ಬೆಂಗಳೂರು:ಲಾಕ್ಡೌನ್ನಿಂದ ಬಂದ್ ಆಗಿದ್ದ ವಿಮಾನಯಾನ ಶುರುವಾಗಿದೆ. ಇಂದು ರಾಜ್ಯದಲ್ಲಿ ದೇಶಿ ವಿಮಾನಗಳ ಹಾರಾಟ ಪ್ರಾರಂಭವಾಗಿದ್ದು, ಇಂದೋರ್ನಿಂದ ಆಗಮಿಸಿದ ಕುಟುಂಬವೊಂದು ಹೋಟೆಲ್ ಕ್ವಾರಂಟೈನ್ಗೆ ಹೋಗಲು ಹಣವಿಲ್ಲದೆ ಒಂದು ದಿನದಿಂದ ವಿಮಾನ ನಿಲ್ದಾಣದಲ್ಲಿದ್ದು ಪರದಾಡುವಂತಾಗಿದೆ.
ಇಂದೋರ್ನಿಂದ ದೆಹಲಿಗೆ ಆಗಮಿಸಿ ದೆಹಲಿಯಿಂದ ನಿನ್ನೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದ ಐದು ಜನರ ಬಡ ಕುಟುಂಬ ಹೋಟೆಲ್ ಕ್ವಾರಂಟೈನ್ಗೆ ಹಣ ಭರಿಸಲು ಸಾಧ್ಯವಾಗದೆ ಪರಿತಪಿಸುತ್ತಿದೆ. ನಿನ್ನೆಯಿಂದ ವಿಮಾನ ನಿಲ್ದಾಣದ ಒಳಗಡೆ ಇರುವ ಕುಟುಂಬ ಹೊರ ಬರಲು ಕಷ್ಟ ಪಡುತ್ತಿದೆ. ಇತ್ತ ದೆಹಲಿಯಿಂದ ಬಂದ ನನ್ನ ಪತ್ನಿಯನ್ನು ಹೊರಗೆ ಬಿಡುತ್ತಿಲ್ಲ ಎಂದು ಪತಿ ಆರೋಪ ಮಾಡುತ್ತಿದ್ದಾರೆ. ನಮಗೆ ಸರ್ಕಾರ ಸಹಾಯ ಮಾಡ್ತಿಲ್ಲ. ಕ್ವಾರಂಟೈನ್ಗೆ ಹಣವನ್ನು ಸರ್ಕಾರ ಭರಿಸಲಿ ಎಂದು ಪತಿ ವಿಮಾನ ನಿಲ್ದಾಣದಲ್ಲಿ ಮನವಿ ಮಾಡಿದ್ದಾನೆ.
ಕ್ವಾರಂಟೈನ್ಗೆ ಹೋಗಲು ಹಣವಿಲ್ಲದೆ ಕುಟುಂಬದ ಪರದಾಟ

Please follow and like us: