ಕೊರೊನಾ ವಿರುದ್ಧ ಹೋರಾಟ ನಡೆಸುವುದು ಎಸ್‌ಎಸ್‌ಎಲ್ ಸಿಗಿಂತ ದೊಡ್ಡ ಪರೀಕ್ಷೆ

ರಾಜ್ಯದಲ್ಲಿ ಮೇ 3ರವರೆಗೆ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಹೀಗಾಗಿ ಆ ಬಳಿಕ ಪರೀಕ್ಷೆ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ ಅವರು, ಕೊರೊನಾ ವಿರುದ್ಧ ಹೋರಾಟ ನಡೆಸುವುದು ಎಸ್‌ಎಸ್‌ಎಲ್ ಸಿಗಿಂತ ದೊಡ್ಡ ಪರೀಕ್ಷೆ . ಹೀಗಾಗಿ ಲಾಕ್ ಡೌನ್ ಬಳಿಕ ಪರೀಕ್ಷೆ ಯಾವಾಗ ಮಾಡಬೇಕು.ಮಕ್ಕಳಿಗೆ ಎಷ್ಟು ಸಮಯ ಕೊಡಬೇಕೆಂದು ಲಾಕ್ ಡೌನ್ ನಂತರ ನಿರ್ಧರ ಮಾಡಲಾಗುತ್ತೆ. ಕೆಲವರು ಎಸ್‌ಎಸ್‌ಎಲ್ ಸಿ ಪರೀಕ್ಷೆ ನಡೆಸುವುದು ಅನುಮಾನ ಎಂದು ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಬಗ್ಗೆ ಕೆಲ ಪೋಷಕರಲ್ಲೂ ಆತಂಕವಿದೆ. ಆದರೆ, ಮಕ್ಕಳ ಮನಸ್ಸಿನಲ್ಲಿ ಗೊಂದಲವಿಲ್ಲ, ಮೇ.3 ರ ಬಳಿಕ ಪರೀಕ್ಷೆ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುತ್ತೇವೆ ಎಂದು  ಹೇಳಿದರು.

 

Please follow and like us:

Leave a Reply

Your email address will not be published. Required fields are marked *

Next Post

ಅಂತರರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ೮೯% ಕ್ಕೆ ಕುಸಿತ

Sat Apr 25 , 2020
ವಿಶ್ವಸಂಸ್ಥೆ: ಕೊರೊನಾ ಹಿನ್ನೆಯಲ್ಲಿ ಭಾರತಕ್ಕೆ ಬರುವ ಅಂತರರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಏಪ್ರೀಲ್ ತಿಂಗಳಲ್ಲಿ ೮೯% ರಷ್ಟು ಕುಸಿದಿದೆ ಎಂದು ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಘಟನೆ ಹೇಳಿದೆ. ಸೆಪ್ಟೆಂಬರ್ ವೇಳೆಗೆ ವಿಶ್ವದಲ್ಲಿ ವಿಮಾನದಲ್ಲಿ ಸಂಚರಿಸುವ ಅಂತರರಾಷ್ಟ್ರೀಯ ಪ್ರಯಾಣಿಕರ ಪೈಕಿ ೧೦೨ ಕೋಟಿಯಷ್ಟು ಜನ ಕಡಿಮೆಯಾಗಬಹುದು ಎಂದು ಸಂಘಟನೆ ಅಂದಾಜಿಸಿದೆ. ಫೆಬ್ರುವರಿಯಲ್ಲಿ ಅಂತರರಾಷ್ಟ್ರೀಯ  ಪ್ರಯಾಣಿಕರ ಸಂಖ್ಯೆ ೧೩%ರಷ್ಟು ಕುಸಿತ ಕಂಡಿದೆ. ಚೀನಾ ಸೇರಿದಂತೆ ಮೊದಲು ಸೋಂಕು ಕಾಣಿಸಿಕೊಂಡ ದೇಶಗಳು ಅಂತರರಾಷ್ಟ್ರೀಯ  ವಿಮಾನಯಾನಗಳನ್ನು ರದ್ದುಗೊಳಿಸಿದ್ದು […]

Advertisement

Wordpress Social Share Plugin powered by Ultimatelysocial