ಮಂಗಳೂರು: ಮುಲ್ಕಿಯಲ್ಲಿ ಉದ್ಯಮಿಯನ್ನು ಭೀಕರವಾಗಿ ಹತ್ಯೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಂಗಳೂರಿನ ಮುಲ್ಕಿಯಲ್ಲಿ ಉದ್ಯಮಿಯನ್ನು ನಿನ್ನೆ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.ಸಿ.ಸಿ ಕ್ಯಾಮರಾಲ್ಲಿ ಹತ್ಯೆ ದೃಶ್ಯ ಸೆರೆಯಾಗಿದೆ. ಹಾಡು ಹಗಲಲ್ಲೇ ಅಬ್ದುಲ್ ಲತೀಫ್(38)ಎಂಬವರ ಹತ್ಯೆ ಮಾಡಲಾಗಿತ್ತು. ಚೂರಿಯಿಂದ ಇರಿದು ದುಷ್ಕರ್ಮಿಗಳು ಕೊಲೆಗೈದಿದ್ದಾರೆ.ಕಾರ್ ಮತ್ತು ಬೈಕ್ ನಲ್ಲಿ ಬಂದ ಒಂಬತ್ತು ಮಂದಿ ದುಷ್ಕರ್ಮಿಗಳಿಂದ ಈ ಕೃತ್ಯ ನಡೆದಿದೆ. ಅಮಾನುಷವಾಗಿ ಚೂರಿಯಿಂದ ಇರಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಾಣ ರಕ್ಷಣೆಗೆ ಬ್ಯಾಂಕ್ ಒಳಗೆ ಬರಲು ಪ್ರಯತ್ನಿಸಿದ್ದ ಲತೀಫ್ ನನ್ನುಬ್ಯಾಂಕ್ ಮುಂಭಾಗದಲ್ಲೇ ಚೂರಿಯಿಂದ ಇರಿದ ಹಂತಕರು ಪರಾರಿಯಾಗಿದ್ದಾರೆ.
ಉದ್ಯಮಿಯ ಭೀಕರ ಹತ್ಯೆ

Please follow and like us: