ಮುಂಬೈ: ಕೊರೊನಾ ಹಿನ್ನೆಲೆಯಲ್ಲಿ ಸುದೀರ್ಘ ಲಾಕ್ಡೌನ್ನಿಂದ ಆರ್ಥಿಕ ಹೊಡೆತಕ್ಕೆ ಸಿಲುಕಿರುವ ವಿವಿಧ ವಲಯಗಳ ರಕ್ಷಣೆಗೆ ಮುಂದಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್(RBI) ಮ್ಯೂಚುಲ್ ಫಂಡ್ಗಳಿಗೆ ತನ್ನ ವಿಶೇಷ ಸೌಲಭ್ಯವನ್ನು ವಿಸ್ತರಿಸಿದೆ. ಮ್ಯೂಚುಲ್ ಫಂಡ್ಗಳಿಗಾಗಿ ೫೦ ಸಾವಿರ ಕೋಟಿ ರೂಗಳ ವಿಶೇಷ ಸೌಲಭ್ಯ(ಸ್ಪೆಷಲ್ ಲಿಕ್ವಿಡಿಟಿ ಫೆಸಿಲಿಟಿ)ವನ್ನು ಇಂದು ಘೋಷಿಸಿದೆ. ಫ್ಲಾಂಕ್ಲಿನ್ ಟೆಂಪ್ಲೇಷನ್ ಸಂಸ್ಥೆ ತನ್ನ ಆರು ಮ್ಯೂಚಯಲ್ ಫಂಡ್ ಸೌಲಭ್ಯವನ್ನು ರದ್ದುಗೊಳಿಸಿದ ಬೆನ್ನಲ್ಲೇ ಆರ್ಬಿಐಯ ಈ ಸೌಲಭ್ಯ ಪ್ರಕಟಿಸಿರುವುದು ಅನೇಕ ಸಂಸ್ಥೆಗಳಿಗೆ ವರದಾನವಾಗಿದೆ. ಆರ್ಬಿಐಯ ಈ ಸೌಲಭ್ಯವನ್ನು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಸ್ವಾಗತಿಸಿದ್ದಾರೆ.