ರಾಷ್ಟ್ರಧ್ವಜ ಹಾಗೂ ಹಿಜಾಬ್ ವಿವಾದಕ್ಕೆ ಸದನದ ಕಲಾಪ ಬಲಿಯಾಗುತ್ತಿದ್ದು,

ಈ ನಡುವಲ್ಲೇ ಹಲವು ರಾಜಕೀಯ ನಾಯಕರು ರೈತರ ಕುರಿತ ಸಮಸ್ಯೆಗಳು, ಬಗರ್ ಹುಕುಂ ಅರ್ಜಿದಾರರಿಗೆ ಭೂಮಿ ಮಂಜೂರು, ವಿದ್ಯುತ್ ಸರಬರಾಜು, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ, ನೀರಿನ ಸಮಸ್ಯೆಗಳ ಕುರಿತ ವಿಚಾರಗಳು ಯಾವಾಗ ಪ್ರಸ್ತಾಪವಾಗಲಿದೆ ಎಂದು ಪ್ರಶ್ನಿಸುತ್ತಿದ್ದಾರೆ.ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಮಾತನಾಡಿ, ಕಳೆದ ಅಧಿವೇಶನಲ್ಲಿ ಮತಾಂತರ ನಿಷೇಧ ಕಾಯ್ದೆ ಕುರಿತು ಚರ್ಚೆಯಾಗಿತ್ತು. ಈ ಬಾರಿ ಹಿಜಾಬ್ ವಿವಾದ ಹಾಗೂ ರಾಷ್ಟ್ರಧ್ವಜ ವಿವಾದ ಕುರಿತು ಚರ್ಚೆಯಾಗುತ್ತಿದೆ. ಅಧಿವೇಶನದಲ್ಲಿ ಮುಖ್ಯ ವಿಚಾರಗಳ ಕುರಿತು ಯಾವಾಗ ಚರ್ಚೆಯಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಮಾತನಾಡಿ. ಬಗರ್ ಹುಕುಂ ಭೂಮಿ ಮಂಜೂರು ವಿಚಾರ ಪ್ರಮುಖ ವಿಚಾರವಾಗಿದೆ. ಈ ಹಿಂದೆ ನಾನು ಈ ವಿಚಾರಕ್ಕೆ ಸಂಬಂಧಿಸಿದಂತೆ 130 ಕಿಮೀ ಪಾದಯಾತ್ರೆ ನಡೆಸಿದ್ದೆ. ಅಧಿಕಾರಿಗಳು ಪ್ರಮುಖ ವಿಚಾರಗಳ ಕುರಿತು ಗಮನ ಹರಿಸಬೇಕಿದೆ. ಭೂರಹಿತ ರೈತರಿಗೆ ಬಗೈರ್ ಹುಕುಂ ಭೂಮಿ, ವಿದ್ಯುತ್ ಸರಬರಾಜು, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಮತ್ತು ನೀರಿನ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗಿದೆ. ಹಿಂದಿನ ಅಧಿವೇಶನದಲ್ಲಿ ಧಾರ್ಮಿಕ ಮತಾಂತರದ ವಿಚಾರ ಪ್ರಾಬಲ್ಯ ಸಾಧಿಸಿತ್ತು. ಈ ಬಾರಿ ಹಿಜಾಬ್ ವಿವಾದ, ರಾಷ್ಟ್ರಧ್ವಜ ವಿಚಾರ ಕುರಿಚು ಚರ್ಚೆಗಳಾಗುತ್ತಿವೆ. ಬಗೈರ್ ಹುಕುಂ ಜಮೀನುಗಳ ಮೇಲೆ ಹಲವರು ಸಾಲ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರಕಾರ ರೈತರ ಸಮಸ್ಯೆಗಳು ಮತ್ತು ಉದ್ಯೋಗ ಸೃಷ್ಟಿಯ ಬಗ್ಗೆ ಗಮನಹರಿಸಬೇಕು ಎಂದು ಹೇಳಿದ್ದಾರೆ.ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರು ಮಾತನಾಡಿ, ರೈತರ ಸಮಸ್ಯೆಗಳು, ಅಂತಾರಾಜ್ಯ ಜಲ ವಿವಾದ, ಶಾಲೆ ಬಂದ್ ನಿಂದ ವಿದ್ಯಾರ್ಥಿಗಳು ಎದುರಿಸುತ್ತಿಸುವ ಸಂಕಷ್ಟ ಸೇರಿದಂತೆ ಹಲವು ಸಮಸ್ಯೆಗಳಿವೆ. ಆದರೆ, ಯಾರೊಬ್ಬರೂ ಈ ವಿಚಾರ ಕುರಿತು ಗಮನ ಹರಿಸುತ್ತಿಲ್ಲ ಎಂದು ತಿಳಿಸಿದ್ದಾರೆ.ವಿಧಾನಸಭೆ ಜೆಡಿಎಸ್ ಉಪನಾಯಕ ಬಂಡೆಪ್ಪ ಕಾಶೆಂಪೂರ್ ಮಾತನಾಡಿ, ರಾಷ್ಟ್ರಧ್ವಜ ಕೂಡ ಮುಖ್ಯ, ಆದರೆ ರಾಗಿ, ಭತ್ತಕ್ಕೆ ಬೆಂಬಲ ಬೆಲೆ, ನಿರುದ್ಯೋಗ ಮತ್ತು ಶಾಲೆಗಳ ಬಂದ್ ಸೇರಿದಂತೆ ಇತರೆ ಗಂಭೀರ ಸಮಸ್ಯೆಗಳನ್ನು ಪರಿಹರಿಸುವುದೂ ಮುಖ್ಯವಾಗಿದೆ ಎಂದಿದ್ದಾರೆ.ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ”ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಬಗರ್ ಹುಕುಂ ಜಮೀನು ವಿವಾದವನ್ನು ಮುಂದಿಟ್ಟುಕೊಂಡು ಕೆಲವು ದಶಕಗಳ ಹಿಂದೆ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ಆದರೆ ಈಗಲೂ ಸಮಸ್ಯೆ ಬಗೆಹರಿದಿಲ್ಲ. ರೈತರಿಗೆ ಬೆಳಗ್ಗೆ ಕೇವಲ ಎರಡು ಗಂಟೆ ಮತ್ತು ಸಂಜೆ ಎರಡು ಗಂಟೆ ಮಾತ್ರ ವಿದ್ಯುತ್ ಸಿಗುತ್ತದೆ. ಆದರೆ ಅವರಿಗೆ ಕನಿಷ್ಠ 12 ಗಂಟೆ ಪೂರೈಕೆಯಾಗಬೇಕಿದೆ. ನಾವು ವಾಣಿಜ್ಯಿಕವಾಗಿ ವಿದ್ಯುತ್ ರಫ್ತು ಮಾಡುತ್ತಿರುವಾಗ, ಸರ್ಕಾರವು ರೈತರ ಅಗತ್ಯಗಳನ್ನೂ ಪರಿಗಣಿಸುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

