ಪುಷ್ಪ’ ಅವತಾರದಲ್ಲಿ ಮಿಂಚಿದ ರವೀಂದ್ರ ಜಡೇಜಾ

ಭಾರತ ಚಿತ್ರರಂಗದ ಅದರಲ್ಲಿಯೂ ವಿಶೇಷವಾಗಿ ದಕ್ಷಿಣ ಭಾರತ ಚಿತ್ರರಂಗದ ಚಿತ್ರಗಳ ಹಾಡುಗಳಿಗೆ ಮತ್ತು ಸಂಭಾಷಣೆಗಳಿಗೆ ಖ್ಯಾತ ಕ್ರಿಕೆಟಿಗರು ವಿಡಿಯೋ ಮಾಡಿ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಳ್ಳುವುದು ಇತ್ತೀಚೆಗಿನ ಟ್ರೆಂಡ್  ಆಗಿಬಿಟ್ಟಿದೆ.ಅಲ್ಲು ಅರ್ಜುನ್   ಸದ್ಯ ‘ಪುಷ್ಪ: ದಿ ರೈಸ್’ ಯಶಸ್ಸಿನಲ್ಲಿದ್ದಾರೆ. ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸಿರುವ ಚಿತ್ರ ಹಿಂದಿಯಲ್ಲೇ ಸುಮಾರು ₹ 80 ಕೋಟಿಗೂ ಅಧಿಕ ಹಣವನ್ನ ಬಾಚಿಕೊಂಡಿದೆ. ಭಾರತ ಕ್ರಿಕೆಟ್ ತಂಡದ ತಾರಾ ಆಟಗಾರ ರವೀಂದ್ರ ಜಡೇಜಾ   ‘ಪುಷ್ಪ’ ಲುಕ್​ನಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ಸೇಮ್​ ಟು ಸೇಮ್​ ಅಲ್ಲು ಅವರ ತಮ್ಮನಂತೆ ‘ಪುಷ್ಪ’ ಲುಕ್​ನಲ್ಲಿ ರವೀಂದ್ರಾ ಜಡೇಜಾ ಕಾಣಿಸಿಕೊಂಡಿದ್ದರು. ಈ ಫೋಟೋ ಕಂಡು ಸ್ವತ ಅಲ್ಲು ಅರ್ಜುನ್​ ಶಾಕ್​ ಆಗಿದ್ದಾರೆ. ಪುಷ್ಪ ಚಿತ್ರದ ‘ತಗ್ಗೆದೆ ಲೇ’ ಡೈಲಾಗಿಗೆ ಭಾರತದ ಪ್ರಮುಖ ಆಲ್ ರೌಂಡರ್ ರವೀಂದ್ರ ಜಡೇಜಾ ಕೂಡ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.  ಅಲ್ಲು ಅರ್ಜುನ್ ರೀತಿಯೇ ರವೀಂದ್ರ ಜಡೇಜಾ ಕೂಡ ಸದ್ಯ ಗಡ್ಡಧಾರಿಯಾಗಿದ್ದು ಆ ಸಂಭಾಷಣೆ ರವೀಂದ್ರ ಜಡೇಜಾಗೆ ಅಚ್ಚುಕಟ್ಟಾಗಿ ಹೊಂದಿಕೊಂಡಿತ್ತು. ಹಾಗೂ ರವೀಂದ್ರ ಜಡೇಜಾರ ಆ ವಿಡಿಯೋ ಸಾಮಾಜಿಕ ಜಾಲ ತಾಣದ ತುಂಬಾ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅವಳಿ ಜವಳಿ ಸೋದರಿಯರು ವಿಷಸೇವಿಸಿ ಆತ್ಮಹತ್ಯೆ|Crime |Speed News Kannada |

Thu Jan 13 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial