ನಟ ರಿಶಿ ಕಪೂರ್ ಅಂತಿಮ ವಿಧಿ ವಿಧಾನಗಳು ಕುಟುಂಬದ ಸಮ್ಮುಖದಲ್ಲಿ ನೇರವೇರಿತು. ರಣಬೀರ್ ಗರ್ಲ್ಫ್ರೆಂಡ್ ಆಗಿರುವ ಆಲಿಯಾ ಭಟ್ ಸಹ ಅಂತಿಮ ವಿಧಿ ವಿಧಾನದಲ್ಲಿ ಭಾಗಿಯಾಗಿದ್ದರು. ಅಂತಿಮ ವಿಧಿ ವಿಧಾನ ನಡೆಯುವಾಗ ಆಲಿಯಾ ಭಟ್ ತಮ್ಮ ಮೊಬೈಲ್ ಫೋನ್ ಹಿಡಿದು ನಿಂತಿದ್ದ ಚಿತ್ರ ಭಾರಿ ವೈರಲ್ ಆಗಿತ್ತು. ಆಲಿಯಾ ಮೊಬೈಲ್ ಬಳಸುತ್ತಿದ್ದುದು ರಿಶಿ ಕಪೂರ್ಗೆ ಮಾಡಿದ ಅವಮಾನ ಎಂದು ನೆಟ್ಟಿಗರು ಆಲಿಯಾ ಭಟ್ನನ್ನು ಟ್ರೋಲ್ ಮಾಡಿದ್ದಾರೆ. ಇನ್ನೊಂದೆಡೆ ಆಲಿಯಾ ಕಪೂರ್ ಕುಟುಂಬಕ್ಕೆ ಲಕ್ಕಿ ಅಲ್ಲ ಎಂದು ಸಹ ತೆಗಳುತ್ತಿದ್ದಾರೆ. ಆದ್ರೆ ಅಲಿಯಾ ಭಟ್ ಮೊಬೈಲ್ ಬಳಸಿದ್ದು ಒಳ್ಳೆಯ ಕೆಲಸಕ್ಕೆ ರಿಷಿ ಕಪೂರ್ ಅಂತಿಮ ಸಂಸ್ಕಾರದ ವಿಧಿ ವಿಧಾನಗಳನ್ನು ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದರು. ಅದರಿಂದ ರಿಷಿ ಕಪೂರ್ ಆಪ್ತರಿಗೆ ಅವರ ಸಂಸ್ಕಾರ ನೋಡುವ ಭಾಗ್ಯ ದೊರೆತಂತಾಯಿತು.
ಮೊಬೈಲ್ ಬಳಸಿ ಟ್ರೋಲ್ ಆದ ಆಲಿಯಾ ಭಟ್..!
Please follow and like us: