ಸಾಮಾನ್ಯವಾಗಿ ಪ್ರತಿ ದಿನ ಬೆಳಿಗ್ಗೆ ಮನೆ ಬಾಗಿಲು ತೆರೆಯುತ್ತಿದ್ದಂತೆ ಜಾಗಿಂಗ್ ಹೋಗುವವರೋ, ಪತ್ರಿಕೆ, ಹಾಲು ವಿತರಕರನ್ನು ನೋಡಬಹುದು. ಆದರೆ ಇಲ್ಲೊಬ್ಬ ಮಹಿಳೆ ಮನೆಯ ಬಾಗಿಲು ತೆರೆಯುತ್ತಿದ್ದಂತೆ ದಿಗ್ಭ್ರಾಂತರಾಗಿದ್ದಾರೆ. ಏಕೆಂದರೆ ಅವರ ಮನೆಯ ಮುಂಬಾಗಿಲಲ್ಲಿ ಹೋರಾಟದ ಮನೋಭಾವದಲ್ಲಿದ್ದ ಎರಡು ಮೊಸಳೆ ಕಾಣಿಸಿದೆ. ಫ್ಲೋರಿಡಾದ ಸುಸಾನ್ ಎಂಬುವರಿಗೆ ಬೆಳಗ್ಗೆ ೬:೪೫ಕ್ಕೆ ತಮ್ಮ ಮನೆ ಮುಂಭಾಗದ ಬಾಗಿಲು ಬಡಿದ ಶಬ್ದವಾಗಿದೆ. ಅನಿರೀಕ್ಷಿತ ಅತಿಥಿ ಇರಬಹುದೆಂದು ಬಾಗಿಲು ತೆರೆದಾಗ ಸುಮಾರು ಏಳು ಅಡಿ ಉದ್ದದ ಎರಡು ಮೊಸಳೆಗಳು ಕಾದಾಡುತ್ತಿದ್ದವು. ಒಂದು ಕ್ಷಣ ಬೆಚ್ಚಿ ಬಿದ್ದವರು ಸಾವಧಾನವಾಗಿ ಸುಧಾರಿಸಿಕೊಂಡು ತಮ್ಮ ಮೊಬೈಲ್ ನಲ್ಲಿ ಮೊಸಳೆಗಳ ಕಾದಾಟವನ್ನು ಸೆರೆ ಹಿಡಿದಿದ್ದಾರೆ. ಕೆಲಹೊತ್ತಿನ ಬಳಿಕ ಅಲ್ಲಿಂದ ಹೊರಗೆ ತೆರಳಿದವರು ತಾವು ಕಂಡ ಮೊಸಳೆಗಳ ಕಾದಾಟದ ವಿಡಿಯೋವನ್ನು ನೆಟ್ಟಿಗರಿಗೂ ತೋರಿಸಿದ್ದಾರೆ.
ಈ ದೃಶ್ಯಕ್ಕೆ ಬೆಚ್ಚಿಬಿದ್ದ ಮಹಿಳೆ

Please follow and like us: