ಸಿಂಗಾಪುರ ಉದ್ಯಾನವನದಲ್ಲಿ ಗಸ್ತು ತಿರುಗಲು ಮತ್ತು ಜನರು ಸಾಮಾಜಿಕ ಅಂತರವನ್ನು ಕಾಪಾಡುತ್ತಿದ್ದಾರೆಯೆ ಎಂದು ಖಚಿತಪಡಿಸಿಕೊಳ್ಳಲು ಮತ್ತು ಅಪ್ಟೌನ್ ಫಂಕ್ ಹಾಡನ್ನು ಹಾಡಲು ಆನ್ಲೈನ್ನಲ್ಲಿ ಸ್ಪಾಟ್ ಎಂಬ ಹಳದಿ ಬಣ್ಣದ ರೊಬೊಟ್ ನಾಯಿಯನ್ನು ನಿಯೋಜಿಸಲಾಗಿದೆ. ಇದು ಉದ್ಯಾನವನದ ಮೂಲಕ ಸಾಗುತ್ತಿರುವ ಕಾಲ್ಪಾನಿಕ ನಾಯಿಮರಿಯಂತೆ ಕಾಣುತ್ತದೆ ಮತ್ತು ಆ ಪ್ರದೇಶಕ್ಕೆ ಭೇಟಿ ನೀಡಿವ ಜನರ ಮೇಲೆ ನಿಗಾ ಇಡಲು ಜೊತೆಗೆ ಜನರ ಸಂಖ್ಯೆಯನ್ನು ಅಂದಾಜು ಮಾಡಲು ಕೆಮರಾವನ್ನು ಅಳವಡಿಸಲಾಗಿದೆ. ನಿಮ್ಮ ಸ್ವಂತ ಸುರಕ್ಷತೆ ಮತ್ತು ಸುತ್ತಮುತ್ತಲಿನ ಜನರ ಸುರಕ್ಷತೆಗಾಗಿ ಕನಿಷ್ಟ ಒಂದು ಮೀಟರ್ ಅಂತರದಲ್ಲಿ ನಿಂತುಕೊಳ್ಳಿ ಧನ್ಯವಾದ ಎಂಬ ಸಂದೇಶವನ್ನು ಈ ರೋಬೋಟ್ ನೀಡುತ್ತದೆ. ಎಲ್ಲಾ ರೀತಿಯ ಭೂಪ್ರದೇಶಗಳ ಮೇಲೆ ಸುಲಭವಾಗಿ ಸಾಗಬಲ್ಲ ಮತ್ತು ಹೈಟೆಕ್ ರಿಮೊಟ್ ಕಂಟ್ರೋಲ್ ಅನ್ನು ಇದು ಹೊಂದಿದೆ. ಜತೆಗೆ ಇದು ಚಕ್ರದ ರೊಬೋಟ್ಗಳು ತಲುಪಲು ಸಾಧ್ಯವಿಲ್ಲದ ಸ್ಥಳಕ್ಕೂ ಸುಲಭವಾಗಿ ಹೋಗಬಹುದಾದ ಸಾಧನವಾಗಿದೆ.
ಉದ್ಯಾನವನದಲ್ಲಿದೆ ರೊಬೊಟ್ ನಾಯಿ

Please follow and like us: