ಕೇಂದ್ರದಿಂದ ೧ ಕೋಟಿ ಗೆಲ್ಲುವ ಸುವರ್ಣಾವಕಾಶ!..!

ನವದೆಹಲಿ: ಕೊರೊನಾ ವೈರಸ್‌ನಿಂದಾಗಿ ಲಾಕ್‌ಡೌನ್ ಹಿನ್ನಲೆಯಲ್ಲಿ ಮನೆಯಲ್ಲಿ ಕುಳಿತು ಕಾಲ ಕಳೆಯುತ್ತಿರೋ ಜನರು, ಹೆಚ್ಚಾಗಿ ಜ್ಯೂಮ್ ಆ್ಯಪ್ ಅನ್ನು ಹೆಚ್ಚಾಗಿ ಬಳಸೋಕೆ ಶುರು ಮಾಡಿದ್ದರು. ವರ್ಕ್ ಫ್ರಮ್ ಹೋಮ್ ಮಾಡುವ ಪ್ರತಿಷ್ಟಿತ ಕಂಪನಿಗಳ ಸಿಬ್ಬಂದಿ, ಉದ್ಯಮಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಜೂಮ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು ವಿಡಿಯೋ ಕಾನ್ಪರೆನ್ಸ್  ಬಳಕೆ ಮಾಡ್ತಿದ್ರು. ಈ ಜ್ಯೂಮ್ ಆ್ಯಪ್ ಅಷ್ಟೊಂದು ಸೇಫ್ ಅಲ್ಲ. ಬಳಕೆದಾರರ ಮಾಹಿತಿ ಸೋರಿಕೆ ಆಗುತ್ತೆ ಅಂತ ಕಳೆದ ವಾರವಷ್ಟೇ ಕೇಂದ್ರ ಸರ್ಕಾರ ಎಚ್ಚರಿಸಿತ್ತು. ಜೊತೆಗೆ ಮೇಕ್ ಇನ್ ಇಂಡಿಯಾದ ಭಾಗವಾಗಿ ಜ್ಯೂಮ್‌ಗೆ ಪರ್ಯಾಯವಾಗಿ ಹೊಸ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದ್ರೆ, ದೊಡ್ಡ ಮೊತ್ತದ ಬಹುಮಾನ ನೀಡುವುದಾಗಿ ಘೋಷಿಸಿತ್ತು.   ಇದೀಗ ಕೇಂದ್ರ ಸರ್ಕಾರ, ಭಾರತದ ಸ್ಟಾರ್ಟ್ ಅಪ್‌ಗಳಿಗೆ ವಿಡಿಯೋ ಕಾನ್ಫರೆನ್ಸಿಂಗ್ ಆ್ಯಪ್ ಅಭಿವೃದ್ಧಿ ಪಡಿಸುವಂತೆ ಸವಾಲೊಂದನ್ನು ನೀಡಿದೆ. ಈ ಚಾಲೆಂಜ್‌ಗೆ ಇನ್ನೋವೇಷನ್ ಚಾಲೆಂಜ್ ಫಾರ್ ಡೆವಲಪ್‌ಮೆಂಟ್ ಆಫ್ ವಿಡಿಯೋ ಕಾನ್ಫರೆನ್ಸಿಂಗ್ ಸಲ್ಯೂಷನ್ ಅಂತಾ ಹೆಸರಿಡಲಾಗಿದೆ. ಈ ಸ್ಪರ್ಧೆಯ ವಿಜೇತರಿಗೆ ಬರೋಬ್ಬರಿ ೧ ಕೋಟಿ ಮೊತ್ತ ಬಹುಮಾನದ ರೂಪದಲ್ಲಿ ಸಿಗಲಿದೆ. ಡಿಜಿಟಲ್ ಇಂಡಿಯಾ ಯೋಜನೆಯಡಿ ಈ ಆ್ಯಪ್ ಅಭಿವೃದ್ಧಿಪಡಿಸಲು ಸಂಸ್ಥೆಗಳಿಗೆ ಏಪ್ರಿಲ್ ೩೦ರವರೆಗೆ ಡೆಡ್‌ಲೈನ್ ನೀಡಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಹೊಸ ಇತಿಹಾಸ ಸೃಷ್ಟಿ

Wed Apr 22 , 2020
ದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಕಂಡ ಫೇಸ್‌ಬುಕ್, ವಿಶ್ವದ ಅತ್ಯಂತ ದೊಡ್ಡ ಕಂಪನಿಗಳ ಸಾಲಿಗೆ ಬಂದು ನಿಂತಿದೆ. ಸೋಶಿಯಲ್ ಮೀಡಿಯಾದ ದಿಗ್ಗಜ ಫೇಸ್‌ಬುಕ್ ಸಂಸ್ಥೆ, ರಿಲಯನ್ಸ್ ಜಿಯೋನಲ್ಲಿ ರೂ.೪೩,೫೭೪ ಕೋಟಿ ಹೂಡಿಕೆ ಮಾಡುವದರ ಮೂಲಕ ಶೇಕಡಾ ೯.೯೯ ಪಾಲನ್ನು ತನ್ನದಾಗಿಸಿಕೊಳ್ಳುವುದರ ಮೂಲಕ ಹೊಸ ಇತಿಹಾಸ ಬರೆದಿದೆ. ರಿಲಯನ್ಸ್ ಜಿಯೋನಲ್ಲಿ ಹೂಡಿಕೆ ಮಾಡುವುದರ ಮೂಲಕ ಟೆಲಿಕಾಂ ಕ್ಷೇತ್ರಕ್ಕೂ ಲಗ್ಗೆಯಿಟ್ಟಿದೆೆ. ವಿಶೇಷ ಅಂದ್ರೆ ತಂತ್ರಜ್ಞಾನ ಕ್ಷೇತ್ರದಲ್ಲಿ ಅತಿ ಹೆಚ್ಚು ಹೂಡಿಕೆಯಾದ […]

Advertisement

Wordpress Social Share Plugin powered by Ultimatelysocial