ಕೊರೊನಾ ಸೋಂಕಿತ ಕ್ಯಾನ್ಸರ್ ರೋಗಿಗಳ ಮರಣ ಪ್ರಮಾಣ ಹೆಚ್ಚುವ ಸಾಧ್ಯತೆ

ನ್ಯೂಯಾರ್ಕ್ : ಸಾಮಾನ್ಯ ಕೊರೊನಾ ಸೋಂಕಿತರಿಗಿAತ ಕ್ಯಾನ್ಸರ್ ಇರುವ ಕೊರೊನಾ ಸೋಂಕಿತರ ಮರಣ ಪ್ರಮಾಣ ಹೆಚ್ಚಿರುವ ಸಾಧ್ಯತೆ ಇದೆ ಎಂದು ಅಮೆರಿಕದಲ್ಲಿರುವ ಭಾರತೀಯ ಮೂಲದ ಸಂಶೋಧಕರ ತಂಡ ಹೇಳಿದೆ.
ಅಮೆರಿಕದ ಆಲ್ಬರ್ಟ್ ಐನ್‌ಸ್ಟಿನ್ ಕಾಲೇಜ್ ಆಫ್ ಮೆಡಿಸಿನ್‌ನ ಸಂಶೋಧಕ ವಿಕಾಸ್ ಮೆಹ್ತಾ ”ನಾವು ಕ್ಯಾನ್ಸರ್ ರೋಗಿಗಳಿಗೆ ಸೋಂಕು ಬರದಂತೆ ತಡೆಗಟ್ಟುವುದು ಹೇಗೆ ಎಂಬ ಬಗ್ಗೆ ಸಂಶೋಧನೆ ನಡೆಸುತ್ತಿದ್ದೇವೆ. ಜೊತೆಗೆ ಕೊರೊನಾ ಸೋಂಕು ಕ್ಯಾನ್ಸರ್ ಇರುವವರ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆಯೂ ಕೂಡಾ ನಮ್ಮ ಸಂಶೋಧನೆಗಳು ಬೆಳಕು ಚೆಲ್ಲುತ್ತವೆ” ಎಂದಿದ್ದಾರೆ.
ಈ ಸಂಶೋಧನೆಯು ಕ್ಯಾನ್ಸರ್ ಡಿಸ್ಕವರಿ ಜರ್ನಲ್‌ನಲ್ಲಿ ಪ್ರಕಟವಾಗಿದ್ದು ಸಂಶೋಧನಾ ತಂಡವು ೨೧೮ ಕ್ಯಾನ್ಸರ್ ರೋಗಿಗಳನ್ನು ತನ್ನ ಸಂಶೋಧನೆಗೆ ಒಳಪಡಿಸಿಕೊಂಡಿತ್ತು. ಇವರಿಗೆ ಮಾರ್ಚ್ ೧೮ರಿಂದ ಏಪ್ರಿಲ್ ೨೬ರವರೆಗೆ ಮಾಂಟೆಫೀಯೋರ್ ಎಂಬ ವೈದ್ಯಕೀಯ ಕೇಂದ್ರದಲ್ಲಿ ಕೊರೊನಾ ಪರೀಕ್ಷೆ ನಡೆಸಿತ್ತು. ಈ ಕೊರೊನಾ ಸೋಂಕಿತ ಕ್ಯಾನ್ಸರ್ ರೋಗಿಗಳಲ್ಲಿ ೬೧ ಮಂದಿ ಅಂದರೆ ಶೇಕಡಾ ೨೮ರಷ್ಟು ಮಂದಿ ಸಾವನ್ನಪ್ಪಿದ್ದರು.”ಕ್ಯಾನ್ಸರ್ ಚಿಕಿತ್ಸೆ ಮಾತ್ರವಲ್ಲದೇ ಕೊರೊನಾ ಸೋಂಕಿತ ವ್ಯಕ್ತಿಯ ಸಾವು ವ್ಯಕ್ತಿಯ ವಯಸ್ಸು, ಸೋಂಕಿತನಿಗೆ ಇರುವ ಕಾಯಿಲೆಗಳು ಹಾಗೂ ರೋಗನಿರೋಧಕ ಶಕ್ತಿಯನ್ನೂ ಕೂಡಾ ಆಧರಿಸಿರುತ್ತದೆ.
ಕೋವಿಡ್-೧೯ ಹೊಂದಿರುವ ಕ್ಯಾನ್ಸರ್ ರೋಗಿಯ ಚಿಕಿತ್ಸೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಆದರೆ ಕ್ಯಾನ್ಸರ್ ಕೊರೊನಾ ಸೋಂಕಿತನ ಸಾವಿಗೆ ಕಾರಣವಾಗದ ಹಾಗೆ ನೋಡಿಕೊಳ್ಳುವ ಬಗ್ಗೆ ಗಮನಹರಿಸಬೇಕಿದೆ” ಎಂದು ಮತ್ತೊಬ್ಬ ಸಂಶೋಧಕ ಅಮಿತ್ ವರ್ಮಾ ಅಭಿಪ್ರಾಯಪಟ್ಟಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಪತ್ನಿಯನ್ನೇ ಟ್ರೋಲ್ ಮಾಡಿದ ಇಶಾಂತ್ ಶರ್ಮ ..!

Sat May 2 , 2020
ಲಾಕ್‌ಡೌನ್ ನಡುವೆ ಸ್ಟಾರ್ ನಟ,ನಟಿಯರು, ಕ್ರೀಡಾಪಟುಗಳು ಮನೆಯಲ್ಲಿ ಸೀಲ್‌ಡೌನ್ ಆಗಿ ಕುಟುಂಬದ ಜೊತೆ ಎಂಜಾಯ್ ಮಾಡ್ತಿದಾರೆ. ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಕೂಡ ತಮ್ಮ ಪತ್ನಿ ಪ್ರತಿಮಾರನ್ನು ಕಾಲೆಳೆದಿದ್ದಾರೆ. ಅದು ಯಾವ ಕಾರಣಕ್ಕೆ ಅಂತೀರಾ.. ಟೀಂಇಂಡಿಯಾ ಆಟಗಾರರಾದ ರವಿಚಂದ್ರನ್ ಅಶ್ವಿನ್ ಹಾಗೂ ಜಸ್ಪಿçತ್ ಬೂಮ್ರಾ, ಭುವನೇಶ್ವರ್ ಕುಮಾರ್, ಇಶಾಂತ್ ಶರ್ಮರ ಸಂಪೂರ್ಣ ಚಿತ್ರ ತೋರಿಸದೇ ಕೇವಲ ಬೌಲಿಂಗ್ ಶೈಲಿಯ ನಾಲ್ಕು ಚಿತ್ರಗಳನ್ನು ತೋರಿಸಿ ಇವರನ್ನು ಗುರುತಿಸಿ ಎಂದಿದ್ದಕ್ಕೆ ಶರ್ಮ […]

Advertisement

Wordpress Social Share Plugin powered by Ultimatelysocial