ಉತ್ತರ ಪ್ರದೇಶ: ಉತ್ತರಪ್ರದೇಶದಲ್ಲಿ ಜನಿಸಿದ ಅವಳಿ ಶಿಶುಗಳಿಗೆ ಪೋಷಕರು ಸ್ಯಾನಿಟೈಸರ್ ಹಾಗೂ ಕ್ವಾರಂಟೈನ್ ಎಂದು ಹೆಸರಿಟ್ಟಿದ್ದಾರೆ. ಈ ಹಿಂದೆ ಲಾಕ್ಡೌನ್ ನಡುವೆ ಜನಿಸಿದ ಮಕ್ಕಳಿಗೆ ಕೊರೊನಾ, ಕೋವಿಡ್, ಲಾಕ್ಡೌನ್ ಎಂಬ ಹೆಸರಗಳನ್ನು ಇಟ್ಟಿರುವ ಸುದ್ದಿಗಳನ್ನು ಈ ನೋಡಿದ್ದೇವೆ. ಇನ್ನೂ ತಮ್ಮ ಅವಳಿ ಮಕ್ಕಳಿಗೆ ಹೆಸರಿಟ್ಟಿರುವುದಕ್ಕೆ ಸೂಕ್ತ ಕಾರಣವನ್ನೂ ಪೋಷಕರು ನೀಡಿದ್ದಾರೆ. ಕೊರೊನಾ ವೈರಸ್ನಿಂದ ದೂರ ಇರಲು ಆಗಾಗ ಸ್ಯಾನಿಟೈಸರ್ ಮೂಲಕ ಕೈ ತೊಳೆದುಕೊಳ್ಳಬೇಕಾದ್ದು ಅನಿವಾರ್ಯ. ಹಾಗೆಯೇ ದೂರದ ಊರುಗಳಿಂದ ಬಂದವರು 14 ದಿನಗಳ ಕಾಲ ತಮ್ಮನ್ನ ತಾವು ಕ್ವಾರಂಟೈನ್ಗೆ ಒಳಪಡಿಸಿಕೊಳ್ಳೋದೂ ಅನಿವಾರ್ಯ. ಇದೇ ಕಾರಣಕ್ಕಾಗಿ ತಮ್ಮ ಮಕ್ಕಳಿಗೆ ಸ್ಯಾನಿಟೈಸರ್ ಹಾಗೂ ಕ್ವಾರಂಟೈನ್ ಎಂದು ಹೆಸರಿಡಲಾಗಿದೆ ಎಂದು ಅವಳಿ ಮಕ್ಕಳ ತಂದೆ-ತಾಯಿ ಹೇಳಿದ್ದಾರೆ.
ಕ್ವಾರಂಟೈನ್ ಸಹೋದರ ಸ್ಯಾನಿಟೈಸರ್

Please follow and like us: