ಡಕ್‌ಔಟ್ ಆಗಿ ಬಂದ ಪೂಜಾರಾ ಜೊತೆ ಮಾತನಾಡದೇ ಹೊರಟ ದ್ರಾವಿಡ್

Cheteshwar Pujara ಕಳಪೆ ಪ್ರದರ್ಶನ ನೋಡಿ Dravid ಮಾಡಿದ್ದೇನು |speed news

ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಹರಿಣಗಳ ವಿರುದ್ಧ 3 ಟೆಸ್ಟ್ ಪಂದ್ಯಗಳ ಸರಣಿ ಮತ್ತು 3 ಏಕದಿನ ಪಂದ್ಯಗಳ ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿದೆ.

ಮೊದಲಿಗೆ ಇತ್ತಂಡಗಳ ನಡುವೆ ಟೆಸ್ಟ್ ಸರಣಿ ನಡೆಯುತ್ತಿದ್ದು ಚೊಚ್ಚಲ ಟೆಸ್ಟ್ ಪಂದ್ಯ ಈಗಾಗಲೇ ಆರಂಭವಾಗಿದೆ.

ಡಿಸೆಂಬರ್ 26ರ ಬಾಕ್ಸಿಂಗ್ ಡೇ ದಿನದಂದು ಸೆಂಚುರಿಯನ್ ಸೂಪರ್ ಸ್ಪೋರ್ಟ್ ಪಾರ್ಕ್ ಸ್ಟೇಡಿಯಂನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿಯ ಚೊಚ್ಚಲ ಪಂದ್ಯ ಆರಂಭವಾಯಿತು. ಹೀಗೆ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವ ಆಯ್ಕೆಯನ್ನು ಆರಿಸಿಕೊಂಡರು. ಹೀಗೆ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಉತ್ತಮ ಪ್ರದರ್ಶನವನ್ನು ನೀಡಿದರು. ರೋಹಿತ್ ಶರ್ಮಾ ಅನುಪಸ್ಥಿತಿ ಕಾಡದಂತೆ ಜವಾಬ್ದಾರಿಯುತ ಆಟವನ್ನು ಈ ಜೋಡಿ ಆಡಿತು. ಮಯಾಂಕ್ ಅಗರ್ವಾಲ್ 60 ರನ್ ಕಲೆಹಾಕಿದರೆ, ಕೆ ಎಲ್ ರಾಹುಲ್ ಮೊದಲ ದಿನದಾಟದಂತ್ಯಕ್ಕೆ ಔಟ್ ಆಗದೇ 122 ರನ್ ಬಾರಿಸಿ ಟೀಮ್ ಇಂಡಿಯಾ ಮೊದಲ ದಿನದಲ್ಲಿ ಮೇಲುಗೈ ಸಾಧಿಸಲು ಕಾರಣರಾದರು.

ಇನ್ನು ಕೆಎಲ್ ರಾಹುಲ್ ಜತೆ ಸೇರಿ ಉತ್ತಮ ಜತೆಯಾಟವನ್ನು ಆಡಿದ್ದ ಮಯಾಂಕ್ ಅಗರ್ವಾಲ್ 60 ರನ್ ಗಳಿಸಿದ್ದಾಗ ಲುಂಗಿ ಎನ್ ಗಿಡಿ ಎಸೆತಕ್ಕೆ ಎಲ್.ಬಿ.ಡಬ್ಲ್ಯು ಆಗಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಹೀಗೆ ಮಯಾಂಕ್ ಅಗರ್ವಾಲ್ ಔಟ್ ಆದ ಬೆನ್ನಲ್ಲೇ ಮೂರನೇ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರ ಕಣಕ್ಕಿಳಿದರು. ಕಳೆದ ಹಲವಾರು ತಿಂಗಳುಗಳಿಂದ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವುತ್ತಾ ಕಳಪೆ ಫಾರ್ಮ್ ಹೊಂದಿದ್ದರೂ ಕೂಡ ಚೇತೇಶ್ವರ್ ಪೂಜಾರಾಗೆ ದಕ್ಷಿಣ ಆಫ್ರಿಕಾ ವಿರುದ್ಧದ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಅವಕಾಶವನ್ನು ನೀಡಲಾಯಿತು. ಆದರೆ ಚೇತೇಶ್ವರ್ ಪೂಜಾರ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಮತ್ತೆ ಎಡವಿದ್ದಾರೆ. ಅಗರ್ವಾಲ್ ಔಟ್ ಆದ ಬೆನ್ನಲ್ಲೇ ಬಂದ ಅಜಿಂಕ್ಯ ರಹಾನೆ ಲುಂಗಿ ಎನ್ ಗಿಡಿ ಎಸೆದ ಮೊದಲನೇ ಎಸೆತದಲ್ಲಿಯೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಹೀಗೆ ಮೊದಲನೇ ಎಸೆತದಲ್ಲಿಯೇ ಗೋಲ್ಡನ್ ಡಕ್ ಅದ ಚೇತೇಶ್ವರ್ ಪೂಜಾರ ರಾಹುಲ್ ದ್ರಾವಿಡ್ ಎದುರು ಬಂದಾಗ ಕೋಚ್ ದ್ರಾವಿಡ್ ಆತನಿಗೆ ಪ್ರತಿಕ್ರಿಯಿಸಿದ ರೀತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಅದರ ವಿವರ ಮುಂದೆ ಇದೆ ಓದಿ..

ಪೂಜಾರ ಬೆನ್ನುತಟ್ಟಿ ಸುಮ್ಮನೆ ಹೊರಟ ರಾಹುಲ್ ದ್ರಾವಿಡ್:ಹೀಗೆ ಗೋಲ್ಡನ್ ಡಕ್ ಔಟ್ ಆಗುವುದರ ಮೂಲಕ ಮತ್ತೊಮ್ಮೆ ನಿರಾಸೆ ಮೂಡಿಸಿದ ಚೇತೇಶ್ವರ್ ಪೂಜಾರ ರಾಹುಲ್ ದ್ರಾವಿಡ್ ಬಳಿ ಬಂದಾಗ ದ್ರಾವಿಡ್ ಆತನಿಗೆ ಹೆಚ್ಚೇನು ಹೇಳದೇ ಬೆನ್ನು ತಟ್ಟಿ ಹೊರಟಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಚೇತೇಶ್ವರ್ ಪೂಜಾರ ಜತೆ ದ್ರಾವಿಡ್ ನಡೆದುಕೊಂಡ ರೀತಿಗೆ ಮಿಶ್ರ ಪ್ರತಿಕ್ರಿಯೆಗಳು ಬರತೊಡಗಿವೆ.

 

ದ್ರಾವಿಡ್ ನಡೆದುಕೊಂಡ ರೀತಿ ಕುರಿತು ಪ್ರೇಕ್ಷಕರು ಹೇಳುತ್ತಿರುವುದಿಷ್ಟು:

ಇನ್ನು ಚೇತೇಶ್ವರ್ ಪೂಜಾರ ಜತೆ ರಾಹುಲ್ ದ್ರಾವಿಡ್ ನಡೆದುಕೊಂಡ ರೀತಿಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕಳಪೆ ಪ್ರದರ್ಶನ ನೀಡಿದ ಆಟಗಾರನೋರ್ವನ ವಿರುದ್ಧ ಕೋಪ ಮಾಡಿಕೊಳ್ಳದೇ ರಾಹುಲ್ ದ್ರಾವಿಡ್ ಬೆನ್ನು ತಟ್ಟಿದ್ದನ್ನು ಕೆಲ ನೆಟ್ಟಿಗರು ಪ್ರಶಂಸಿಸುತ್ತಿದ್ದಾರೆ. ಆದರೆ ಇನ್ನೂ ಕೆಲ ನೆಟ್ಟಿಗರು ರಾಹುಲ್ ದ್ರಾವಿಡ್ ಏನೂ ಮಾತನಾಡದೇ ಬೆನ್ನು ತಟ್ಟುವುದರ ಮೂಲಕ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಪರೋಕ್ಷವಾಗಿ ಪೂಜಾರ ಕಾಲೆಳೆದಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಹಾಗೂ ದ್ರಾವಿಡ್ ಈ ರೀತಿ ನಡೆದುಕೊಂಡ ನಂತರ ಚೇತೇಶ್ವರ್ ಪೂಜಾರ ಹುಸಿ ನಗೆ ಬೀರಿದ್ದಾರೆ ಎಂದು ಕೂಡ ಕೆಲ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 ಎರಡನೇ ಇನ್ನಿಂಗ್ಸ್‌ನಲ್ಲಿಯೂ ನೆಲಕಚ್ಚಿದರೆ ಮುಂದಿನ ಪಂದ್ಯಗಳಲ್ಲಿ ಅವಕಾಶ ಅನುಮಾನ?

ಇನ್ನು ಚೇತೇಶ್ವರ್ ಪೂಜಾರಾಗೆ ದಕ್ಷಿಣ ಆಫ್ರಿಕಾ ವಿರುದ್ಧದ ಈ ಪಂದ್ಯದಲ್ಲಿ ಅವಕಾಶ ಸಿಕ್ಕಿರುವುದು ದೊಡ್ಡ ವಿಷಯ. ಏಕೆಂದರೆ ತಂಡದಲ್ಲಿ ಈಗಾಗಲೇ ಉತ್ತಮ ಫಾರ್ಮ್ ಹೊಂದಿರುವ ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ಇದ್ದಾರೆ. ಆಗಿದ್ದರೂ ಸಹ ಚೇತೇಶ್ವರ್ ಪೂಜಾರ ಅವಕಾಶವನ್ನು ಪಡೆದುಕೊಂಡಿದ್ದು ಇದೀಗ ಚೊಚ್ಚಲ ಇನ್ನಿಂಗ್ಸ್‌ನಲ್ಲಿ ಮಂಕಾಗಿದ್ದಾರೆ ಹಾಗೂ ದ್ವಿತೀಯ ಇನ್ನಿಂಗ್ಸ್‌ನಲ್ಲಿಯೂ ಇದೇ ರೀತಿ ಪ್ರದರ್ಶನವನ್ನೇನಾದರೂ ಚೇತೇಶ್ವರ್ ಪೂಜಾರಾ ನೀಡಿದರೆ ಮುಂದಿನ ಪಂದ್ಯಗಳಲ್ಲಿ ಅವಕಾಶ ವಂಚಿತರಾಗುವ ಸಾಧ್ಯತೆಗಳೇ ಹೆಚ್ಚಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮೇಲ್ಜಾತಿಯವರು ತಯಾರಿಸಿದ ಬಿಸಿಯೂಟ ತಿನ್ನದೆ ದಲಿತ ವಿದ್ಯಾರ್ಥಿಗಳಿಂದ ಪ್ರತಿರೋಧ

Mon Dec 27 , 2021
ಪಿಥೋರಗಢ: ಪರಿಶಿಷ್ಟ ಜಾತಿಗೆ ಸೇರಿದ ಮಧ್ಯಾಹ್ನದ ಬಿಸಿಯೂಟ ತಯಾರಕಿಯನ್ನು ಕೆಲಸದಿಂದ ತೆಗೆದು ಹಾಕಿ, ಮೇಲ್ಜಾತಿಗೆ ಸೇರಿದ ಅಡುಗೆ ತಯಾರಕಿಯನ್ನು ನೇಮಿಸಿದ್ದಕ್ಕೆ ಪ್ರತಿರೋಧ ತೋರಿರುವ ದಲಿತ ವಿದ್ಯಾರ್ಥಿಗಳು ಊಟವನ್ನು ತ್ಯಜಿಸಿದ್ದಾರೆ. ಉತ್ತರಾಖಂಡದ ಚಂಪಾವತ್‌ ಜಿಲ್ಲೆಯ ಸರ್ಕಾರಿ ಇಂಟರ್‌-ಕಾಲೇಜಿನಲ್ಲಿ ಬಿಸಿಯೂಟದ ವಿಚಾರವಾಗಿ ಮೇಲ್ಜಾತಿ ವಿದ್ಯಾರ್ಥಿಗಳು ಮತ್ತು ದಲಿತ ವಿದ್ಯಾರ್ಥಿಗಳ ನಡುವೆ ಊಟ ನಿರಾಕರಣೆಯ ಹೋರಾಟ ನಡೆದಿದೆ. ಈ ಮೊದಲು ಮಧ್ಯಾಹ್ನದ ಬಿಸಿಯೂಟ ತಯಾರಕಿಯಾಗಿ ಸುಖಿ ದಂಗ್‌ ಎಂಬ ಮಹಿಳೆ ಕೆಲಸ ಮಾಡುತ್ತಿದ್ದರು. ಈಕೆ […]

Advertisement

Wordpress Social Share Plugin powered by Ultimatelysocial