ನಾವು ಮಾಡಬೇಕಾದ್ದನ್ನು ರಮ್ಯಾ ಮಾಡಿ ತೋರಿಸಿದ್ದಾಳೆ: ಮಾಜಿ ಸಂಸದೆಗೆ ಬಹುಪರಾಕ್​!

 

ಬೆಂಗಳೂರು: ರಾಜ್ಯ ಕಾಂಗ್ರೆಸ್​ನಲ್ಲಿ ಪರಸ್ಪರ ಟ್ವೀಟ್​ ವಾರ್​ ಮುಂದುವರಿದಿದೆ. ಎಂ.ಬಿ.ಪಾಟೀಲ್ ವಿರುದ್ಧ ಡಿಕೆಶಿ ಹೇಳಿಕೆಗೆ ಕಾಂಗ್ರೆಸ್​ನ ಹಿರಿಯ ನಾಯಕರು ಬೇಸರ ವ್ಯಕ್ತಪಡಿಸುತ್ತಿದ್ದು, ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು ಖಂಡಿಸುತ್ತಿರುವ ಕೈ ನಾಯಕರು, ರಮ್ಯ ಹೇಳಿಕೆ ಸರಿಯಿದೆ ಎನ್ನುತ್ತಿದ್ದಾರೆ.

ಎಂ.ಬಿ.ಪಾಟೀಲ್, ಸಿದ್ದರಾಮಯ್ಯ ಹಾಗೂ ಈಶ್ವರ್ ಖಂಡ್ರೆ ಸೇರಿದಂತೆ ಅನೇಕ ಕೈ ಹಿರಿಯ ನಾಯಕರು ಡಿಕೆಶಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಪಕ್ಷದ ಅಧ್ಯಕ್ಷ ಎಂದ ಮಾತ್ರಕ್ಕೆ ಬೇರೆಯವರನ್ನು ಕಡೆಗಣಿಸುವಂತೆ ಮಾತನಾಡುವುದು ಸರಿಯಲ್ಲ. ನಾವು ಮಾಡಬೇಕದನ್ನು ರಮ್ಯಾ ಮಾಡಿ ತೋರಿಸಿದ್ದಾಳೆ. ವಿವಾದವನ್ನು ಮುಂದುವರಿಸಿಕೊಂಡು ಹೋದರೆ ಪಕ್ಷಕ್ಕೆ ಡ್ಯಾಮೇಜ್​ ಆಗಲಿದೆ. ಹೀಗಾಗಿ ಇದನ್ನು ಇಲ್ಲಿಗೆ ಬಿಡದಂತೆ ಹಿರಿಯ ಕಾಂಗ್ರೆಸ್​ ನಾಯಕ ರಣದೀಪ್​ ಸುರ್ಜೇವಾಲಾ ಗಮನಕ್ಕೆ ತರಲು ಹಿರಿಯ ನಾಯಕರು ಪ್ಲಾನ್ ಮಾಡಿದ್ದಾರೆ.

ಚುನಾವಣೆಗೂ ಮುನ್ನವೇ ಕಾಂಗ್ರೆಸ್​ನಲ್ಲಿ ಒಳಬೇಗುದಿ ಭುಗಿಲೆದ್ದಿದೆ. ಡಿಕೆಶಿಗೆ ಮುಗುದಾರ ಹಾಕಲು ಹಿರಿಯ ಕೈ ನಾಯಕರು ಪ್ಲಾನ್ ಮಾಡಿದ್ದಾರೆ. ಒಂದು ರೀತಿಯಲ್ಲಿ ಚುನಾವಣೆಯ ಸಮಯದಲ್ಲಿ ಮನೆಯೊಂದು ಮೂರು ಬಾಗಿಲಾಯಿತು ಎಂಬಂತಿದೆ ಕಾಂಗ್ರೆಸ್ ಪರಿಸ್ಥಿತಿ.

