ಲಕ್ಷ ಲಕ್ಷ ದುಡಿದು ಪತಿಗೆ ನೀಡಿದರೂ ನಿಲ್ಲದ ಹಣದ ದಾಹ: ವೈದ್ಯನ ಕಿರುಕುಳಕ್ಕೆ ವೈದ್ಯೆ ಆತ್ಮಹತ್ಯೆ!

ಹೈದರಾಬಾದ್: ಗಂಡನ ವರದಕ್ಷಿಣೆ ಕಿರುಕುಳ ತಾಳಲಾರದೆ ವೈದ್ಯೆಯಾಗಿದ್ದ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೈದರಾಬಾದ್‌ನ ಮಲಕಪೇಟೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಮನಕಲಕುವ ಘಟನೆ ನಡೆದಿದೆ.ಗಂಡನೂ ಡಾಕ್ಟರ್​, ಪತ್ನಿಯೂ ಡಾಕ್ಟರ್​.ಹೀಗಿದ್ದರೂ ಗಂಡನ ಹಣದ ದಾಹ ನಿಲ್ಲಲಿಲ್ಲ. ಪದೇ ಪದೇ ತವರಿನಿಂದ ಇನ್ನಷ್ಟು ಹಣವನ್ನು ತರುವಂತೆ ಪೀಡಿಸುತ್ತಿದ್ದ. ಇದರಿಂದ ಬೇಸತ್ತು ಪತ್ನಿ ಡಾ. ಸಪ್ನಾ ಆತ್ಮಹತ್ಯೆಗೆ ಶರಣಾಗಿದ್ದಾರೆ.ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು. ನಲ್ಗೊಂಡದ ದಾಮರಚಾರ್ಲವಾಸಿ ನಿವಾಸಿ ಸಪ್ನಾ ಮೊದಲ ಪತಿಗೆ ವಿಚ್ಛೇದನ ನೀಡಿ 2015ರ ಏಪ್ರಿಲ್​ ತಿಂಗಳಲ್ಲಿ ಕರ್ನೂಲ್​​ನ ನಿವಾಸಿ ಉಸ್ಮಾನಿಯಾ ವೈದ್ಯಕೀಯ ಕಾಲೇಜ್​​ನಲ್ಲಿ ಎಂಡಿಯಾಗಿರುವ ಡಾ.ಶ್ರೀಧರ್​​ ಜತೆ ಎರಡನೇ ಮದುವೆಯಾಗಿದ್ದರು. ಡಾ.ಶ್ರೀಧರ್​ಗೂ ಇದು ಎರಡನೆಯ ಮದುವೆ. ಮದುವೆಯ ಸಂದರ್ಭದಲ್ಲಿ ಸಪ್ನಾ ಮನೆಯವರು 10 ಲಕ್ಷ ರೂ. ನಗದು ಹಾಗೂ 14 ತೊಲ ಚಿನ್ನಾಭರಣ ನೀಡಲಾಗಿತ್ತು.ಇಷ್ಟಾದರೂ ಆತನ ಹಣದ ದಾಹ ನಿಂತಿರಲಿಲ್ಲ. ಒಂದು ವರ್ಷದಿಂದಲೂ ಹೆಂಡತಿಗೆ ವರದಕ್ಷಿಣೆ ವಿಚಾರವಾಗಿ ನಿತ್ಯ ಮಾನಸಿಕ, ದೈಹಿಕ ಕಿರುಕುಳ ನೀಡಲು ಶುರು ಮಾಡಿದ್ದ. ಇದರಿಂದ ಡಾ.ಸಪ್ನಾ ಮೊದಲಿಗೆ ಆತ್ಮಹತ್ಯೆಗೆ ಯತ್ನಿಸಿದ್ದರು. ನಂತರ ಆಕೆಯ ಪಾಲಕರು ಮನೋವೈದ್ಯರ ಬಳಿ ಕರೆದುಕೊಂಡು ಹೋಗಿ ಕೌನ್ಸೆಲಿಂಗ್​ ಮಾಡಿಸಿದ್ದರು. ತಂದೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸರಲ್ಲಿ ದೂರು ಕೂಡ ನೀಡಿದ್ದರು. ಆದರೂ ಕಿರುಕುಳ ಮುಂದುವರೆದಿದ್ದರಿಂದ ಸ್ವಪ್ನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನ್ಯಾಯಯುತ ವಿಚಾರಣೆ ನಡೆಯುವುದಿಲ್ಲ ಎಂಬ ಭಯವು ಸಮಂಜಸವಾಗಿರಬೇಕು ಎಂದು ಕಂಗನಾ ರಣಾವತ್ಗೆ ನ್ಯಾಯಾಲಯ ಹೇಳಿದೆ!!

Fri Mar 18 , 2022
ಅಂಧೇರಿಯ 10ನೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ತಮ್ಮ ಮತ್ತು ಗೀತರಚನೆಕಾರ ಜಾವೇದ್ ಅಖ್ತರ್ ಅವರ ಪ್ರಕರಣಗಳನ್ನು ವರ್ಗಾಯಿಸುವಂತೆ ನಟಿ ಕಂಗನಾ ರಣಾವತ್ ಅವರು ಕೋರಿರುವ ಅರ್ಜಿಗಳ ಕುರಿತು ಎರಡನೇ ಹೆಚ್ಚುವರಿ ಪ್ರಧಾನ ನ್ಯಾಯಾಧೀಶ ಶ್ರೀಧರ್ ಭೋಸ್ಲೆ ಅವರು ಹೊರಡಿಸಿದ ವಿವರವಾದ ಆದೇಶವನ್ನು ಈಗ ಸಾರ್ವಜನಿಕಗೊಳಿಸಲಾಗಿದೆ. ಮಾರ್ಚ್ 9 ರಂದು, ನ್ಯಾಯಾಲಯವು ಎರಡೂ ಅರ್ಜಿಗಳನ್ನು ನಿರಾಕರಿಸಿತು ಮತ್ತು 19 ಪುಟಗಳ ಆದೇಶವು ಈಗ ರನೌತ್ ಅವರ ಅರ್ಜಿಗಳನ್ನು ಏಕೆ ನಿರಾಕರಿಸಲಾಗಿದೆ ಎಂಬುದನ್ನು ವಿವರಿಸುತ್ತದೆ. […]

Advertisement

Wordpress Social Share Plugin powered by Ultimatelysocial