ಅಂತರ ಜಿಲ್ಲೆ, ಅಂತರ ರಾಜ್ಯಗಳ ವಾಹನ ಸಂಚಾರಕ್ಕೆ ಅವಕಾಶ

ಬೆಂಗಳೂರು : ರಾಜ್ಯ ಸರ್ಕಾರದಿಂದ ಮೇ.4ರಿಂದ ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಯಂತೆ ಅಂತರ ಜಿಲ್ಲೆ, ಅಂತರ ರಾಜ್ಯಗಳಿಗೆ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದ್ರೇ ಹೀಗೆ ತೆರಳಲು ಆಯಾ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲ್ಲವೇ ಡಿಸಿಪಿಗಳಿಂದ ಪಾಸ್ ಪಡೆದು ಸಂಚರಿಸುವುದು ಕಡ್ಡಾಯವಾಗಿದೆ. ಈ ಕುರಿತಂತೆ ಸುತ್ತೋಲೆ ಹೊರಡಿಸಿರುವಂತ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ ಭಾಸ್ಕರ್, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಚಿಕ್ಕಬಳ್ಳಾಪರ ಮತ್ತು ಕೋಲಾರ ಜಿಲ್ಲೆಗಳನ್ನು ಒಂದು ಯುನಿಟ್ ಎಂದು ವರ್ಗೀಕರಿಸಲಾಗಿದೆ. ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಕಂಪನಿ ನೌಕರರು, ಸಂಸ್ಥೆಗಳ ನೌಕರರು ತಮ್ಮ ಐಡಿ ಕಾರ್ಡ್ ತೋರಿಸಿ ಈ ಜಿಲ್ಲೆಗಳಲ್ಲಿ ಪಾಸ್ ಪಡೆದು ಓಡಾಡಬಹುದಾಗಿದೆ. ಆದ್ರೇ ಈ ಜಿಲ್ಲೆಗಳ ಹೊರತಾಗಿ ಇತರೆ ಜಿಲ್ಲೆಗಳ ಜನರು ತಮ್ಮ ವೈಯಕ್ತಿಕ ವಾಹನದಲ್ಲಿ ಅಂತರ ಜಿಲ್ಲೆ, ಅಂತರ ರಾಜ್ಯಗಳಿಗೆ ತೆರೆಳಲು ಅವಕಾಶ ನೀಡಲಾಗಿದೆ. ಇಂತಹ ವಾಹನಸವಾರರು ಆಯಾ ಜಿಲ್ಲಾಧಿಕಾರಿಗಳು, ಡಿಸಿಪಿ ಮೂಲಕ ಪಾಸ್ ಪಡೆದು ಒಮ್ಮೆ ತೆರಳಲು ಅವಕಾಶ ನೀಡಲಾಗಿದೆ.ಆದ್ರೇ ರಾತ್ರಿ 7 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೆ ಕರ್ಪ್ಯೂ ಜಾರಿಯಲ್ಲಿ ಇರುವ ಕಾರಣ, ಯಾವುದೇ ಸಂಚಾರಕ್ಕೆ ಅನುಮತಿ ಇಲ್ಲ. ಈಗಾಗಲೇ ಅಗತ್ಯ ಸೇವೆ ಸಲ್ಲಿಸುತ್ತಿರುವವರಿಗೆ ಪಾಸ್ ನೀಡಲಾಗಿದೆ. ಅದೇ ಪಾಸ್ ಮುಂದುವರೆಯಲಿದೆ. ಐಟಿ ಬಿಟಿ ಉದ್ಯೋಗಿಗಳಿಗೆ ಆಯಾ ಡಿಸಿಪಿಗಳು, ಡಿಸಿಗಳು ಕರ್ಪ್ಯೂ ಪಾಸ್ ನೀಡಲಿದ್ದಾರೆ

Please follow and like us:

Leave a Reply

Your email address will not be published. Required fields are marked *

Next Post

ಪ್ರಾಣಿಗಳನ್ನು ದತ್ತು ಪಡೆಯಲು ವಿಶೇಷ ಪ್ಯಾಕೇಜ್

Sun May 3 , 2020
ಬೆಂಗಳೂರು : ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನ ಲಾಕ್ ಡೌನ್ ಸಮಯದಲ್ಲಿ ಪ್ರಾಣಿಗಳನ್ನು ದತ್ತು ಪಡೆಯುವವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಲಾಕ್ ಡೌನ್ ಪರಿಣಾಮ ಸದ್ಯ ಉದ್ಯಾನಕ್ಕೆ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿದೆ. ಪ್ರಾಣಿಗಳನ್ನು ದತ್ತು ಪಡೆಯುವ ಮೊತ್ತದ ಆಧಾರದ ಮೇಲೆ ಗಿಫ್ಟ್ ವೋಚರ್, ನಾಮಫಲಕದಲ್ಲಿ ಹೆಸರು ಪ್ರದರ್ಶನ ಮುಂತಾದ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಯಾವ ಪ್ರಾಣಿಗಳನ್ನು ದತ್ತು ಪಡೆಯಬಹುದು ಎಂಬ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಕಾಳಿಂಗ ಸರ್ಪ, ಹೆಬ್ಬಾವುಗಳನ್ನು ವಾರ್ಷಿಕ […]

Advertisement

Wordpress Social Share Plugin powered by Ultimatelysocial