ಕುಡಿದ ಮತ್ತಿನಲ್ಲಿ ಸ್ನೇಹಿತನ ಹತ್ಯೆ

ಕುಡಿದ ಮತ್ತಿನಲ್ಲಿ ಜಗಳ ನಡೆದು ಸ್ನೇಹಿತನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ದಲ್ಲಿ ನಡೆದಿದೆ. ಮಾರುತಿ ನಗರ ನಿವಾಸಿ ಪುರುಷೋತ್ತಮ್ (೩೪) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ವೆಲ್ಟಿಂಗ್ ಕೆಲಸ ಮಾಡುವ ಪುರುಷೋತ್ತಮ್ ಮತ್ತು ಗಿರೀಶ್ ಸ್ನೇಹಿತರಾಗಿದ್ದು, ನೆರೆ ಮನೆ ನಿವಾಸಿಗಳಾಗಿದ್ದಾರೆ. ಇಬ್ಬರು ಅವಿವಾಹಿತರಾಗಿದ್ದರು. ಅಂದು ಗಿರೀಶ್ ಮನೆಯಲ್ಲಿ ಪಾರ್ಟಿ ಮಾಡಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು, ಕುಡಿದ ಮತ್ತಿನಲ್ಲಿ ಪುರುಷೋತ್ತಮ್ ಸ್ನೇಹಿತ ಗಿರೀಶ್ ಮೇಲೆ ಹಲ್ಲೆನಡೆಸಿದ್ಧಾನೆ. ಈ ವಿಚಾರಕ್ಕೆ ಸ್ನೇಹಿತನ ಮೇಲೆ ಕೋಪಗೊಂಡಿದ್ದ ಗಿರೀಶ್, ರಾತ್ರಿ ೮.೪೦ರ ಸುಮಾರಿಗೆ ಬೈಕ್‌ನಲ್ಲಿ ಹೋಗುತ್ತಿದ್ದ  ಸ್ನೇಹಿತನನ್ನು ಮಾರುತಿ ನಗರ ರಸ್ತೆಯಲ್ಲಿ ಅಡ್ಡಗಟ್ಟಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವವಾಗಿ  ಪುರುಷೋತ್ತಮ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಆರೋಪಿ ಗೀರಿಶ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.  ಈ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ:ಕ್ರೈಂ ಬ್ಯೂರೋ ಸ್ಪೀಡ್ ನ್ಯೂಸ್ ಕನ್ನಡ

Please follow and like us:

Leave a Reply

Your email address will not be published. Required fields are marked *

Next Post

ಚರ್ಮ ಕುಶಲ ಕರ್ಮಿಗಳಿಗೆ   ವಿಶೇಷ ಪ್ಯಾಕೇಜ್

Fri May 8 , 2020
ಕೊರೊನಾ ಪರಿಣಾಮ ರಸ್ತೆ ಬದಿಯಲ್ಲಿ ಚರ್ಮ ವೃತ್ತಿಯಲ್ಲಿ ತೊಡಗಿದವರು ಸಂಕಷ್ಟದಲ್ಲಿದ್ದಾರೆ. ಅವರ ಜೀವನೋಪಾಯಕ್ಕೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ ಎಂದು ಡಿಸಿಎಂ ಗೋವಿಂದ್ ಕಾರಜೋಳ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು,  ರಾಜ್ಯದ 11,722 ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ ತಲಾ 5 ಸಾವಿರದಂತೆ ಒಂದು ಬಾರಿ ಪರಿಹಾರವನ್ನು ಸರ್ಕಾರ ನೀಡಿದೆ. ಡಾ.ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಮೂಲಕ ಈ ಫಲಾನುಭವಿಗಳಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ […]

Advertisement

Wordpress Social Share Plugin powered by Ultimatelysocial