ಟೈಮ್​ನಲ್ಲಿ ನುಗ್ಗಿ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾನೆ.  ಚಾಕು ತೋರಿಸಿ ಲಾಕರ್​ ಓಪನ್ ಮಾಡಿಸಿ ಚಿನ್ನ, ನಗದು ದೋಚಿದ್ದು,3.75 ಲಕ್ಷ ಹಣ ಹಾಗೂ ಚಿನ್ನಾಭರಣ ದೋಚಿ ಧೀರಜ್ ಪರಾರಿಯಾಗಿದ್ದಾನೆ.  ಬ್ಯಾಂಕ್ ರಾಬರಿ ಮಾಡೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು,  ಪರಾರಿಯಾದ ನಂತರ ACP ಸುಧೀರ್ ಹೆಗಡೆ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ.  3 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಧೀರಜ್ ಬಂಧಿಸಿಲಾಗಿದ್ದು,  ಆನ್​ಲೈನ್​ ಆ್ಯಪ್​ಗಳ ಮೂಲಕ 40 ಲಕ್ಷ ಧೀರಜ್ ಸಾಲ ಪಡೆದಿದ್ದು,  ಮಾಡಿದ್ದ ಸಾಲ ತೀರಿಸಲು ಆರೋಪಿ ಧೀರಜ್ ಬ್ಯಾಂಕ್​ ದರೋಡೆ ಮಾಡಿದ್ದಾನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅರಿಶಿನ ಹಾಲು ಕುಡಿಯುವುದರಿoದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಹೆಚ್ಚುತ್ತದೆ.

Tue Jan 25 , 2022
ಅರಿಶಿನವು (Turmeric) ಭಾರತೀಯ ಅಡುಗೆಮನೆಗಳಲ್ಲಿ ಸಾಮಾನ್ಯವಾಗಿ ಬಳಸುವ ಮಸಾಲೆಗಳಲ್ಲಿ ಒಂದಾಗಿದೆ. ಭಾರತದಲ್ಲಿನ ಪ್ರತಿಯೊಂದು ಪಾಕವಿಧಾನದಲ್ಲಿ ಅರಿಶಿನ ಹೆಚ್ಚಾಗಿ ಬಳಸಲ್ಪಡುತ್ತದೆ. ಈ ಅರಿಶಿನ ಪುಡಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿದೆ. ಅರಿಶಿನ ಹಾಲು  ಆಯುರ್ವೇದದ ಶಿಫಾರಸುಗಳಲ್ಲಿ ಸಾಮಾನ್ಯವಾಗಿದೆ. ಇದನ್ನು ಅನೇಕ ಜನರು ಪ್ರತಿನಿತ್ಯ ಸೇವಿಸುತ್ತಾರೆ. ಸೂಪರ್‌ಫುಡ್‌ನಂತೆ ಅದರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಇದಕ್ಕಿದೆ. ಆಯುರ್ವೇದದ ಪ್ರಕಾರ, ಮಲಗುವ ಮೊದಲು ಬೆಚ್ಚಗಿನ ಹಾಲನ್ನು ಕುಡಿಯುವುದು ನಿದ್ರಾಹೀನತೆಯ ವಿರುದ್ಧ ಸಹಾಯ ಮಾಡುತ್ತದೆ. ಅರಿಶಿನವನ್ನು […]

Advertisement

Wordpress Social Share Plugin powered by Ultimatelysocial