ರಮ್ಯಾ ವಿರುದ್ಧ ಬಿ.ಆರ್.ನಾಯ್ಡು ಮಾಡಿದ್ದ ಟ್ವೀಟ್​ಗೆ ನಟರಾಜ್​ ಗೌಡ ವಿರೋಧ ವ್ಯಕ್ತಪಡಿಸಿದ್ದಾರೆ. ರಮ್ಯಾ ನಮ್ಮ ಹೆಮ್ಮೆ, ನಿಮ್ಮ ಹೋರಾಟವನ್ನು ಬಿಜೆಪಿ ವಿರುದ್ಧ ಮಾಡಿ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ನಿರ್ವಾಹಕ ನಾಯ್ಡುಗೆ ನಟರಾಜ ಗೌಡ ಟಾಂಗ್ ಕೊಟ್ಟಿದ್ದಾರೆ. ರಮ್ಯಾ ಎಐಸಿಸಿ ಸಾಮಾಜಿಕ ಜಾಲತಾಣದ ಅಧ್ಯಕ್ಷಯಾಗಿದ್ದಾಗ ಕೆಪಿಸಿಸಿ ಸೋಷಿಯಲ್ ಮೀಡಿಯಾ ಜವಾಬ್ದಾರಿವನ್ನು ನಾಟರಾಜ್ ಗೌಡ ಅವರು ನಿಭಾಯಿಸುತ್ತಿದ್ದರು.ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಅವರು ತಮ್ಮ ಇಲಾಖೆ ಹಗರಣಗಳ ವಿಚಾರಗಳ ಬಗ್ಗೆ ಯಾರು ಧ್ವನಿ ಎತ್ತಬಾರದು, ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಅವರನ್ನು ಭೇಟಿ ಮಾಡಿದ್ದಾರೆ’ ಎಂಬ ಗಂಭೀರ ಆರೋಪವನ್ನು ಡಿಕೆ ಶಿವಕುಮಾರ್ ಮಾಡಿದ್ದರು. ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಈ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ರಮ್ಯಾ ಅವರು ಟ್ವೀಟ್​ ಮೂಲಕ ಅಸಮಾಧಾನ ಹೊರಹಾಕಿದ್ದರು. ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದಿದ್ದರು. ಇದಾಗಲೇ ಡಿ.ಕೆ.ಶಿವಕುಮಾರ್​ ಅವರ ಹೇಳಿಕೆಗೆ ಕಾಂಗ್ರೆಸ್​ ವಲಯದಲ್ಲಿಯೇ ಭಾರಿ ಅಸಮಾಧಾನ ಶುರುವಾಗಿತ್ತು. ರಮ್ಯಾ ಅವರ ಟ್ವೀಟ್​ನಿಂದಾಗಿ ಕಾಂಗ್ರೆಸ್​ನಲ್ಲಿ ಹೊತ್ತಿರುವ ಕಿಡಿಗೆ ಮತ್ತಷ್ಟು ತುಪ್ಪ ಸುರಿಸಿದಂತಾಗಿತ್ತು. ಇದರ ನಡುವೆ ರಮ್ಯಾ ಅವರು ಕೆಲ ಕಾಂಗ್ರೆಸ್​ ನಾಯಕರು ಹಾಗೂ ಕಾರ್ಯಕರ್ತರು ತೇಜೋವಧೆ ಮಾಡಲು ಮುಂದಾದರು. ಅದಕ್ಕೆ ನಟರಾಜ್ ಗೌಡ ಅವರು ವಿರೋಧ ವ್ಯಕ್ತಪಡಿಸಿ, ನಿಮ್ಮ ಹೋರಾಟವನ್ನು ಬಿಜೆಪಿ ವಿರುದ್ಧ ಮಾಡಿ ಎಂದು ಕಿವಿಮಾತು ಹೇಳಿದ್ದಾರೆ.  

ಬೆಂಗಳೂರು: ರಾಜ್ಯ ಕಾಂಗ್ರೆಸ್​ನಲ್ಲಿ ಪರಸ್ಪರ ಟ್ವೀಟ್​ ವಾರ್​ ಮುಂದುವರಿದಿದೆ. ಎಂ.ಬಿ.ಪಾಟೀಲ್ ವಿರುದ್ಧ ಡಿಕೆಶಿ ಹೇಳಿಕೆಗೆ ಕಾಂಗ್ರೆಸ್​ನ ಹಿರಿಯ ನಾಯಕರು ಬೇಸರ ವ್ಯಕ್ತಪಡಿಸುತ್ತಿದ್ದು, ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ʼತಾಜ್ ಮಹಲ್ʼ ಮುಚ್ಚಿರುವ ಕೋಣೆ ವಿಚಾರ: ಇತಿಹಾಸಕಾರರ ನಿರ್ಧಾರಕ್ಕೆ ಬಿಟ್ಟ ಹೈಕೋರ್ಟ್!

Fri May 13 , 2022
ಆಗ್ರಾದಲ್ಲಿರುವ ವಿಶ್ವವಿಖ್ಯಾತ ತಾಜ್ ಮಹಲ್ ನ ಮುಚ್ಚಿರುವ 22 ಕೋಣೆಗಳನ್ನು ತೆರೆಯುವಂತೆ ಭಾರತೀಯ ಪುರಾತತ್ವ ಸಮೀಕ್ಷೆ ಇಲಾಖೆಗೆ ಸೂಚನೆ ನೀಡುವಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ನ್ಯಾಯಮೂರ್ತಿಗಳಾದ ಸುಭಾಷ್ ವಿದ್ಯಾರ್ಥಿ ಮತ್ತು ದೇವೇಂದ್ರ ಕುಮಾರ್ ಉಪಾಧ್ಯಾಯ ಅವರಿದ್ದ ವಿಭಾಗೀಯ ಪೀಠವು ರಜನೀಶ್ ಸಿಂಗ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ. ತಾಜ್ ಮಹಲ್ ಇತಿಹಾಸಕ್ಕೆ ಸಂಬಂಧಿಸಿದ ವಿಚಾರವಾಗಿದೆ. ಇದಕ್ಕೆ ಸಂಬಂಧಿಸಿದ ಸಮಸ್ಯೆಯು ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವುದಿಲ್ಲ. ಈ […]

Advertisement

Wordpress Social Share Plugin powered by Ultimatelysocial