COVID:ಭಾರತವು 30,757 ಹೊಸ ಪ್ರಕರಣಗಳನ್ನು ವರದಿ ಮಾಡಿದೆ, TPR 2.61% ಕ್ಕೆ ಏರಿದೆ;

Thu Feb 17 , 2022
ತರಗತಿಗೆ ಹಾಜರಾಗಲು ಕಾಲೇಜಿಗೆ ಪ್ರವೇಶಿಸುವ ಮೊದಲು ವಿದ್ಯಾರ್ಥಿಗಳು ಉಷ್ಣ ಪರೀಕ್ಷೆಗೆ ಒಳಗಾಗುತ್ತಾರೆ. (ಫೋಟೋ ಕ್ರೆಡಿಟ್: ಪಿಟಿಐ) ಕೊರೊನಾವೈರಸ್ ಲೈವ್ ಅಪ್‌ಡೇಟ್‌ಗಳು: ಕೇಂದ್ರ ಆರೋಗ್ಯ ಸಚಿವಾಲಯದ ಬುಲೆಟಿನ್ ಪ್ರಕಾರ ಭಾರತದಲ್ಲಿ 30,757 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ದೈನಂದಿನ ಧನಾತ್ಮಕತೆಯ ದರವು ಹಿಂದಿನ ದಿನ 2.45 ಶೇಕಡಾದಿಂದ 2.61 ಶೇಕಡಾಕ್ಕೆ ಏರಿದೆ. ಭಾರತದ ಸಕ್ರಿಯ COVID-19 ಕ್ಯಾಸೆಲೋಡ್ ಗುರುವಾರ 3,32,918 ಕ್ಕೆ ಇಳಿದಿದೆ, ಆದರೆ ರಾಷ್ಟ್ರೀಯ COVID ಚೇತರಿಕೆ ದರವು 98.03 […]

Advertisement

Wordpress Social Share Plugin powered by Ultimatelysocial