ಮೈಸೂರು: ಮೈಸೂರಿನ ಅಗ್ರಹಾರದ ರಾಮಾನುಜ ರಸ್ತೆ ಮನೆಯೊಂದರ ಬಳಿ ಹಾರುವ ಅಪರೂಪದ ಹಾವೊಂದು ಕಾಣಿಸಿಕೊಂಡಿದೆ. ಎರಡು ದಿನಗಳ ಹಿಂದೆ ರಾಮಾನುಜ ರಸ್ತೆಯಲ್ಲಿರುವ ವೆಂಕಟರಮಣ ಎಂಬುವರ ಮನೆ ಬಳಿ ಈ ಅಪರೂಪದ ಹಾವು ಕಾಣಿಸಿಕೊಂಡಿದೆ. ಮರದಿಂದ ಹಾರಿ ನೆಲಕ್ಕೆ ಬಿದ್ದು ಮತ್ತೆ ನೆಲದಿಂದ ಹಾರಿ ಮನೆಯ ಬಾಗಿಲಿಗೆ ಹಾವು ಜೋತು ಹಾಕಿಕೊಂಡಿದೆ. ಹಾರುವ ಹಾವನ್ನು ಕಂಡು ಮನೆ ಮಂದಿ ಚಕಿತರಾಗಿದ್ದರು. ಬಳಿಕ ಹಾವು ಮನೆಯ ಪಕ್ಕದಲ್ಲಿ ಗಿಡಗಳ ಬಳಿಗೆ ಹೋಗಿದೆ. ಸಹಜವಾಗಿ ಪಶ್ವಿಮಘಟ್ಟದ ಕಾಡಿನಲ್ಲಿ ಹಾರುವ ಹಾವುಗಳು ಜೀವಿಸುತ್ತವೆ. ಎತ್ತರದ ಮರಗಳಿಂದ ಚಿಕ್ಕಮರಗಳಿಗೆ ಈ ಹಾವುಗಳು ಹಾರುತ್ತವೆ. ಹಾರುವಾಗ ಕರಾರುವಕ್ಕಾಗಿ ಆಯತಪ್ಪದೆ ಮರದಿಂದ ಮರಕ್ಕೆ ಈ ಹಾವುಗಳು ಜಿಗಿಯುತ್ತವೆ. ವಿಷಪೂರಿತವಲ್ಲದ ಹಾರುವ ಹಾವು ಅಪರೂಪದ ಪ್ರಭೇದಕ್ಕೆ ಸೇರಿದೆ.
ಅಪರೂಪದ ಹಾರುವ ಹಾವು ಪ್ರತ್ಯಕ್ಷ

Please follow and like us: