ಕಾಂಕ್ರೀಟ್ ಮಿಕ್ಸರ್‌ನೊಳಗೆ ಕುಳಿತು ಪ್ರಯಾಣಿಸಿದ ಕಾರ್ಮಿಕರು!

ನವದೆಹಲಿ: ಲಾಕ್‌ಡೌನ್‌ನಿಂದಾಗಿ ದೇಶದ ಹಲವು ಭಾಗಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರು ತಮ್ಮ ಮನೆಗಳಿಗೆ ಹಿಂದಿರುಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರವು ಅವಕಾಶ ಕಲ್ಪಿಸುತ್ತಿವೆ. ಅದಕ್ಕೂ ಮುನ್ನವೇ ಕೆಲವು ಜನ ಕಾಂಕ್ರೀಟ್ ಮಿಕ್ಸರ್‌ನೊಳಗೆ ಕುಳಿತು ಪ್ರಯಾಣಿಸುವ ಮಾರ್ಗ ಕಂಡು ಕೊಂಡಿದ್ದಾರೆ. ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಕಾಂಕ್ರೀಟ್ ಮಿಕ್ಸರ್ ವಾಹನದೊಳಗೆ ಕುಳಿತು ೧೮ ಕಾರ್ಮಿಕರು ಪ್ರಯಾಣಿಸುತ್ತಿದ್ದುದು ಕಂಡುಬಂದಿದೆ. ಈ ಕುರಿತು ಎಎನ್‌ಐ ಸುದ್ದಿಸಂಸ್ಥೆ ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ೪೧ ಸೆಕೆಂಡ್‌ಗಳಿರುವ ವಿಡಿಯೊದಲ್ಲಿ ಪೊಲೀಸರು ವಾಹನವನ್ನು ತಡೆದ ಬಳಿಕ ಕಾಂಕ್ರೀಟ್ ಮಿಕ್ಸರ್ ಟ್ಯಾಂಕ್‌ನಿಂದ ಒಬ್ಬೊಬ್ಬರೇ ಹೊರ ಬರುತ್ತಿರುವುದು ಸೆರೆಯಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಇಬ್ಬರು ವೈದ್ಯರ ಹೆಸರನ್ನೇ ಮಗನಿಗಿಟ್ಟ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್..

Sun May 3 , 2020
ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಪ್ರೇಯಸಿ ಕ್ಯಾರಿ ಸೈಮಂಡ್ಸ್ ತಮ್ಮ ಮಗನಿಗೆ ವಿಲ್ಫ್ರೆಡ್ ಲಾರಿ ನಿಕೋಲಸ್ ಜಾನ್ಸನ್ ಎಂದು ಹೆಸರಿಟ್ಟಿದ್ದಾರೆ. ಕೊರೊನ ಸೋಂಕಿನಿಂದ ತಮ್ಮನ್ನು ಕಾಪಾಡಿದ ಇಬ್ಬರು ವೈದ್ಯರಿಗೆ ಬೋರಿಸ್ ಈ ಮೂಲಕ ಗೌರವ ಸಲ್ಲಿಸಿದ್ದಾರೆ. ಮೂರು ದಿನದ ಮಗುವಿನ ಪೋಟೋವನ್ನು ಇನ್ಸ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಸೈಮಂಡ್ಸ್, ತಮ್ಮ ಮಗನ ಹೆಸರಿನ ಆಯ್ಕೆಯ ಬಗ್ಗೆ ವಿವರಿಸಿದ್ದಾರೆ. ಅಲ್ಲದೆ ತನ್ನ ಪತ್ನಿಯ ಹೆರಿಗೆ ಸಮಯದಲ್ಲಿ ಶುಶ್ರೂಷೆ ಮಾಡಿದ ಲಂಡನ್ […]

Advertisement

Wordpress Social Share Plugin powered by Ultimatelysocial